AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devanahalli News: ದೇವನಹಳ್ಳಿಯಲ್ಲಿ ಬ್ಯಾಂಕ್ ಮ್ಯಾನೇಜರ್​​ನಿಂದಲೇ ಗ್ರಾಹಕರ ಖಾತೆಗೆ ಕನ್ನ; 1.89 ಕೋಟಿ ರೂ. ವರ್ಗಾವಣೆ

ಗಣೇಶ್ ಬಾಬು ಮತ್ತು ಜಿತೇಂದ್ರ ಕುಮಾರ್ ಅವರು ಜೂನ್ 3 ರಿಂದ ಜುಲೈ 17 ರ ನಡುವೆ ಆರ್‌ಟಿಜಿಎಸ್ ವಹಿವಾಟಿನ ಮೂಲಕ ಗ್ರಾಹಕರಿಗೆ ತಿಳಿಯದಂತೆ ಹಲವಾರು ಖಾತೆಗಳಿಂದ 1,88,75,000 ರೂ.ಗಳನ್ನು ಇತರ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Devanahalli News: ದೇವನಹಳ್ಳಿಯಲ್ಲಿ ಬ್ಯಾಂಕ್ ಮ್ಯಾನೇಜರ್​​ನಿಂದಲೇ ಗ್ರಾಹಕರ ಖಾತೆಗೆ ಕನ್ನ; 1.89 ಕೋಟಿ ರೂ. ವರ್ಗಾವಣೆ
ದೇವನಹಳ್ಳಿಯಲ್ಲಿ ಬ್ಯಾಂಕ್ ಮ್ಯಾನೇಜರ್​​ನಿಂದಲೇ ಗ್ರಾಹಕರ ಖಾತೆಗೆ ಕನ್ನ
TV9 Web
| Updated By: Ganapathi Sharma|

Updated on: Jul 22, 2023 | 4:21 PM

Share

ದೇವನಹಳ್ಳಿ: ಬ್ಯಾಂಕ್ ಮ್ಯಾನೇಜರ್​ ಹಾಗೂ ಬ್ಯಾಂಕ್ ಸಹಾಯಕರೊಬ್ಬರು ಗ್ರಾಹಕರ ಖಾತೆಯಿಂದ ಸುಮಾರು 1.89 ಕೋಟಿ ರೂ.ಗಳನ್ನು ಅವರ ಅನುಮತಿಯಿಲ್ಲದೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಚನ್ನರಾಯಪಟ್ಟಣ (Channarayapatna) ಠಾಣೆ ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಗಣೇಶ್ ಬಾಬು ಮತ್ತು ಜಿತೇಂದ್ರ ಕುಮಾರ್ ಚನ್ನರಾಯಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಗಣೇಶ್ ಬಾಬು ಮತ್ತು ಜಿತೇಂದ್ರ ಕುಮಾರ್ ಅವರು ಜೂನ್ 3 ರಿಂದ ಜುಲೈ 17 ರ ನಡುವೆ ಆರ್‌ಟಿಜಿಎಸ್ ವಹಿವಾಟಿನ ಮೂಲಕ ಗ್ರಾಹಕರಿಗೆ ತಿಳಿಯದಂತೆ ಹಲವಾರು ಖಾತೆಗಳಿಂದ 1,88,75,000 ರೂ.ಗಳನ್ನು ಇತರ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರಾದ ರಾಮಕ್ಕ, ಪಾಪಮ್ಮ, ಚೈತ್ರಾ ಯಾದವ್, ಕಿಶೋರ್ ಮತ್ತು ವೆಂಕಟಪ್ಪ ಅವರ ಖಾತೆಯಿಂದ ಹಣ ವರ್ಗಾವಣೆಗೊಂಡಿದೆ. ಹಣ ವರ್ಗಾವಣೆಗೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರು ಬ್ಯಾಂಕ್‌ಗೆ ಧಾವಿಸಿದ್ದರು.

ಇದನ್ನೂ ಓದಿ: ಬ್ಯಾಂಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರು ಅರೆಸ್ಟ್: ಪೊಲೀಸ್ ಸಿಬ್ಬಂದಿಗೆ ನಗದು ನೀಡಿ, ಮೆಚ್ಚುಗೆ ಸೂಚಿಸಿದ ಡಿವೈಎಸ್ಪಿ

ಗ್ರಾಹಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಗಣೇಶ್ ಬಾಬು ಮತ್ತು ಜಿತೇಂದ್ರ ಕುಮಾರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ