ಕರ್ನಾಟಕದಲ್ಲಿ ಪ್ರಪ್ರಥಮ ಗ್ರೀನ್​ ಹೈಡ್ರೋಜನ್​ ಎಲೆಕ್ಟ್ರೋಲೈಜರ್​ ಗಿಗಾ ಫ್ಯಾಕ್ಟರಿ ಉದ್ಘಾಟಿಸಿದ ಪ್ರಲ್ಹಾದ್​​ ಜೋಶಿ

ಅಮೆರಿಕ ಮೂಲಕ ಓಮಿಯಮ್​ ಕಂಪನಿ ಸ್ಥಾಪಿಸಿರುವ ಗ್ರೀನ್​ ಹೈಡ್ರೋಜನ್ ಎಲೆಕ್ಟ್ರೋಲೈಜರ್​ ಗಿಗಾ ಫ್ಯಾಕ್ಟರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಇಂದು ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಭಾರತವು ವಿಶ್ವದ ಹಸಿರು ಇಂಧನ ಬೆಳವಣಿಗೆಯ ಎಂಜಿನ್ ಆಗುವ ಸಾಮರ್ಥವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಪ್ರಪ್ರಥಮ ಗ್ರೀನ್​ ಹೈಡ್ರೋಜನ್​ ಎಲೆಕ್ಟ್ರೋಲೈಜರ್​ ಗಿಗಾ ಫ್ಯಾಕ್ಟರಿ ಉದ್ಘಾಟಿಸಿದ ಪ್ರಲ್ಹಾದ್​​ ಜೋಶಿ
ಕರ್ನಾಟಕದಲ್ಲಿ ಪ್ರಪ್ರಥಮ ಗ್ರೀನ್​ ಹೈಡ್ರೋಜನ್​ ಎಲೆಕ್ಟ್ರೋಲೈಜರ್​ ಗಿಗಾ ಫ್ಯಾಕ್ಟರಿ ಉದ್ಘಾಟಿಸಿದ ಪ್ರಹ್ಲಾದ್ ಜೋಶಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Jul 19, 2024 | 5:26 PM

ದೊಡ್ಡಬಳ್ಳಾಪುರ, ಜುಲೈ 19: ಭಾರತವು ವಿಶ್ವದ ಗ್ರೀನ್​ ಹೈಡ್ರೋಜನ್ ಉತ್ಪಾದನೆಯ ಎಂಜಿನ್​​ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಹೇಳಿದ್ದಾರೆ. ದೊಡ್ಡಬಲ್ಲಾಪುರದಲ್ಲಿ ಅಮೆರಿಕಾ ಮೂಲದ ಓಮಿಯಮ್​ ಕಂಪನಿಯು ಸ್ಥಾಪಿಸಿರುವ ದೇಶದ ಮೊಟ್ಟಮೊದಲ ಗ್ರೀನ್​ ಹೈಡ್ರೋಜನ್​ ಎಲೆಕ್ಟ್ರೋಲೈಜರ್​ ಗಿಗಾ ಫ್ಯಾಕ್ಟರಿಯ (Green Hydrogen Electrolyzer Giga Factory) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಅತ್ಯಾಧುನಿಕ ಸೌಲಭ್ಯವು ಕರ್ನಾಟಕ ಮತ್ತು ಭಾರತದಲ್ಲಿ ಹಸಿರು ಇಂಧನ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಗ್ರೀನ್​ ಹೈಡ್ರೋಜನ್ ಉತ್ಪಾದಿಸುವ ಮೂಲಕ ಭಾರತದ ಇಂಧನ ಭದ್ರತೆಗೆ ಉತ್ತೇಜನವನ್ನು ನೀಡುತ್ತದೆ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಸೌರ ಮತ್ತು ಗಾಳಿ ಶಕ್ತಿಯನ್ನು ಸಂಯೋಜಿಸುವುದಾಗಿದೆ. ಎಸ್​ಐಜಿಹೆಚ್​ಟಿ ಕಾರ್ಯಕ್ರಮದ ಅಡಿಯಲ್ಲಿ 10 ಕಂಪನಿಗಳಿಗೆ ವರ್ಷಕ್ಕೆ 4.12 ಲಕ್ಷ ಟನ್​​ ಸ್ಥಾಪನೆಗೆ ಟೆಂಡರ್​​​ ನೀಡಲಾಗಿದೆ.

ಇದನ್ನೂ ಓದಿ: ಮುಡಾ ಹಗರಣದಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಭಾಗಿ: ಪ್ರಲ್ಹಾದ್ ಜೋಶಿ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ.) ಪ್ರಧಾನಿ ನರೇಂದ್ರ ಮೋದಿವರ ದೂರದೃಷ್ಟಿಯನ್ನು ಈಡೇರಿಸಲು ಅವಿರತವಾಗಿ ಕೆಲಸ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ, ನವೀಕರಿಸಬಹುದಾದ ಇಂಧನ (ಆರ್ಇ) ಸ್ಥಾಪಿತ ಸಾಮರ್ಥ್ಯವು 2014 ರಲ್ಲಿ 76 ಗಿಗಾವ್ಯಾಟ್​ನಿಂದ ಜೂನ್ 2024 ರವರೆಗೆ 195 ಗಿಗಾವ್ಯಾಟ್​ ಅಂದರೆ 2.5 ಪಟ್ಟು ಹೆಚ್ಚಾಗಿದೆ. ಸೌರ ವಿದ್ಯುತ್ ಸಾಮರ್ಥ್ಯವು 2014 ರಲ್ಲಿ 3 ಗಿಗಾವ್ಯಾಟ್​ನಿಂದ 30 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಪ್ರಲ್ಹಾದ್​ ಜೋಶಿ ಟ್ವೀಟ್​

ಗ್ರೀನ್​ ಹೈಡ್ರೋಜನ್ ಸಾಮರ್ಥ್ಯವು ಅಪರಿಮಿತವಾಗಿದೆ. ಸಾರಿಗೆ, ಉಕ್ಕು ಉತ್ಪಾದನೆ ಮತ್ತು ಭಾರೀ ಉದ್ಯಮದಂತಹ ವಲಯಗಳನ್ನು ಡಿಕಾರ್ಬೊನೈಸ್ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ವಾಹನಗಳಿಗೆ, ಕಾರ್ಖಾನೆಗಳಿಗೆ ಉಪಯುಕ್ತವಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ಏನೂ ಮಾಡಿಲ್ಲವೆಂದಾದರೆ ಡಿಸಿ ವರ್ಗಾವಣೆ ಏಕೆ, ಸಿದ್ದರಾಮಯ್ಯಗೆ ಜೋಶಿ ಪ್ರಶ್ನೆ

2030 ರವರೆಗೆ ಗ್ರೀನ್ ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ಉತ್ಪಾದನಾ ಘಟಕಗಳಿಗೆ ಐಎಸ್​ಟಿಎಸ್ ಶುಲ್ಕವನ್ನು ಮನ್ನಾ ಮಾಡುವುದರಿಂದ ಉದ್ಯಮ ಕ್ಷೇತ್ರಕ್ಕೆ ಅನುಕೂಲವಾಲಿದೆ ಎಂದು ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಈ ವಲಯವನ್ನು ಉತ್ತೇಜಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ನಾವು ಈ ವಲಯವನ್ನು ಬಲಪಡಿಸುತ್ತಿದ್ದೇವೆ, ಇದರಿಂದಾಗಿ ಭಾರತವು ತನ್ನ ದೇಶೀಯ ಬೇಡಿಕೆಯನ್ನು ಪೂರೈಸುವುದಲ್ಲದೆ, ಜಗತ್ತಿಗೆ ವಿಶ್ವಾಸಾರ್ಹ ಪೂರೈಕೆ ಪಾಲುದಾರನಾಗಿಯೂ ಹೊರಹೊಮ್ಮುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಹಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:24 pm, Fri, 19 July 24