AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಲವ್, ಬಳಿಕ 4.5 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ..!

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಅದರಲ್ಲೂ ಪ್ರೀತಿ ಹೆಸರಿನಲ್ಲಿ ಮೋಸ ಮಾಡುವವರು, ಮೋಸ ಹೋಗುವವರು ಬಹಳ ಜಾಸ್ತಿ. ಇಲ್ಲೊಬ್ಬ ಬೆಂಗಳೂರಿನ ಮಹಿಳೆ, ಬಾಯ್‌ಫ್ರೆಂಡ್‌ನಿಂದ ಮೋಸ ಹೋಗಿದ್ದಾಳೆ.

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಲವ್, ಬಳಿಕ 4.5 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ..!
ಸಾಂದರ್ಭಿಕ ಚಿತ್ರ
ರಮೇಶ್ ಬಿ. ಜವಳಗೇರಾ
|

Updated on: May 29, 2023 | 8:37 AM

Share

ಬೆಂಗಳೂರು: ಬೆಂಗಳೂರಿನ(Bengaluru) ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ 37 ವರ್ಷದ ಮಹಿಳೆಯೊಬ್ಬರು(Woman) ಡೇಟಿಂಗ್ ಆಪ್‌ನಲ್ಲಿ ಪರಿಚಿತವಾಗಿದ್ದ ವ್ಯಕ್ತಿಯನ್ನು ನಂಬಿ 4.5 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಡೇಟಿಂಗ್ ಆಪ್‌ನಲ್ಲಿ (Dating App) ಪರಿಚಯವಾದ ವ್ಯಕ್ತಿಯೊಬ್ಬನನನ್ನು ನಂಬಿ 4.5 ಲಕ್ಷ ರೂ ಕೊಟ್ಟು, ಇದೀಗ ಮೋಸ ಹೋಗಿದ್ದಾಳೆ. ಇದೀಗ ಮೋಸ ಹೋದ ಮಹಿಳೆ ಹಣ ವಾಪಸ್ ಕೊಡಿಸುವಂತೆ ಬೆಂಗಳೂರು ಸಿಟಿ ಪೊಲೀಸರ(Bengaluru City Police) ಮೊರೆ ಹೋಗಿದ್ದಾಳೆ.

ಸುಮಾರು ಒಂದು ತಿಂಗಳ ಹಿಂದೆ ಟಿಂಡರ್‌ನಲ್ಲಿ ಅದ್ವಿಕ್ ಚೋಪ್ರಾ ಎಂಬ ಮುಂಬೈ ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗುತ್ತದೆ. ಆತನ ಫೇಕ್ ಪ್ರೊಫೈಲ್‌ ನೋಡಿ, ಈ ಮಹಿಳೆ ಆಸಕ್ತಿ ತೋರಿಸಿದ್ದಾಳೆ. ಇಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. ವಾಟ್ಸಾಪ್‌ನಲ್ಲಿ ಮೆಸೇಜ್‌ಗಳು ವಿನಿಮಯವಾಗಿವೆ. ತಾನು ಲಂಡನ್‌ನಲ್ಲಿ ಮೆಡಿಕಲ್ ಓದುತ್ತಿದ್ದೇನೆ ಎಂದು ಆತ ಬಡಾಯಿ ಕೊಚ್ಚಿಕೊಂಡಿದ್ದಾನೆ. ಅದ್ವಿಕ್ ಚೋಪ್ರಾ ಮಾತಿಗೆ ಮರುಳಾದ ಮಹಿಳೆ, ಪ್ರೀತಿಯ ಜಾಲದಲ್ಲಿ ಬಿದ್ದಿದ್ದಾಳೆ.

ಹೀಗೆ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ಮೇಲ್ನೋಟಕ್ಕೆ ಅದ್ವಿಕ್ ಚೋಪ್ರಾ ಆಕೆಯ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದ. ಅಲ್ಲದೇ ಆಕೆಯನ್ನು ಭೇಟಿ ಮಾಡುವ ಇಚ್ಚೆಯನ್ನೂ ವ್ಯಕ್ತಪಡಿಸಿ, ದುಬೈ ಮೂಲಕ ಬೆಂಗಳೂರಿಗೆ ಬರುವುದಾಗಿ ಹೇಳಿದ್ದ. ಇದಾದ ಕೆಲ ದಿನಗಳ ನಂತರ ಅನಾಮಧೇಯ ನಂಬರ್‌ನಿಂದ, ಏರ್‌ಪೋರ್ಟ್ ಅಧಿಕಾರಿಗಳು ಎಂದು ಹೇಳಿ, ಆ ಮಹಿಳೆಗೆ ಕರೆ ಬಂದಿದ್ದು, ಅದ್ವಿಕ್ ಚೋಪ್ರಾ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ಆದ್ರೆ, ಅವರ ಬಳಿ ಹಣವಿಲ್ಲ ಹಾಕಿ ಎಂದು ಹೇಳಿದ್ದಾರೆ. ಬಳಿಕ ಮಹಿಳೆ ಆತನ ನಂಬಿಕೆ ಮೇಲೆ ಹಣ ಹಾಕಿದ್ದಾಳೆ. ಬಳಿಕ ಮಹಿಳೆಗೆ ಅನುಮಾನ ಬಂದಿದ್ದು, ಕೂಡಲೇ ಚೋಪ್ರಾನನ್ನು ಸಂಪರ್ಕಿಸಲು ಪ್ರಯತ್ನಿಸಿದಾಳೆ. ಆದ್ರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟಿಂಡರ್‌ನಲ್ಲಿ ಪ್ರೊಫೈಲನ್ನು ಡಿಲೀಟ್ ಮಾಡಿದ್ದಾನೆ. ಟಿಂಡರ್ ಗ್ರಾಹಕ ಸೇವೆಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮಹಿಳೆ ಬೆಂಗಳೂರು ಸಿಟಿ ಪೊಲೀಸರ ಮೊರೆ ಹೋಗಿದ್ದಾಳೆ.

ಅದ್ವಿಕ್ ಚೋಪ್ರಾ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ಈಗ ಅವರ ಬಳಿ ಹಣವಿಲ್ಲ. ದೆಹಲಿಯಿಂದ ಬೆಂಗಳೂರಿಗೆ ಬರಲು 68,500 ರೂ ಅಗತ್ಯವಿದೆ. ಆ ನಂತರ 1.8 ಲಕ್ಷ ರೂ ಫೀ, 2.06 ಲಕ್ಷ ರೂ ಪ್ರೊಸೆಸಿಂಗ್ ಚಾರ್ಜ್ ಕೊಡಬೇಕು ಎಂದಿದ್ದಾರೆ. ಚೋಪ್ರಾ ಮೇಲೆ ನಂಬಿಕೆಯಿಟ್ಟು, ನಾನು ಕೂಡಲೇ ಹಣ ಕಳುಹಿಸಿದ್ದೇನೆ. ನನ್ನನ್ನು ನೋಡಲು ಚೋಪ್ರಾ ಲಂಡನ್‌ನಿಂದ ಬರುತ್ತಿದ್ದಾರೆ. ಅವರಿಗಾದ ತೊಂದರೆ ತಿಳಿದು ಬಹಳ ಬೇಸರವಾಯಿತು. ಕರೆ ಮಾಡಿದವರ ಬಗ್ಗೆ ಯೋಚಿಸಲೇ ಇಲ್ಲ. ಅವರ ಮಾತನ್ನು ಕುರುಡಾಗಿ ನಂಬಿದೆ. ಏರ್‌ಪೋರ್ಟ್‌ನಿಂದ ಸುರಕ್ಷಿತವಾಗಿ ಬರಲಿ, ಆದಷ್ಟು ಬೇಗ ಭೇಟಿಯಾಗಬಹುದು ಹಣ ಕಳುಹಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು