ನೆಲಮಂಗಲ, ನ.14: ಎಲೆಕ್ಟ್ರಿಕ್ ಓಲೊ ಕಂಪನಿಯ ಬೈಕ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣ ಮಾತ್ರದಲ್ಲಿ ಎಲೆಕ್ಟ್ರಿಕ್ ಬೈಕ್ (Electric Bikes) ಸೇರಿದಂತೆ ನಾಲ್ಕು ಬೈಕ್ಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ನಡೆದಿದೆ. ಶ್ರೀಕಾಂತ್ ಶರ್ಮಾ ಅವರಿಗೆ ಸೇರಿದ ಬೈಕ್ ಗಳಿಗೆ ಬೆಂಕಿ ತಗುಲಿದ್ದು ಬೆಂಕಿ ಆರಿಸುವ ವೇಳೆ ಶ್ರೀಕಾಂತ್ ಅವರಿಗೆ ಸಣ್ಣಪುಟ್ಟ (Injury) ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರುವರೆ ಲಕ್ಷ ಬೆಲೆ ಬಾಳುವ ಬೈಕ್ಗಳು ಸುಟ್ಟು ಭಸ್ಮವಾಗಿವೆ ಎಂಬ ಮಾಹಿತಿ ಸಿಕ್ಕಿದೆ.
ವಾರದ ಹಿಂದೆಯಷ್ಟೇ ಶ್ರೀಕಾಂತ್ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಮನೆಯ ಆವರಣದಲ್ಲಿ ಜೋರು ಶಬ್ದ ಕೇಳಿಸಿದಾಗ ಶ್ರೀಕಾಂತ್ ಆಚೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದ್ದು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ರಾತ್ರೊ ರಾತ್ರಿ ಶ್ರೀಮಂತರಾಗಬೇಕೆಂಬ ಆಸೆಯಿಂದ ಕಳ್ಳತನಕ್ಕೆ ಇಳಿದಿದ್ದ ಗ್ಯಾಂಗ್ ಅರೆಸ್ಟ್
ಇನ್ನು ಮತ್ತೊಂದೆಡೆ ಮೈಸೂರು ಜಿಲ್ಲೆಯ ಹುಣಸೂರಿನ ಸ್ಟೋರ್ ಬೀದಿಯಲ್ಲಿ ಶೇಖರ್ ಎಂಬುವರಿಗೆ ಸೇರಿದ ಮನೆಯಲ್ಲಿದ್ದ ವಸ್ತು ಸುಟ್ಟು ಭಸ್ಮವಾಗಿದೆ. ಅಂಗಡಿಯಿಂದ ಮನೆಗೆ ಬಟ್ಟೆ ತಂದು ಐರನ್ ಮಾಡ್ತಿದ್ದಾಗ ಅವಘಡ ಸಂಭವಿಸಿದ್ದು ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಐರನ್ ಮಾಡಿ ಜೀವನ ನಡೆಸುತ್ತಿದ್ದ ಶೇಖರ್ ಅವರಿಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಐರನ್ ಮಾಡಲು ಬಹಳ ಬಟ್ಟೆ ಬಂದಿದ್ದವು. ಹೀಗಾಗಿ ಅವರು ಅಂಗಡಿಯಿಂದ ಮನೆಗೆ ತಂದು ಐರನ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಬೆಂಕಿ ಹಚ್ಚಿಕೊಂಡಿದ್ದು ಮನೆಯಲ್ಲಿದ್ದ ಟಿವಿ, ವಾಷಿಂಗ್ ಮಷೀನ್ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಶೇಖರ್ ಅವರಿಗೆ ಗಾಯಗಳಾಗಿವೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:24 am, Tue, 14 November 23