KIADB ಅಧಿಕಾರಿಗಳಿಂದ ಕೋಟ್ಯಂತರ ರೂ. ಗುಳುಂ ಮಾಡಲು ಪ್ಲ್ಯಾನ್? ರಾತ್ರೋರಾತ್ರಿ ತಲೆ ಎತ್ತಿದೆ ವಿವಿಧ ಹಣ್ಣಿನ ಲಕ್ಷಾಂತರ ಸಸಿಗಳು
ಕೆಐಎಡಿಬಿ ಹಗರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ. ಅದರಂತೆ ಇದೀಗ ಬೆಂಗಳೂರು ಗ್ರಾಮಾಂತರ(Bengaluru rural) ಜಿಲ್ಲೆಯ ನೆಲಮಂಗಲ, ದಾಬಾಸ್‌ಪೇಟೆ ಸುತ್ತಮುತ್ತ ಬ್ರೋಕರ್‌ಗಳ ಜೊತೆ ಸೇರಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲು ಕೆಐಎಡಿಬಿ ಅಧಿಕಾರಿಗಳು ಪ್ಲ್ಯಾನ್ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ಬೆಂಗಳೂರು ಗ್ರಾಮಾಂತರ, ಮೇ.21: ಬ್ರೋಕರ್‌ಗಳ ಜೊತೆ ಸೇರಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲು ಕೆಐಎಡಿಬಿ ಅಧಿಕಾರಿಗಳು ಪ್ಲ್ಯಾನ್ ಮಾಡಿರುವ ಆರೋಪ ಬೆಂಗಳೂರು ಗ್ರಾಮಾಂತರ(Bengaluru rural) ಜಿಲ್ಲೆಯ ನೆಲಮಂಗಲ, ದಾಬಾಸ್‌ಪೇಟೆ ಸುತ್ತಮುತ್ತ ಕೇಳಿಬಂದಿದೆ. ‘ಕೈಗಾರಿಕಾ ಉದ್ದೇಶಕ್ಕೆಂದು ರೈತರ ಭೂಮಿಯನ್ನು ಕೆಐಎಡಿಬಿ(KIADB) ಖರೀದಿಸುತ್ತದೆ. ಆದರೆ, ಸರ್ಕಾರ ಹಣ ನೀಡಿ ಖರೀದಿಸಿದರೂ ಮತ್ತೊಂದು ಮಾರ್ಗದಲ್ಲಿ ಬ್ರೋಕರ್‌ಗಳ ಮುಖಾಂತರ ಕೆಐಎಡಿಬಿ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದಾರೆ.
ರಾತ್ರೋರಾತ್ರಿ ಮರಗಳನ್ನ ನೆಟ್ಟಿ, ಪ್ರತಿ ಮರಕ್ಕೂ ಪರಿಹಾರದ ಹಣ ಗುಳುಂ ಮಾಡೋ ಪ್ಲ್ಯಾನ್
ನೆಲಮಂಗಲ, ದಾಬಾಸ್ ಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಭೂಮಿಗೆ ಸರ್ಕಾರ ವಶಕ್ಕೆ ಪಡೆಯೊದಕ್ಕೆ ನೀಡುವ ಹಣಕ್ಕಿಂತ ಹೆಚ್ಚಿನ ಹಣ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಈ ಹಿನ್ನಲೆ ತೋಟಗಾರಿಕೆ ಇಲಾಖೆ ಮತ್ತು ಕೆಐಎಡಿಬಿ ಅಧಿಕಾರಿಗಳು ಆಂಧ್ರದ ರಾಜಮಂಡ್ರಿ ನರ್ಸರಿಯಿಂದ ರಾತ್ರೋರಾತ್ರಿ ಅಡಿಕೆ, ಮಾವು, ಹುಣಸೆ ಸೇರಿ ಲಕ್ಷಾಂತರ ಸಸಿಗಳನ್ನು ತರಿಸಿ ನೆಟ್ಟು, ಪ್ರತಿ ಗಿಡಕ್ಕೂ ಪರಿಹಾರದ ಹಣವನ್ನು ಗುಳುಂ ಮಾಡುವ ಪ್ಲ್ಯಾನ್ ಇದಾಗಿದೆ.
ಅಮಾಯಕ ರೈತರಿಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಪೀಕಲು ಸಜ್ಜಾದ ಅಧಿಕಾರಿಗಳು
ಒಂದೊಂದು ಸಸಿಗೂ ರೈತರಿಗೆ ಸರ್ಕಾರ ಪರಿಹಾರ ನೀಡುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಒಂದೊಂದು ಎಕರೆಯಲ್ಲಿ ಸಾವಿರಾರು ಮರದ ಸಸಿಗಳನ್ನು ತಂದು ನೆಟ್ಟು, ಬ್ರೋಕರ್‌ಗಳ ಜೊತೆ ಸೇರಿ ಅಧಿಕಾರಿಗಳು ಕೋಟ್ಯಾಂತರ ಹಣ ಗುಳುಂ ಮಾಡಲು ಮುಂದಾಗಿದ್ದಾರೆ. ಅಮಾಯಕ ರೈತರಿಗೆ ಬೋಗಸ್ ದಾಖಲೆ ಸೃಷ್ಟಿಸಿ ಹಣ ಪೀಕಲು ಸಜ್ಜಾಗಿದ್ದು, ಮಾಚನಹಳ್ಳಿ, ಘಂಟೆ ಹೊಸಹಳ್ಳಿ, ಗೆದ್ದಲಹಳ್ಳಿ, ಹುಲಕುಂಟೆ, ಕೋಡಿಪಾಳ್ಯ, ಬಿದಲೂರು, ಹನುಮಂತಪುರ, ಗೊಟ್ಟಿಕೆರೆ, ಬರಗೇನಹಳ್ಳಿ, ಕಾಸರಘಟ್ಟ,ಕಂಬಾಳು, ಓಬಳಾಪುರ ಸೇರಿದಂತೆ ಹಲವು ಗ್ರಾಮದಲ್ಲಿನ ಭೂಮಿ, ಮತ್ತು ಈಗಾಗಲೇ ರಾಜ್ಯದ ಹಲವು ಜಿಲ್ಲೆಯಲ್ಲಿ ಐಎಡಿಬಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಹಣ ಗುಳಂ ಮಾಡಿರುವ ಆರೋಪ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ