ಪುಡಿ ರೌಡಿಗಳ ಹಾವಳಿ: ಠಾಣೆಗೆ ಕರೆಸಿ ವಾರ್ನ್​​ ಮಾಡಿದ ಹೆಚ್ಚುವರಿ ಎಸ್​ಪಿ ಪುರುಷೋತ್ತಮ್

ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 102 ರೌಡಿಶೀಟರ್​ಗಳ ಪೈಕಿ 46 ರೌಡಿಶೀಟರ್​​ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಅಡಿಷನಲ್ SP ಪುರುಷೋತ್ತಮ್ ಫುಲ್ ಗ್ರಿಲ್​ ಮಾಡಿದ್ದಾರೆ. ಏರಿಯಾದಲ್ಲಿ ಲಾಂಗು, ಮಚ್ಚು ಹಿಡಿದು ಓಡಾಡದಂತೆ ರೌಡಿಶೀಟರ್​​ಗಳಿಗೆ ವಾರ್ನ್​​ ಮಾಡಿದ್ದಾರೆ.

Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on:Jul 23, 2023 | 3:28 PM

ಬೆಂಗಳೂರು ಗ್ರಾಮಾಂತರ, ಜುಲೈ 23: ಏರಿಯಾದಲ್ಲಿ ಹವಾ ಮೆಂಟೇನ್ ಮಾಡಲು ಲಾಂಗು, ಮಚ್ಚುಗಳನ್ನು ಹಿಡಿದು ಓಡಾಡುತ್ತಿದ್ದ ರೌಡಿಶೀಟರ್​(Rowdysheeter) ಗಳನ್ನು ಆನೇಕಲ್​ ಠಾಣೆಗೆ ಕರೆಸಿದ ಅಡಿಷನಲ್ SP ಪುರುಷೋತ್ತಮ್ ಎಚ್ಚರಿಕೆ ನೀಡಿದ್ದಾರೆ. ಆನೇಕಲ್ ಉಪವಿಭಾಗದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಕಳೆದೊಂದು ತಿಂಗಳಿಂದ ಪೊಲೀಸರ ನಿದ್ದೆಗೆಡಿಸಿದ್ದರು.

ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 102 ರೌಡಿಶೀಟರ್​ಗಳ ಪೈಕಿ 46 ರೌಡಿಶೀಟರ್​​ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಫುಲ್ ಗ್ರಿಲ್​ ಮಾಡಲಾಗಿದೆ. ಭೂಮಾಫಿಯಾ, ಹಫ್ತಾ ವಸೂಲಿ, ಗಲಾಟೆ, ಬೆದರಿಕೆ ಹಾಕದಂತೆ ಎಚ್ಚರಿಕೆ ನಿಡಿದ್ದಾರೆ. ಜೊತೆಗೆ ಠಾಣಾ ಪೊಲೀಸರಿಗೂ ಹೆಚ್ಚುವರಿ SP ಪುರುಷೋತ್ತಮ್ ವಾರ್ನ್​ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಕೇಸ್: ಪ್ರಮುಖ ಆರೋಪಿ ಪತ್ತೆಗೆ ಲುಕ್​​ಔಟ್​ ನೋಟಿಸ್​​ ಜಾರಿಗೆ ಸಿದ್ಧತೆ

ತಿಂದ ಮನೆಗೆ ಕನ್ನ ಹಾಕಿದ ಖದೀಮರ ಬಂಧನ

ಆನೇಕಲ್: ತಿಂದ ಮನೆಗೆ ಖದೀಮರು ಕನ್ನ ಹಾಕಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್​ನಲ್ಲಿ ನಡೆದಿದೆ. ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೋಲೀಸರ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಮಹೇಂದ್ರ ಸಿಂಗ್, ಜಗಮಲ್ ಸಿಂಗ್​ನನ್ನು ಬಂಧಿಸಿದ್ದಾರೆ. ಆರೋಪಿಗಳಿಬ್ಬರು ರಾಜಸ್ಥಾನ ಮೂಲದವರು ಎನ್ನಲಾಗಿದೆ.

ಬೊಮ್ಮಸಂದ್ರ ಸಮೀಪದ ಯಾರಂಡಹಳ್ಳಿಯ ಕನ್ನಿಕಾ ನಗರದ ಮನೆಯ ಬಾಗಿಲು ಮುರಿದು ಆಸಾಮಿಗಳು ಕೈಚಳಕ ತೋರಿದ್ದಾರೆ. ಗುಟ್ಕಾ ವ್ಯಾಪಾರಿ ಸರ್ವಣ್ ಭಾರತಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದು, 25 ಲಕ್ಷ ಹಣವನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಆದರೆ ಪ್ರಮುಖ ಸಂಗತಿ ಅಂದರೆ ಆರೋಪಿಗಳಿಬ್ಬರು ಸರ್ವಣ್ ಭಾರತಿ ಬಳಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ದುಬಾರಿ ದುನಿಯಾ; ಆಗಸ್ಟ್​ನಿಂದ ಹೋಟೆಲ್‌ ತಿಂಡಿ ಊಟದ ದರ ಶೇ 10ರಷ್ಟು ಹೆಚ್ಚಳಕ್ಕೆ ತೀರ್ಮಾನ

ಗುಟ್ಕಾ ಮಾರಾಟದಿಂದ ಹಣ ಬಂದ ವಿಷಯನ್ನು ತಿಳಿದಿದ್ದ ಮಹೇಂದ್ರ ಸಿಂಗ್​ ಚೆನೈನಲ್ಲಿದ್ದ ಸ್ನೇಹಿತ ಜಗಮಲ್ ಸಿಂಗ್ ಜೊತೆ ಸೇರಿ ಸ್ಕೇಚ್ ಹಾಕಿದ್ದ. ಅದರಂತೆಯೇ ಕಳೆದ 19 ರಂದು ಲೋಡ್ ಇಳಿಸಿ ಬರಲು ಸರ್ವಣ್​ ಹೋಗಿದ್ದಾರೆ. ಈ ವೇಳೆ 25 ಲಕ್ಷ ಹಣ ಕದ್ದಿದ್ದಾರೆ. ಮನೆಯಲ್ಲಿದ್ದ ಹಣ ಕಳ್ಳತನವಾಗಿರುವ ಬಗ್ಗೆ ಹೆಬ್ಬಗೋಡಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಹೇಂದ್ರ ಸಿಂಗ್​ನನ್ನು ಕರೆತಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:03 pm, Sun, 23 July 23