AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪತ್ನಿ ಡ್ರೆಸ್, ಮೇಕಪ್ ಬಗ್ಗೆ ಗಲಾಟೆ: ಆತ್ಮಹತ್ಯೆಗೆ ಶರಣಾದ ಪತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತೊಣಚಿನಕುಪ್ಪೆ ಗ್ರಾಮದಲ್ಲಿ ಪತ್ನಿಯ ಡ್ರೆಸ್ ಹಾಗೂ ಮೇಕಪ್ ಬಗ್ಗೆ ಗಲಾಟೆ ನಡೆದು, ಬಳಿಕ ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಪತ್ನಿ ಡ್ರೆಸ್, ಮೇಕಪ್ ಬಗ್ಗೆ ಗಲಾಟೆ: ಆತ್ಮಹತ್ಯೆಗೆ ಶರಣಾದ ಪತಿ
ಆತ್ಮಹತ್ಯೆಗೆ ಶರಣಾದ ಪತಿ
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 16, 2024 | 8:13 PM

Share

ಬೆಂಗಳೂರು ಗ್ರಾಮಾಂತರ, ಜು.16: ಪತ್ನಿಯ ಡ್ರೆಸ್ ಹಾಗೂ ಮೇಕಪ್ ಬಗ್ಗೆ ಗಲಾಟೆ ನಡೆದು, ಬಳಿಕ ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala)ದ ತೊಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಅಸ್ಸಾಂ ಮೂಲದ ಗುಲ್ಜರ್ ಹುಸೇನ್ ಚೌದರಿ (28)ಮೃತ ವ್ಯಕ್ತಿ. ಇತ ಮೂರು ವರ್ಷಗಳ ಹಿಂದೆ ಕುಲ್ಸುಮ್ ಬೇಗಂ ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದ. ಜೀವನ ಸಾಗಿಸುವ ನಿಟ್ಟಿನಲ್ಲಿ ನೆಲಮಂಗಲಕ್ಕೆ ಬಂದು ಖಾಸಗಿ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಮೃತ ಗುಲ್ಜರ್ ಡ್ರೈವರ್ ಆಗಿದ್ದ. ಇದೀಗ ಪತ್ನಿ ನಿದ್ರಿಸುವ ವೇಳೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 ವರ್ಷದ ಅಪ್ರಾಪ್ತ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು: 17 ವರ್ಷದ ಅಪ್ರಾಪ್ತ ಯುವತಿ ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ. ಮದುವೆಯಾಗಿ ಲೈಂಗಿಕವಾಗಿ ಬಳಸಿಕೊಂಡು ವರದಕ್ಷಿಣೆ ಕಿರುಕುಳದ ಜೊತೆ ಸಾಯುವಂತೆ ಬೈಯುತ್ತಿದ್ದ ಎಂದು ಅರೋಪಿಸಿ ಮೃತ ಯುವತಿ ತಾಯಿ ಸವಿತಾ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದೇ ಕುಟುಂಬದ 5ಜನ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಾಂತಿನಗರ ಬಸ್​ ನಿಲ್ದಾಣದ ಮೇಲಿರುವ ರೆಕಾರ್ಡ್​ ಕಚೇರಿಯಲ್ಲೇ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

ಮೂವರ ಬಂಧನ

ಇನ್ನು ಆರೋಪಿಗಳಾದ ಪತಿ ಎನ್ನಲಾದ ಭಾಗಣ್ಣ, ತಂದೆ ಗುಂಡಣ್ಣ, ತಮ್ಮ ಮಲ್ಲು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ ತಾಯಿ ಇಸಾಬಾಯಿ ಹಾಗೂ ಅಕ್ಕ ಗುರುಬಾಯಿ ಎಸ್ಕೇಪ್ ಆಗಿದ್ದಾರೆ. ಕಳೆದ 8 ತಿಂಗಳ ಹಿಂದೆಯಷ್ಟೇ 17 ವರ್ಷದ ಅಪ್ರಾಪ್ತ ಯುವತಿಯನ್ನ ಬಿಜಾಪುರದ ಸಿಂದಗಿಯಲ್ಲಿ ಭಾಗಣ್ಣ ಮದುವೆಯಾಗಿದ್ದ. ಮದುವೆ ವೇಳೆ 20ಗ್ರಾಂ ಚಿನ್ನಾಭರಣ ಹಾಗೂ 40 ಸಾವಿರ ರೂಪಾಯಿ ಪಡೆದಿದ್ದನಂತೆ. ಇತ್ತೀಚೆಗೆ 5 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದ ಅರೋಪ ಕೇಳಿಬಂದಿದೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಇನ್ನುಳಿದ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ