ದೇವನಹಳ್ಳಿ: ಈಜಲು ಹೋಗಿ ನಾಲ್ವರು ನೀರುಪಾಲು, ಸ್ನೇಹಿತರ ಮೃತದೇಹಗಳು ಪತ್ತೆ

|

Updated on: May 29, 2023 | 10:39 AM

ಈಜಲು ಹೋಗಿ ನಾಲ್ವರು ಯುವಕರು ನೀರುಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ನಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ದೇವನಹಳ್ಳಿ: ಈಜಲು ಹೋಗಿ ನಾಲ್ವರು ನೀರುಪಾಲು, ಸ್ನೇಹಿತರ ಮೃತದೇಹಗಳು ಪತ್ತೆ
ಮೃತ ಸ್ನೇಹಿತರು
Follow us on

ಬೆಂಗಳೂರು ಗ್ರಾಮಾಂತರ: ಈಜಲು (Swimming) ಹೋಗಿ ನಾಲ್ವರು ಯುವಕರು ನೀರುಪಾಲಾದ (Drwon) ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನೆನ್ನೆ ರಾತ್ರಿ ಇಬ್ಬರ ಮೃತದೇಹ ಹೊರತೆಗೆದಿದ್ದರು. ಇಂದು (ಮೇ.29) ಬೆಳಗ್ಗೆ ಮತ್ತೆ ಶೋಧ ಕಾರ್ಯಾ ನಡೆಸಿದ ಸಿಬ್ಬಂದಿ ಮತ್ತಿಬ್ಬರ ಮೃತದೇಹ ಪತ್ತೆ ಮಾಡಿದ್ದಾರೆ. ಆರ್‌.ಟಿ.ನಗರದ 18 ವರ್ಷದ ಶೇಖ್ ಥೈರ್, ತೋಹಿದ್, ಶಾಹಿದ್, ಮತ್ತು ಪೈಜಲ್ ಮೃತ ಯುವಕರು. ನಾಲ್ವರು ಮೃತ ದೇಹಗಳು ದೇವನಹಳ್ಳಿಯ ಆಕಾಶ್ ಆಸ್ವತ್ರೆಗೆ ರವಾನೆ ಮಾಡಲಾಗಿದೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಯುವಕರು ನೀರು ಪಾಲು

ಶೇಖ್ ಥೈರ್, ತೋಹಿದ್, ಶಾಹಿದ್, ಮತ್ತು ಪೈಜಲ್ ಈ ನಾಲ್ವರು ಸ್ನೇಹಿತರು ನಿನ್ನೆ (ಮೇ.28) ವೀಕೆಂಡ್ ಹಿನ್ನೆಲೆ ಮಧ್ಯಾಹ್ನ ಮೋಜು ಮಸ್ತಿ ಮಾಡಲು ಬೈಕ್​​ಗಳಲ್ಲಿ ನಂದಿಬೆಟ್ಟಕ್ಕೆ ಬಂದಿದ್ದರು. ನಂದಿಬೆಟ್ಟಕ್ಕೆ ಹೋಗಿ ಬರುವಾಗ ಸ್ನೇಹಿತರು ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದರು.

ಇದನ್ನೂ ಓದಿ: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಲವ್, ಬಳಿಕ 4.5 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ..!

ಮೊದಲಿಗೆ ಕೆರೆಯಲ್ಲಿ ಈಜಲು ಇಬ್ಬರು ಸ್ನೇಹಿತರು ಇಳಿದಿದ್ದರು. ಅದೇನಾಯಿತು ಏನೋ ಇಬ್ಬರು ನೀರಿನಲ್ಲಿ ಮುಳುಗಲಾರಂಭಿಸಿದರು. ಇದನ್ನು ಕಂಡ ಇನ್ನಿಬ್ಬರು ಅವರನ್ನು ರಕ್ಷಿಸಲು ಕೆರೆಗೆ ಇಳಿದಿದ್ದಾರೆ. ಆದರೆ ವಿಧಿಯಾಟ ನಾಲ್ವರು ಕೂಡ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.

ಇನ್ನು ಕೆರೆ ಬಳಿ ಇದ್ದ ಬಟ್ಟೆಗಳನ್ನು ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ನ್ವಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.