ದೇವನಹಳ್ಳಿ: ಅಭಿವೃದ್ಧಿ ಕಾರ್ಯಗಳಾದ್ರೂ ಸರಿ. ಸಮಾರಂಭಗಳಿದ್ರೂ ಅಷ್ಟೇ. ಶಾಸಕರು, ಸಚಿವರು ಬರ್ತಿದ್ದಾರೆ ಅಂದ್ರೆ ಪೊಲೀಸರು ಮತ್ತು ಅಧಿಕಾರಿಗಳಿಗೆ ತಲೆನೋವು ಶುರುವಾಗುತ್ತೆ. ಯಾಕಂದ್ರೆ ಎಂಟಿಬಿ ನಾಗರಾಜ್(MTB Nagaraj) ಮತ್ತು ಶರತ್ ಬಚ್ಚೇಗೌಡ(Sharath Bache Gowda) ನಡುವೆ ಆ ಮಟ್ಟಿಗೆ ಜಟಾಪಟಿ ಇರುತ್ತೆ. ಇದೀಗ ಜಾತ್ರೆಯಲ್ಲೂ ಕೂಡ ಇಬ್ಬರ ನಡುವೆ ಕಾದಾಟ ನಡೀತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಥೋತ್ಸವದ ಕನ್ವಿನಿಯರ್ ನೇಮಕ ವಿಚಾರಕ್ಕೆ ಜಟಾಪಟಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವೆ ಪ್ರತಿಷ್ಠೆ ವಾರ್ ನಡೀತಾನೇ ಇದೆ. ಈಗ ರಥೋತ್ಸವ ಸಮಿತಿ ರಚನೆಯಲ್ಲಿ ಸಚಿವ ಎಂಟಿಬಿ ಪ್ರಭಾವ ಬಳಸಿ ಅವರ ಬೆಂಬಲಿಗರನ್ನ ನೇಮಕ ಮಾಡಿರೋ ಆರೋಪ ಕೇಳಿ ಬಂದಿದೆ. ಇದೇ ತಿಂಗಳ 16 ರಂದು ಹೊಸಕೋಟೆ ನಗರದ ಇತಿಹಾಸ ಪ್ರಸಿದ್ಧ ಅವಿಮುಕ್ತೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಪ್ರತಿಭಾರಿ ರಥೋತ್ಸವ ನಡೆಯಲು ಶಾಸಕರ ನೇತೃತ್ವದಲ್ಲಿ ಕನ್ವಿನಿನರ್ ನೇಮಕ ಮಾಡಲಾಗ್ತಿತ್ತು. ಶಾಸಕರೇ ಹೆಸರುಗಳನ್ನ ಶಿಫಾರಸ್ಸು ಮಾಡಿ ತಹಶೀಲ್ದಾರ್ ಅಂತಿಮವಾಗಿ ನೇಮಕ ಪ್ರಕಟಿಸ್ತಿದ್ರು. ಆದ್ರೆ ಈಗ ಎಂಟಿಬಿ ತಮ್ಮ ಬೆಂಬಲಿಗರನ್ನ ನೇಮಕ ಮಾಡಿದ್ದಾರಂತೆ. ಇದು ಶರತ್ ಆಕ್ರೋಶಕ್ಕೆ ಕಾರಣವಾಗಿದೆ.
1906 ರಿಂದ ಪ್ರಾರಂಭವಾದ ರಥೋತ್ಸವದ ಖರ್ಚು, ಕಾರ್ಯಕ್ರಮ ನೋಡಿಕೊಳ್ಳಲು ಮುಖ್ಯಸ್ಥರಾಗಿ ಕನ್ವಿನಿನರ್ ನೇಮಕವಾಗ್ತಾರೆ. ಅಂದಿನಿಂದ್ಲೂ ಶಾಸಕರೇ ಕನ್ವಿನಿನರ್ ನೇಮಕಗೊಳಿಸಿ ಶಿಪರಾಸ್ಸು ಮಾಡ್ತಿದ್ದು, ಅದನ್ನೇ ಪರಿಗಣಿಸಲಾಗ್ತಿತ್ತಂತೆ. ಆದ್ರೆ ಈ ಸಲ ಶಾಸಕರಿಗೆ ಹೆಸರು ಬರುತ್ತೆ ಅಂತಾ ಸಚಿವರು ಅವರ ಬೆಂಬಲಿಗರನ್ನ ನೇಮಕ ಮಾಡಿದ್ದಾರಂತೆ. ಶಾಸಕರ ಆರೋಪ ಎಂಟಿಬಿ ಬೆಂಬಲಿಗರನ್ನ ಕೆರಳಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಎಂಟಿಬಿ ಪುತ್ರ ಹಾಗೂ ಬೆಂಬಲಿಗರು ಶಾಸಕರಿಗೆ ತಿರುಗೇಟು ನೀಡಿದ್ರು. ಕನ್ವಿನಿಯರ್ ಆಯ್ಕೆ ಬಗ್ಗೆ ಮೊದಲು ಪುಸ್ತಕ ಓದಿ ತಿಳಿದುಕೊಳ್ಳಿ ಅಂತಾ ಶಾಸಕರಿಗೆ ಟಾಂಗ್ ಕೊಟ್ಟಿದ್ದಾರೆ.
ಒಟ್ನಲ್ಲಿ ಹೊಸಕೋಟೆಯಲ್ಲಿ ಶಾಸಕ ಶರತ್ ಹಾಗೂ ಸಚಿವ ಎಂಟಿಬಿ ನಡುವಿನ ಫೈಟ್ ಹೆಚ್ಚಾಗ್ತಾನೆ ಇದೆ. ಆದ್ರೆ ಈ ಫೈಟ್ ರಥೋತ್ಸವದ ಹೊತ್ತಲ್ಲಿ ಅದ್ಯಾವ ತಿರುವು ಪಡೆಯುತ್ತೋ ಕಾದು ನೋಡ್ಬೇಕು.
ವರದಿ: ನವೀನ್, ಟಿವಿ9, ದೇವನಹಳ್ಳಿ
Published On - 8:32 am, Thu, 5 May 22