ಶಾಂತಿನಗರ ಬಸ್ ನಿಲ್ದಾಣದ ಮೇಲಿರುವ ರೆಕಾರ್ಡ್ ಕಚೇರಿಯಲ್ಲೇ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ
ಬೆಳಗಾವಿ (Belagavi) ಜಿಲ್ಲೆಯ ಅಥಣಿ ಮೂಲದ ಬಿಎಂಟಿಸಿ(BMTC) ಸಿಬ್ಬಂದಿಯೊಬ್ಬ ಶಾಂತಿನಗರ ಬಸ್ ನಿಲ್ದಾಣದ ಮೇಲಿರುವ ರೆಕಾರ್ಡ್ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ರೆಕಾರ್ಡ್ ರೂಮ್ನ ಬೀಗ ಕೇಳಿದ್ದನಂತೆ. ಇದೀಗ ನೇಣುಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು, ಜು.16: ಶಾಂತಿನಗರ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ(BMTC) ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ(ಸೋಮವಾರ) ಸಂಜೆ ನಡೆದಿದೆ. ಬೆಳಗಾವಿ(Belagavi) ಜಿಲ್ಲೆಯ ಅಥಣಿ ಮೂಲದ ಮಹೇಶ್(42) ಎಂಬಾತ ಇಡಿ ಕಚೇರಿಯ ಪಕ್ಕದಲ್ಲಿರುವ ಬಸ್ ನಿಲ್ದಾಣದ ಮೂರನೇ ಮಹಡಿಯ ಕಚೇರಿಯಲ್ಲಿ ಆತ್ಮಹತ್ಯೆ ಶರಣಾಗಿದ್ದಾನೆ. ನಿನ್ನೆ(ಜು.15) ಬೆಳಗ್ಗೆ ಮೃತ ಮಹೇಶ್, ರೆಕಾರ್ಡ್ ರೂಮ್ನ ಬೀಗ ಕೇಳಿದ್ದನಂತೆ. ಇದೀಗ ಕಚೇರಿಯಲ್ಲಿ ನೇಣುಬಿಗಿದುಕೊಂಡು ಮಹೇಶ್ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಅಗ್ನಿ ಅವಘಡ: ಪತಿ ಸಾವಿನ ಬೆನ್ನಲ್ಲೇ ಪತ್ನಿಯೂ ಕೊನೆಯುಸಿರು
ಉಡುಪಿ: ನಿನ್ನೆ(ಜು.15) ಅಂಬಲಪಾಡಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪತಿ ರಮಾನಂದ ಶೆಟ್ಟಿ ಮೃತಪಟ್ಟಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮನೆಯೊಡತಿ ಅಶ್ವಿನಿ(50) ಕೂಡ ಸಾವನ್ನಪ್ಪಿದ್ದಾರೆ. ಬೆಂಕಿಯಿಂದ ಉಸಿರಾಡಲು ಸಾಧ್ಯವಾಗದೆ ಮೆದುಳು ಹಾಗೂ ಶ್ವಾಸಕೋಶ ಬ್ಲಾಕ್ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಸೆಂಟ್ರಲ್ ಎಸಿ ಶಾರ್ಟ್ ಸರ್ಕ್ಯೂಟ್ನಿಂದ ಬ್ಲಾಸ್ಟ್ ಆಗಿ ಅಗ್ನಿ ಅವಘಡ ಸಂಭವಿಸಿತ್ತು. ಇದೀಗ ಅಗ್ನಿ ಅವಘಡಕ್ಕೆ ದಂಪತಿ ದಾರುಣ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್; ಮನನೊಂದ ವಿದ್ಯಾರ್ಥಿ ಕಳೆನಾಶಕ ಸೇವಿಸಿ ಆತ್ಮಹತ್ಯೆ
ವಿದ್ಯುತ್ ಶಾಕ್ಗೆ ಹಸು ಬಲಿ
ಮೈಸೂರು: ಹೂಟಗಳ್ಳಿಯ ಎಸ್ಆರ್ಎಸ್ ಬಡಾವಣೆಯಲ್ಲಿ ವಿದ್ಯುತ್ ತಂತಿ ತಗುಲಿ ಹಸುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ರವಿಕುಮಾರ್ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಸ್ಥಳಕ್ಕೆ ಮೇಟಗಳ್ಳಿ ಠಾಣೆ ಪೊಲೀಸರು, ಚೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಮುಂಭಾಗದ ವಿದ್ಯುತ್ ಕಂಬದ ಬಳಿ ಹಸು ಕಟ್ಟಲಾಗಿತ್ತು. ಈ ವೇಳೆ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಹಸು ದುರ್ಘಟನೆ ನಡೆದಿದೆ. ಸೂಕ್ತ ಪರಿಹಾರ ನೀಡುವಂತೆ ರವಿಕುಮಾರ್ ಅವರು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Tue, 16 July 24