ಸರ್ಕಾರದಿಂದ ಪರಿಹಾರವಾಗಿ ಬಂದ ಕೋಟಿ ಕೋಟಿ ಹಣಕ್ಕೆ ಗಲಾಟೆ; ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ

ಆ ಸುಂದರ ಕುಟುಂಬ ಕಳೆದ ಹದಿನೇಳು ವರ್ಷದಿಂದ ಸುಖವಾಗಿ ಬಾಳುತ್ತಿದ್ದರು, ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಮೂರು ಮಕ್ಕಳು ಕೂಡ ಇದ್ದರು. ಬಡತನದಲ್ಲಿದ್ದ ಕುಟುಂಬಕ್ಕೆ ಬಂದ ಕೋಟಿ ಕೋಟಿ ಹಣವೇ ಕುಟುಂಬ ಕಲಹಕ್ಕೆ ಕಾರಣವಾಗಿ, ಮನೆಯ ಯಜಮಾನಿಯನ್ನೆ ಗಂಡ ಬರ್ಬರವಾಗಿ ಕೊಂದು ನೀರಿನ ಸಂಪಿನಲ್ಲಿ ಹಾಕಿದ್ದಾನೆ.

ಸರ್ಕಾರದಿಂದ ಪರಿಹಾರವಾಗಿ ಬಂದ ಕೋಟಿ ಕೋಟಿ ಹಣಕ್ಕೆ ಗಲಾಟೆ; ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ
ಹಣಕ್ಕೆ ಗಲಾಟೆ, ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 30, 2024 | 9:03 PM

ಬೆಂಗಳೂರು ಗ್ರಾಮಾಂತರ, ಏ.30: ಬಡತನದಲ್ಲಿದ್ದ ಕುಟುಂಬಕ್ಕೆ ಬಂದ ಕೋಟ್ಯಾಂತರ ರೂಪಾಯಿ ಹಣವೇ ಕುಟುಂಬ ಕಲಹಕ್ಕೆ ಕಾರಣವಾಗಿ, ಮನೆಯ ಯಜಮಾನಿಯನ್ನ ಗಂಡ ಶ್ರೀನಿವಾಸ್ ಎಂಬಾತ ಬರ್ಬರವಾಗಿ ಕೊಂದು ನೀರಿನ ಸಂಪಿನಲ್ಲಿ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ತಾಲ್ಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ. ಜಯಲಕ್ಷ್ಮಿ (36) ಮೃತ ಮಹಿಳೆ.

ಜಮೀನು ಸ್ವಾಧೀನ! ಸರ್ಕಾರದಿಂದ ಪರಿಹಾರವಾಗಿ ಬಂತು ಕೋಟಿ ಕೋಟಿ ಹಣ

ಹೌದು, ದಾಬಸ್‌‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಈ ಕುಟುಂಬಕ್ಕೆ ಸೇರಿದ್ದ ಭೂಮಿ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನವಾಗಿತ್ತು, ಇದರಿಂದ ಎರಡು ಕೋಟಿಗೂ ಅಧಿಕ ಹಣ ಬಂದಿತ್ತು. ಆದ್ರೆ, ಗಂಡ ಕುಡುಕನಾಗಿದ್ದ, ಎಲ್ಲಿ ಹಣವನ್ನೆಲ್ಲ ಖಾಲಿ ಮಾಡುತ್ತಾನೆ ಎಂದು ಮೃತ ಹೆಂಡತಿ ಜಯಲಕ್ಷ್ಮಿ ತನ್ನ ತವರೂರಾದ ರಾಮನಗರಕ್ಕೆ ಹಣ ಕಳುಹಿಸಿ, ತನ್ನ ಮಕ್ಕಳ ಭವಿಷ್ಯಕ್ಕಾಗಿ ಹಣ ಎತ್ತಿಡಲು ಹೇಳಿದ್ದಳಂತೆ. ಇದರಿಂದ ಮನನೊಂದ ಶ್ರೀನಿವಾಸ್ ನೆನ್ನೆ ಹೆಂಡತಿಯೊಂದಿಗೆ ಜಗಳ ತೆಗೆದು,ಸಂಜೆ ವೇಳೆಗೆ ಆಕೆಯ ತಲೆಗೆ ಹಿಂಬದಿಯಿಂದ ಬಲವಾಗಿ ಮಚ್ಚಿನಿಂದ ಹೊಡೆದು ಬಳಿಕ ಮನೆಯ ಸಂಪಿನಲ್ಲಿ ಹಾಕಿದ್ದಾನೆ.

ಇದನ್ನೂ ಓದಿ:ಸಿಐಡಿ ಕಸ್ಟಡಿ ಅಂತ್ಯ, ನೇಹಾ ಕೊಲೆಗಡುಕನಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಮಕ್ಕಳು ಬಂದು ಅಮ್ಮ ಎಲ್ಲಿ ಅಂದಾಗ ತನಗೆ ಗೊತ್ತಿಲ್ಲ ಎಂದಿದ್ದನಂತೆ. ತಡರಾತ್ರಿ ಮನೆಯ ಪಕ್ಕದಲ್ಲೇ ಗುಂಡಿ ತೆಗೆಯುತ್ತಿದ್ದದ್ದನ್ನು ಗಮನಿಸಿದ್ದ ಮಕ್ಕಳು, ಜೋರು ಮಾಡಿ ಕೇಳಿದಾಗ ತೆಂಗಿನಕಾಯಿ ಗಿಡಗಳನ್ನ ನೆಡಲು ಎಂದಿದ್ದಾನೆ. ಈ ನಡುವೆ ಸಂಪಿನ ಒಳಗೆ ನಾಯಿ ಬಿದ್ದಿದೆ. ಅದನ್ನ ತೆಗೆಯಬೇಡಿ ಎಂದಿದ್ದನ್ನು ಅನುಮಾನಿಸಿದ ಮಕ್ಕಳು, ಬಾಗಿಲು ತೆರೆದು ನೋಡಿದಾಗ ತಾಯಿ ಶವ ನೀರಿನಲ್ಲಿ ತೇಲುತ್ತಿತ್ತು. ಸದ್ಯ ಘಟನೆಗೆ ಸಂಬಂಧಿಸಿದಂತೆ ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Tue, 30 April 24