AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾಮೀಜಿ ಮಾತು ನಂಬಿ ಇತಿಹಾಸ ಪ್ರಸಿದ್ದ ಶನಿಮಹಾತ್ಮ ದೇವಾಲಯಕ್ಕೆ ಮಾಂಸದ ಹಾರ ಕಾಣಿಕೆ! ಅಮಂಗಲ ಮಾಡಲು ಬಂದ ಯುವಕ ಅಂದರ್

ಸ್ವಾಮೀಜಿಯ ಮಾತು ನಂಬಿ ನಾನು ಈ ಕೃತ್ಯ ನಡೆಸಿರೋದಾಗಿ ಪೊಲೀಸ ಬಳಿ ಯುವಕ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಜತೆಗೆ ಕೆಲ ಕಿಡಿಗೇಡಿಗಳು ದೇವಾಲಯದ ಪಾವಿತ್ರ್ಯತೆ ಹಾಳು ಮಾಡಲು ಹಣ ಕೊಟ್ಟು ಕಳಿಸಿದ್ರು ಅಂತಲು ಎರಡೆರಡು ಹೇಳಿಕೆ ನೀಡಿದ್ದು ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಸ್ವಾಮೀಜಿ ಮಾತು ನಂಬಿ ಇತಿಹಾಸ ಪ್ರಸಿದ್ದ ಶನಿಮಹಾತ್ಮ ದೇವಾಲಯಕ್ಕೆ ಮಾಂಸದ ಹಾರ ಕಾಣಿಕೆ! ಅಮಂಗಲ ಮಾಡಲು ಬಂದ ಯುವಕ ಅಂದರ್
ಅಮಂಗಲ ಮಾಡಲು ಬಂದ ಯುವಕ ಅಂದರ್
TV9 Web
| Edited By: |

Updated on: Mar 13, 2023 | 6:20 AM

Share

ಅದು ಇತಿಹಾಸ ಪ್ರಸಿದ್ದ ಶನಿಮಹಾತ್ಮ ದೇವಾಲಯ. ಶನಿಮಹಾತ್ಮಸ್ವಾಮಿ (Shani, Shani Dev) ಹೆಗಲೇರಿದ್ರೇ ಅಷ್ಟಕಷ್ಟಗಳು ಉಂಟಾಗುತ್ತವೆ. ಶನಿ ವಕ್ಕರಿಸಿದ್ರೇ ದಿನನಿತ್ಯ ಏನೋ ಒಂದು ಸಮಸ್ಯೆ, ಹೀಗಾಗಿ ಶನಿಮಹಾತ್ಮಸ್ವಾಮಿ ನಿನಗೆ ಹೆಗಲೇರಿದ್ದಾನೆ. ನೀನು ಸ್ವಾಮಿಗೆ ಮಾಂಸದ (Non vegetarian) ನೈವೈದ್ಯ ಮಾಡು ಹೂವಿನ ಹಾರದ ಜೊತೆಯಾದ್ರೂ ಸ್ವಾಮಿಗೆ ಮಾಂಸ ಸಮರ್ಪಣೆ ಮಾಡು ಅಂತ ಸ್ವಾಮೀಜಿಯ ಮಾತು ಕೇಳಿದ ಯುವಕ ಈಗ ಮಾಡಬಾರದ ಕೆಲಸ ಮಾಡಿ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ. ಅದು ಎಲ್ಲಿ‌ ಅಂತೀರಾ ಈ ಸ್ಟೋರಿ ನೋಡಿ… ದೇವಸ್ಥಾನವನ್ನು ಅಮಂಗಲ ಮಾಡಲು ಬಂದ ಆರೋಪಿ ಯುವಕನನ್ನು (Youth) ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಆತನ ಹೆಸರು ಮುನಿರಾಜು ಅಂತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳೀಪುರ ನಿವಾಸಿ.

ಈ ಮುನಿರಾಜು ಈಗ ಸ್ವಾಮೀಜಿಯೊಬ್ಬನ ಮಾತು ನಂಬಿ ಶನಿಮಹಾತ್ಮಸ್ವಾಮಿಗೆ ಗುಲಾಬಿ ಹಾರದ ಜೊತೆ ಮಾಂಸದ ತುಂಡುಗಳನ್ನ ಇಟ್ಟು ಹಾರ ಸಮರ್ಪಣೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಚಿಕ್ಕ ಮಧುರೆ ಗ್ರಾಮದ ಪುರಾತನ ಪ್ರಸಿದ್ದ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯಕ್ಕೆ ಕಳೆದ ಎರಡು ತಿಂಗಳ ಹಿಂದೆಯೂ ಸಹ ಇಬ್ಬರು ಯುವಕರು ಆಗಮಿಸಿ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರಗಳನ್ನ ಕೊಟ್ಟು ಹೋಗಿದ್ರು.

ಆಗ ಅರ್ಚಕರು ಹಾರ ತೆಗೆದು ನೋಡಿದಾಗ ಗುಲಾಬಿ ಹೂವಿನ ಹಾರದ ಮಧ್ಯೆ ಮಾಂಸದ ತುಂಡುಗಳು ಇರೋದನ್ನ ಕಂಡು ಹಾರವನ್ನ ಹೊರಗೆ ಬಿಸಾಡಿದ್ರು. ಇಡೀ ದೇವಾಲಯವನ್ನ ಶುಚಿಗೊಳಿಸಿ ಪುನಃ ಪೂಜೆ ಪುನಸ್ಕಾರ ಮಾಡಿದ್ರು. ಅಂದಿನಿಂದ ಎಚ್ಚೆತ್ತ ದೇವಾಲಯದ ಆಡಳಿತ ಮಂಡಳಿ ದೇವಾಲಯಕ್ಕೆ ಬರೋ ಭಕ್ತರ ಹಾರವನ್ನ ಪರಿಶೀಲನೆ ಮಾಡಿ ಒಳಗೆ ಬಿಡೋದು ಸೇರಿದಂತೆ ಪ್ಲಾಸ್ಟಿಕ್ ಕವರ್ ಇರುವ ಹಾಗೂ ಥರ್ಮಾಕೋಲ್ ದಿಂಡು ಇರುವ ಹಾರವನ್ನ ಸಂಪೂರ್ಣ ನಿಷೇಧ ಮಾಡಿತ್ತು.

ಯಾರಾದ್ರೂ ಹಾರ ತಂದ್ರೂ ಪರಿಶೀಲನೆ ಮಾಡೋದಕ್ಕೆ ಸಿಬ್ಬಂದಿಯನ್ನ ಸಹ ನೇಮಕ ಮಾಡಲಾಗಿತ್ತು. ಈ ಬಗ್ಗೆ ಹಿಂದೆಯೇ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರನ್ನ ಸಹ ದಾಖಲಿಸಲಾಗಿತ್ತು. ಆದ್ರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಆದ್ರೆ‌ ನಿನ್ನೆ ಸಂಜೆ ಸಹ ಇದೇ ಯುವಕರು ಸೇಮ್ ಟು ಸೇಮ್ ಲಾಸ್ಟ್ ಟೈಂ ಮಾಡಿದ ಹಾಗೆ ಅದೇ ಹೂವಿನ ಹಾರ ತಂದಿದ್ದು, ದೇವಾಲಯದ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಸದ್ಯ ಹೊಸಕೋಟೆ ತಾಲೂಕಿನ ಕಂಬಳೀಪುರ ಗ್ರಾಮದ ಮುನಿರಾಜು ಹಾಗೂ ಈತನ ಜೊತೆ ಆಟೋ ಚಾಲಕ ಸೋಮಶೇಖರ್ ಎಂಬಾತನನ್ನ ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮುನಿರಾಜು ವಾಹನ ಅಪಘಾತಕ್ಕೀಡಾಗಿದ್ದು, ನನಗೆ ಶನಿ ಹೆಗಲೇರಿದೆ, ಹೀಗಾಗಿ ನೀನು ಶನಿಮಹಾತ್ಮಸ್ವಾಮಿಗೆ ಮಾಂಸದ ಸಮೇತ ಹೂವಿನ ಹಾರ ಸಮರ್ಪಣೆ ಮಾಡಿದ್ರೇ ಶನಿ ದೋಷ ನಿವಾರಣೆ ಆಗುತ್ತೆ ಅಂತ ಸ್ವಾಮೀಜಿ ಹೇಳಿದ್ದರು.

ಸ್ವಾಮೀಜಿಯ ಮಾತು ನಂಬಿ ನಾನು ಈ ಕೃತ್ಯ ನಡೆಸಿರೋದಾಗಿ ಪೊಲೀಸ ಬಳಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಜತೆಗೆ ಕೆಲ ಕಿಡಿಗೇಡಿಗಳು ದೇವಾಲಯದ ಪಾವಿತ್ರ್ಯತೆ ಹಾಳು ಮಾಡಲು ಮೂರು ಸಾವಿರ ಹಣ ಕೊಟ್ಟು ಕಳಿಸಿದ್ರು ಅಂತಲು ಎರಡೆರಡು ಹೇಳಿಕೆ ನೀಡಿದ್ದು ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸದ್ಯ ಮುನಿರಾಜು ವಿಚಾರಣೆ ನಂತರ ಸ್ವಾಮೀಜಿಯ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅದೇನೇ ಆದ್ರೂ ಶನಿ ಹೆಗಲೇರಿದೆ ಸ್ವಾಮೀಜಿಯ ಮಾತು ನಂಬಿದ ಯುವಕ ಈಗ ಮಾಡಬಾರದ್ದನ್ನ ಮಾಡಿ ನಿಜವಾಗಲೂ ಶನಿ ಹೆಗಲೇರಿಸಿಕೊಂಡಿದ್ದಾನೆ ಅಂತ ಭಕ್ತರು ಗುಸು ಗುಸು ಮಾತಾಡುವಂತಾಗಿದೆ.

ವರದಿ: ನವೀನ್, ಟಿವಿ 9, ದೇವನಹಳ್ಳಿ 

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು