AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಗ್ರಾಮಾಂತರ: ಯುಟ್ಯೂಬ್ ಚಾನೆಲ್ ಮಾಲೀಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು

ಆತ ಯೂಟ್ಯೂಬ್ ವಾಹಿನಿಯೊಂದನ್ನ ನಡೆಸಿಕೊಂಡು, ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ, ಆತನ ಜೀವನದಲ್ಲಿ ನಡೆದಿರುವ ಯಾವುದೋ ಒಂದು ಘಟನೆ ಆತನ ಬದುಕಿನ ದಿಕ್ಕನ್ನೆ ಬದಲಾಯಿಸಿದೆ. ಅದೇನಾಯ್ತೋ ಏನೋ? ಚೆನ್ನಾಗಿದ್ದವನು ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರು ಎಳೆದಿದ್ದಾನೆ.

ಬೆಂಗಳೂರು ಗ್ರಾಮಾಂತರ: ಯುಟ್ಯೂಬ್ ಚಾನೆಲ್ ಮಾಲೀಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಖಾಸಗಿ ಯುಟ್ಯೂಬ್ ಚಾನೆಲ್ ಮಾಲೀಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 19, 2024 | 9:23 PM

Share

ಬೆಂಗಳೂರು ಗ್ರಾಮಾಂತರ, ಜು.19: ಖಾಸಗಿ ಯೂಟ್ಯೂಬ್ ವಾಹಿನಿಯ ಮಾಲೀಕನೊಬ್ಬ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala)ತಾಲೂಕಿನ ಧರ್ಮನಾಯಕನ ತಾಂಡ್ಯದ ಊರ ಹೊರಗಿರುವ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥ್(35) ಮೃತ ರ್ದುದೈವಿ. ಇತ ರಾತ್ರಿ ಸಾವಿಗೂ ಮುನ್ನಾ ಬೆಂಗಳೂರಿನ ಮಂಜುನಾಥ‌ನಗರದಲ್ಲಿರುವ ತನ್ನ ಕಚೇರಿಯಲ್ಲಿ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದಾನೆ.‌

ಲೈವ್‌ನಲ್ಲಿ ಪೊಲೀಸರಿಂದ ತನಗಾದ ಅವಮಾನವನ್ನ ತಿಳಿಸಿದ್ದಾನೆ. ಪೊಲೀಸರು ಅಮಾನುಷವಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ಗೋಳಾಡಿದ್ದಾನೆ. ಅಲ್ಲದೆ‌ ತಾನು ಯಾವ ಯಾವ ಕೆಲಸಗಳನ್ನ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.‌ ಬಳಿಕ ತನ್ನ ಕಚೇರಿಯಲ್ಲೇ ಡೆತ್ ನೋಟ್ ಬರೆದಿಟ್ಟು ‘ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಪತ್ನಿ ಡ್ರೆಸ್, ಮೇಕಪ್ ಬಗ್ಗೆ ಗಲಾಟೆ: ಆತ್ಮಹತ್ಯೆಗೆ ಶರಣಾದ ಪತಿ

ಬಳಿಕ ಸ್ನೇಹಿತರ ಬೈಕ್ ತೆಗೆದುಕೊಂಡು ಬಂದು ಧರ್ಮನಾಯಕನ ತಾಂಡ್ಯದಲ್ಲಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ, ಆತ್ಮಹತ್ಯೆಗೆ ನಿಖರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಗೆ ಮುಂದಾಗಿದ್ದಾರೆ. ತನಿಖೆಯ ಬಳಿಕವಷ್ಟೆ ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿ‍ದೆ.

ನ್ಯಾಯ ಕೊಡಿಸಿ ಎಂದು ಮೃತನ ತಾಯಿ ಮನವಿ

ಇನ್ನು ಘಟನೆ ಕುರಿತು ಮಾತನಾಡಿದ ಮೃತ ಮಂಜುನಾಥ್ ತಾಯಿ ಸರೋಜಮ್ಮ, ‘ಆತ ಮಾನಸಿಕವಾಗಿ ನೊಂದಿದ್ದ, ಸ್ಥಳಕ್ಕೆ ಸೋಕೋ ಟೀಮ್ ಆಗಮಿಸಿ ಮೃತದೇಹ ಪರಿಶೀಲನೆ ನಡೆಸಿದೆ. ರಾತ್ರಿ ದಾಸರಹಳ್ಳಿಯ ಮನೆಯಿಂದ ಬೈಕಿನಲ್ಲಿ ಬಂದು ನೀಲಗಿರಿ ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಾವ ವಿಷಯವನ್ನು ನಮಗೆ ತಿಳಿಸಿಲ್ಲ, ಇದು ಆತ್ಮಹತ್ಯೆಯೋ, ಇಲ್ಲ ಕೊಲೆಯೋ ಗೊತ್ತಿಲ್ಲ. ಪೊಲೀಸರು ತನಿಖೆ ಮಾಡಿ ನ್ಯಾಯಕೊಡಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Fri, 19 July 24