Ghati Subramanya News: ಘಾಟಿ ಸುಬ್ರಹ್ಮಣ್ಯದ ರಾಷ್ಟ್ರೋತ್ಥಾನ ಗೋಶಾಲೆ ಹಸುಗಳ ಮೇಲೆ ಚಿರತೆ ದಾಳಿ

ಘಾಟಿ ಕ್ಷೇತ್ರದ ಗೋಶಾಲೆಗೆ ಹೊಂದಿಕೊಂಡಂತೆ ಇರುವ ಮಾಕಳಿ ದುರ್ಗದ ಬೆಟ್ಟಸಾಲು ಸೇರಿದಂತೆ ವಿವಿಧೆಡೆ ಚಿರತೆಯ ಹಾವಳಿ ಕಾಣಿಸಿಕೊಂಡಿದೆ.

Ghati Subramanya News: ಘಾಟಿ ಸುಬ್ರಹ್ಮಣ್ಯದ ರಾಷ್ಟ್ರೋತ್ಥಾನ ಗೋಶಾಲೆ ಹಸುಗಳ ಮೇಲೆ ಚಿರತೆ ದಾಳಿ
ಘಾಟಿ ಕ್ಷೇತ್ರದ ಸುತ್ತಮುತ್ತಲ ಗುಡ್ಡಗಳಲ್ಲಿ ಚಿರತೆ ಹಸುಗಳ ಮೇಲೆ ದಾಳಿ ಮಾಡಿದೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 31, 2022 | 8:03 PM

ಬೆಂಗಳೂರು: ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಸಿದ್ಧ ತೀರ್ಥಯಾತ್ರಾ ಸ್ಥಳ ಘಾಟಿ ಸುಬ್ರಹ್ಮಣ್ಯ (Ghati Subramanya) ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ರಾಷ್ಟ್ರೋತ್ಥಾನ ಗೋಶಾಲೆಯ (Rashtrothana Goshale) ಹಸುಗಳ ಮೇಲೆ ಚಿರತೆಯೊಂದು ಬುಧವಾರ ದಾಳಿ ಮಾಡಿದೆ (Leopard Attack). ದಾಳಿಯಿಂದ ಎರಡು ಹಸುಗಳಿಗೆ ಗಂಭೀರ ಗಾಯಗಳಾಗಿವೆ. ಒಂದು ಹಸು ನಾಪತ್ತೆಯಾಗಿದ್ದು, ಅದನ್ನು ಹುಡುಕಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.

ಗೋಶಾಲೆಯ ‘ಬೃಂದಾವನ’ ಪ್ರದೇಶದಲ್ಲಿ ಹಸುಗಳು ಮೇಯುತ್ತಿದ್ದಾಗ ಚಿರತೆ ದಾಳಿ ಮಾಡಿದೆ ಎಂದು ಗೋಪಾಲಕರು ತಿಳಿಸಿದ್ದಾರೆ. ಚಿರತೆಯ ಏಟಿನಿಂದ ಒಂದು ಹಸು ನಿತ್ರಾಣಗೊಂಡು ಕುಸಿಯಿತು. ಮತ್ತೊಂದು ಹಸು ತಪ್ಪಿಸಿಕೊಂಡು ಓಡಿತು. ಸಿಬ್ಬಂದಿ ತಕ್ಷಣ ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ ಹೊಡೆದು ಕಾಪಾಡಿದರು. ಒಂದು ಗೋವಿನ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಅದನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿ ದಿನೇಶ ಹೆಗಡೆ ತಿಳಿಸಿದರು.

ಘಾಟಿ ಕ್ಷೇತ್ರದ ಗೋಶಾಲೆಗೆ ಹೊಂದಿಕೊಂಡಂತೆ ಇರುವ ಮಾಕಳಿ ದುರ್ಗದ ಬೆಟ್ಟಸಾಲು ಸೇರಿದಂತೆ ವಿವಿಧೆಡೆ ಚಿರತೆಯ ಹಾವಳಿ ಕಾಣಿಸಿಕೊಂಡಿದೆ. ಇತ್ತೀಚೆಗಷ್ಟೇ ಮಾಕಳಿ ಸಮೀಪ ಚಿರತೆಯೊಂದು ರೈಲಿಗೆ ಸಿಕ್ಕಿ ಸಾವನ್ನಪ್ಪಿತ್ತು.