AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ನ್ಯಾಯ ಸಿಗದಿದಕ್ಕೆ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ ಕುಟುಂಬದ 26 ಸದಸ್ಯರು

ತ್ಯಾಮಗೊಂಡ್ಲು ಹೋಬಳಿ ತಡಸಿಘಟ್ಟ ಗ್ರಾಮದ ನಿವಾಸಿ ಗಂಗಹನುಮಕ್ಕ ಎಂಬುವವರ ಕುಟುಂಬದ 26 ಸದಸ್ಯರು ನೆಲಮಂಗಲ ತಹಶೀಲ್ದಾರ್ ಕಚೇರಿಯ ಮುಂದೆ ನಿಂತು ದಿಕ್ಕೆ ತೋಚದೆ ದಯಾಮರಣದ ಪತ್ರಬರೆದು ನ್ಯಾಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.

ನೆಲಮಂಗಲ: ನ್ಯಾಯ ಸಿಗದಿದಕ್ಕೆ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ ಕುಟುಂಬದ 26 ಸದಸ್ಯರು
ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ ಕುಟುಂಬದ 26 ಸದಸ್ಯರು
TV9 Web
| Edited By: |

Updated on:Nov 14, 2022 | 3:58 PM

Share

ನೆಲಮಂಗಲ: ತ್ಯಾಮಗೊಂಡ್ಲು ಹೋಬಳಿ ತಡಸಿಘಟ್ಟ ಗ್ರಾಮದ 26 ಜನ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಹಾಕಲು ಮುಂದಾಗಿದ್ದಾರೆ. ತಹಶೀಲ್ದಾರ್ ಕಚೇರಿ ಬಳಿ ಜಮಾಯಿಸಿದ್ದ ಜನರನ್ನು ಕಂಡು ತಹಶೀಲ್ದಾರ್ ಬೆಚ್ಚಿಬಿದ್ದಿದ್ದಾರೆ. ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಹೋಬಳಿ ತಡಸಿಘಟ್ಟ ಗ್ರಾಮದ ನಿವಾಸಿ ಗಂಗಹನುಮಕ್ಕ ಎಂಬುವವರ ಕುಟುಂಬದ 26 ಸದಸ್ಯರು ನೆಲಮಂಗಲ ತಹಶೀಲ್ದಾರ್ ಕಚೇರಿಯ ಮುಂದೆ ನಿಂತು ದಿಕ್ಕೆ ತೋಚದೆ ದಯಾಮರಣದ ಪತ್ರಬರೆದು ಎಲ್ಲರು ಸಹಿಹಾಕಿ ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.

ಇದಕ್ಕೆ ಕಾರಣ ಇವರ ಪಿತ್ರಾರ್ಜಿತ ಆಸ್ತಿ. ಎಸ್ ತಡಸಿಗಟ್ಟ ಗ್ರಾಮದಲ್ಲಿನ ಸರ್ವೆ ನಂ 73ರಲ್ಲಿ ತಮ್ಮ 3ಎಕರೆ 22ಕುಂಟೆ ಜಮೀನು ಇದೇ ಗ್ರಾಮದ ನಿವಾಸಿ ರಾಜಗೋಪಾಲಯ್ಯ ಎಂಬ ವ್ಯಕ್ತಿಗೆ ಗಂಗಹನುಮಕ್ಕನ ತಂದೆ ದಿ. ಭೈರಣ್ಣ 10-06-1981 ರಂದು 3500ರೂಗಳಿಗೆ ವಾಯಿದೇ ಕ್ರಯಕ್ಕೆ ಕೊಟ್ಟಿದ್ದರು. ಆದರೆ ರಾಜಗೋಪಾಲಯ್ಯ ನಕಲಿ ದಾಖಲೆಗಳನ್ನ ಸೃಷ್ಟಿಸಿ ವಾಯಿದೆ ಕ್ರಯಕ್ಕೆ ಕೊಟ್ಟಿದ್ದ ಜಮೀನನ್ನು, ತನ್ನ ರಾಜಕೀಯ ಹಾಗೂ ಹಣದ ಬೆಂಬಲದಿಂದ ಶುದ್ದ ಕ್ರಯ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಇನ್ನು ಇವರ ತಂದೆ ಕಾಲವಾದ ನಂತರ ಜಮೀನು ವಾಪಸ್ ಪಡೆಯಲು ತೆರಳಿದಾಗ ಇವತ್ತು ನಾಳೆ ಅಂತ ಕಾಲಹರಣ ಮಾಡಿಕೊಂಡು 2012ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೆಂ.ಗ್ರಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಿ ಈ ದಾವೆ ವಜಾಗೊಳಿಸಿ ಅವನ ಹೆಸರಿಗೆ ಮಾಡಿಕೊಂಡಿದ್ದಾನಂತೆ. ಬಳಿಕ ಭೈರಣ್ಣನ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ನ್ಯಾಯ ಸಿಗುತ್ತೆ ಅಂತ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಅಲ್ಲೂ ಕೂಡ ರಾಜಗೋಪಾಲಯ್ಯನ ನಕಲಿ ದಾಖಲೆಗಳನ್ನು ನೀಡಿ ಸಾಬೀತು ಪಡಿಸಿದ್ದಾನೆ. ಬಳಿಕ ಸ್ಥಳೀಯ ತ್ಯಾಮಗೊಂಡ್ಲು ಠಾಣೆಗೆ ರಾಜಗೋಪಾಲಯ್ಯನ ಬಳಿ ಇರುವ ಶುದ್ಧ ಕ್ರಯ ಪತ್ರದ ಮೇಲೆ ಇರುವ ಸಹಿ ಅಸಲಿ ಅಥವಾ ನಕಲಿ ಎಂದು ತಿಳಿಯಬೇಕಾದರೆ ಆ ಸಹಿಗಳ ಎಫ್.ಎಸ್.ಎಲ್ ಪರೀಕ್ಷೆಯಾಗುವಂತೆ ದೂರು ಸಲ್ಲಿಸುತ್ತಾರೆ. ಆದರೆ ಅಲ್ಲೂ ಕೂಡ ರಾಜಗೋಪಾಲಯ್ಯನ ಕಾಂಚಾಣ ಸದ್ದು ಮಾಡಿರುತ್ತೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಜಗೋಪಾಲಯ್ಯನ ಬಳಿ ಶುದ್ದಕ್ರಯದ ಪತ್ರಗಳಲ್ಲಿ ಇರುವಂತಹ ಸಹಿ ಅಸಲಿಯೋ ನಕಲಿಯೋ ಎಂದು ತಿಳಿಯ ಬೇಕಾದರೆ ಎಫ್​ಎಸ್​ಎಲ್ ಪರೀಕ್ಷೆ ಆಗಬೇಕು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಕಡೆಯ ಬಾರಿ ಪ್ರಯತ್ನ ಅಂತ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ನೆಲಮಂಗಲ ತಹಶೀಲ್ದಾರ್ ಮುಖಾಂತರ ಅರ್ಜಿ ಸಲ್ಲಿಸಿದ್ದೇವೆ ಎಂದು ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸದ್ಯ ಅರ್ಜಿ ಸ್ವೀಕರಿಸಿರುವ ನೆಲಮಂಗಲ ತಹಶೀಲ್ದಾರ್ ಸಮಸ್ಯೆ ಈಡೇರಿಸುವ ಭರವಸೆ ನೀಡಿದರು. ಅದೇನೆ ಆಗ್ಲಿ ಒಂದು ಕುಟುಂಬ ದಯಾಮರಣಕ್ಕೆ ಅರ್ಜಿ ಸಲ್ಲಿಸುತ್ತೆ ಎಂದರೆ ಅವರಿಗಾಗಿರುವ ನೋವನ್ನ ಸರ್ಕಾರ ಮನದಟ್ಟು ಮಾಡಿಕೊಂಡು ಕೂಡಲೆ ಸಮಸ್ಯೆ ಬಗೆಹರಿಸಬೇಕಿದೆ.

ವರದಿ: ವಿನಾಯಕ್ ಗುರವ್, ಟಿವಿ9 ನೆಲಮಂಗಲ

Published On - 3:58 pm, Mon, 14 November 22

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!