ತಾಯಿಯನ್ನು ಕೊಂದವನನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಮಗ: 6 ವರ್ಷದ ಹಿಂದಿನ ಸೇಡು ತೀರಿಸಿಕೊಂಡ
ಆರು ವರ್ಷಗಳ ಹಿಂದೆ ತನ್ನ ತಾಯಿಯನ್ನು ಕೊಂದ ಆರೋಪಿಯನ್ನು ಮಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಈ ಮೂಲಕ ಆರು ವರ್ಷಗಳ ಹಿಂದಿನ ಸೇಡರನ್ನು ತೀರಿಸಿಕೊಂಡಿದ್ದಾನೆ. ಹಾಗಾದ್ರೆ ಏನಿದು ಪ್ರಕರಣ? ಈ ಕೊಲೆ ನಡೆದಿದ್ದು ಎಲ್ಲಿ? ಈ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು? ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಆನೇಕಲ್, (ನವೆಂಬರ್ 03): ಆರು ವರ್ಷಗಳ ಹಿಂದೆ ತನ್ನ ತಾಯಿಯನ್ನು ಕೊಂದ ಆರೋಪಿಯನ್ನು ಮಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ (murder case) ಮಾಡಿದ್ದಾನೆ. ಈ ಮೂಲಕ ಮಧು ತನ್ನ ತಾಯಿ ಕೊಲೆಯ ಸೇಡು ತೀರಿಸಿಕೊಂಡಿದ್ದಾನೆ. ಬೆಂಗಳೂರು ಹೊರವಲಯ (Bangalore rural news) ಆನೇಕಲ್ ತಾಲ್ಲೂಕಿನ ಸಮಂದೂರಿನಲ್ಲಿ ನಡೆದ ಈ ಘಟನೆ ನಡೆದಿದ್ದು, ನಾರಾಯಣಪ್ಪ (52) ಕೊಲೆಯಾದ ವ್ಯಕ್ತಿ. ಕೊಲೆಯಾದ ನಾರಾಯಣಪ್ಪ 6 ವರ್ಷಗಳ ಹಿಂದೆ ನಾರಾಯಣಪ್ಪ ಎನ್ನುವಾತ ಮಧು ತಾಯಿಯನ್ನು ಕೊಲೆ ಮಾಡಿದ್ದ. ಇದೇ ಸೇಡಿಗಾಗಿ ಮಧು, ನಾರಾಯಣಪ್ಪನನ್ನು ಹತ್ಯೆ ಮಾಡಿದ್ದಾನೆ.
ಆರು ವರ್ಷದ ಹಿಂದೆ ಮಧುವಿನ ತಾಯಿಯನ್ನು ನಾರಾಯಣಪ್ಪ ಕೊಂದಿದ್ದ. ನಂತರ ಜೈಲುಪಾಲಾಗಿ, ಮೂರು ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದು ಮಂಡ್ಯದಲ್ಲಿ ವಾಸವಿದ್ದ. ಆದ್ರೆ, ನಾರಾಯಣಪ್ಪ 15 ದಿನದ ಹಿಂದೆ ಸಮಂದೂರಿಗೆ ಬಂದಿದ್ದ. ಇದು ಮಧುಗೆ ಗೊತ್ತಾಗಿದ್ದು, ಬಳಿಕ ನಿನ್ನೆ(ನವೆಂಬರ್ 14) ಸಂಜೆ ನಾರಾಯಣಸ್ವಾಮಿ ಹಾಗೂ ಮಧು ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮಧು ಕೋಪಗೊಂಡು ನಾರಾಯಣಪ್ಪನ ತಲೆ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿ ಮಧು ಪತ್ತೆಗೆ ಬಲೆ ಬೀಸಲಾಗಿದೆ.
ಎಸ್ಪಿ ಪುರುಷೋತ್ತಮ್ ಹೇಳಿದ್ದೇನು?
ಇನ್ನು ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಪ್ರತಿಕ್ರಿಯಿಸಿದ್ದು, ಕೊಲೆ ಆರೋಪಿ ಮಧು ತಾಯಿಯನ್ನು ನಾರಾಯಣಸ್ವಾಮಿ ಆರು ವರ್ಷದ ಹಿಂದೆ ಕೊಲೆ ಮಾಡಿದ್ದ. ಇದೇ ಆರೋಪದಲ್ಲಿ ನಾರಾಯಣಸ್ವಾಮಿ ಜೈಲು ಸೇರಿದ್ದ, ಮೂರು ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕ ಮಂಡ್ಯದಲ್ಲಿ ವಾಸವಿದ್ದ ನಾರಾಯಣಸ್ವಾಮಿ,15 ದಿನದ ಹಿಂದೆ ಸಮಂದೂರಿಗೆ ಬಂದಿದ್ದ. ಬಳಿಕ ನಿನ್ನೆ ನಾರಾಯಣಸ್ವಾಮಿ ಹಾಗೂ ಮಧು ನಡುವೆ ಗಲಾಟೆ ನಡೆದಿದೆ. ಈ ವೇಳೆ ತಾಯಿಯನ್ನು ಕೊಲೆ ಮಾಡಿರುವ ಕೋಪಕ್ಕೆ ಮಧು, ನಾರಾಯಣಸ್ವಾಮಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಮಧು ಎಸ್ಕೇಪ್ ಆಗಿದ್ದಾನೆ. ಆತನ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ