AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ರತ್ನಖಚಿತ ವಜ್ರಾಭರಣಗಳ ಜಾತ್ರೆ; ಸರ್ಕಾರದ ಖಜಾನೆಯಿಂದ ಹೊರಬಂದ ಆಭರಣ ನೋಡಲು ಮುಗಿಬಿದ್ದ ಭಕ್ತರು

500 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ರಣಬೈರೆಗೌಡರಿಂದ ಟಿಪ್ಪು ಸುಲ್ತಾನ್​ವರೆಗೂ ಸಾಕಷ್ಟು ರಾಜ ಮಹಾರಾಜರು ಅಪಾರ ಪ್ರಮಾಣದ ಬೆಲೆಕಟ್ಟಲಾಗದ ವಜ್ರ ವೈಢೂರ್ಯದ ಆಭರಣಗಳನ್ನು ನೀಡಿದ್ದಾರೆ.

ದೇವನಹಳ್ಳಿ: ರತ್ನಖಚಿತ ವಜ್ರಾಭರಣಗಳ ಜಾತ್ರೆ; ಸರ್ಕಾರದ ಖಜಾನೆಯಿಂದ ಹೊರಬಂದ ಆಭರಣ ನೋಡಲು ಮುಗಿಬಿದ್ದ ಭಕ್ತರು
ವೇಣುಗೋಪಾಲ ಸ್ವಾಮಿ ದೇವಸ್ಥಾನ
TV9 Web
| Updated By: preethi shettigar|

Updated on:Feb 18, 2022 | 8:42 AM

Share

ದೇವನಹಳ್ಳಿ: ಅಪರೂಪದ ವಜ್ರಾಭರಣಗಳ ಜಾತ್ರೆ ಅಂದರೆ ಮೊದಲಿಗೆ ನೆನಪಾಗುವುದು ಮೇಲುಕೋಟೆಯ ಚೆಲುವರಾಯಸ್ವಾಮಿ ಜಾತ್ರೆ. ಆದರೆ ಇಂತದ್ದೆ ಒಂದು ಅಪರೂಪದಲ್ಲಿ ಅಪರೂಪವಾದ ಬೆಲೆ ಕಟ್ಟಲಾಗದ ವಜ್ರ ವೈಢೂರ್ಯದ ಜಾತ್ರೆಯೊಂದು(Fair) ಸಿಲಿಕಾನ್ ಸಿಟಿ ಹೌಟ್ ಸ್ಕಟ್ಸ್​ನಲ್ಲೆ ನೆರವೇರಿದೆ. ಬೆಳ್ಳಿ(Silver) ಕಿರೀಟ, ಬಂಗಾರದ ಕಿರೀಟ, ರತ್ನ ಖಚಿತ ವಜ್ರಗಳ ಕಿರೀಟ, ಕಂಠೀಹಾರ ಕಮಲದ ಹಾರ, ಮುತ್ತಿನ ಕಂಠಸಾರ, ಚಂದ್ರಹಾರ ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 21 ಬಗೆಯ ವಿವಿಧ ರಾಜರ ಕಾಲದ ಅಪರೂಪದ ಬೆಲೆ ಕಟ್ಟಲಾಗದ ವಜ್ರ ವೈಢೂರ್ಯಗಳನ್ನು ಸರ್ಕಾರಿ ಖಜಾನೆಯಿಂದ ಹೊರತರಲಾಗಿದೆ. ಈ ಅಪರೂಪದ ಆಭರಣಗಳನ್ನು(Jewelry) ನೋಡಲು ಜನ ಮುಗಿಬಿದ್ದಿದ್ದಾರೆ.

ಸಿಲಿಕಾನ್ ಸಿಟಿಗೆ ಕೂದಲಳತೆ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಈ ಸಂಪತ್ತಿನ ಜಾತ್ರೆ ನಡೆದಿದೆ. ಅಂದಹಾಗೆ 500 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ರಣಬೈರೆಗೌಡರಿಂದ ಟಿಪ್ಪು ಸುಲ್ತಾನ್​ವರೆಗೂ ಸಾಕಷ್ಟು ರಾಜ ಮಹಾರಾಜರು ಅಪಾರ ಪ್ರಮಾಣದ ಬೆಲೆಕಟ್ಟಲಾಗದ ವಜ್ರ ವೈಢೂರ್ಯದ ಆಭರಣಗಳನ್ನು ನೀಡಿದ್ದಾರೆ.

ಈ ಎಲ್ಲಾ ಆಭರಣಗಳನ್ನು ಪ್ರತಿವರ್ಷ ಹುಣ್ಣಿಮೆಯ ನಂತರದ ದಿನ ದೇವರಿಗೆ ಹಾಕಿ ಅದ್ದೂರಿ ಜಾತ್ರೆ ಮಾಡಿಕೊಂಡು ಬರುತ್ತಿದ್ದರು. ಆದರೆ ಕಾಲ ಕ್ರಮೇಣ ಅಪರೂಪದ ವಜ್ರಾಭರಣಗಳನ್ನೆಲ್ಲ ಸರ್ಕಾರ ರಕ್ಷಣೆಯ ಹಿತದೃಷ್ಟಿಯಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ವರ್ಷಕ್ಕೋಮ್ಮೆ ಮಾತ್ರ ನಡೆಯುವ ಜಾತ್ರೆಗೆ ಒಂದೋಂದು ಸೆಟ್ ಆಭರಣಗಳನ್ನು ಮೆರವಣಿಗೆಗೆ ನೀಡುತ್ತದೆ. ಹೀಗಾಗಿ ನಿನ್ನೆ (ಫೆಬ್ರವರಿ 17) ನಡೆದ ಬ್ರಹ್ಮರಥೋತ್ಸವಕ್ಕೆ ಬೆಳಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 10ನೇ ಬಾಕ್ಸ್​ನ 21 ಬಗೆಯ ಒಂದು ಸೆಟ್ ವಜ್ರಾಭರಣಗಳನ್ನು ದೇವಸ್ಥಾನಕ್ಕೆ ತಂದು ಜಾತ್ರೆ ನಡೆಸಿದ್ದು, ಅಪರೂಪದ ರತ್ನಖಚಿತ ಆಭರಣಗಳನ್ನ ಕಂಡ ಭಕ್ತರು ಖುಷಿಯಾಗಿದ್ದಾರೆ ಎಂದು ದೇವಾಲಯದ ಅರ್ಚಕರಾದ ಪದ್ಮನಾಭಶಾಸ್ತ್ರಿ ಹೇಳಿದ್ದಾರೆ.

ದೇಶದಲ್ಲಿ ಮೇಲುಕೋಟೆ, ತಿರುಪತಿ, ತಿರುವನಂತಪುರಂ ನಂತರ ಅತಿಹೆಚ್ಚು ಪುರಾತನವಾದ ಬೆಲೆ ಕಟ್ಟಲಾಗದ ಸಂಪತ್ತಿರುವ 500 ವರ್ಷಗಳ ಇತಿಹಾಸದ ಕೋಟೆ ವೇಣುಗೋಪಾಲ ಸ್ವಾಮಿ. ಇಲ್ಲಿ 12 ಸೆಟ್ ವಜ್ರಾಭರಣಗಳಿದ್ದು, ಪ್ರತಿವರ್ಷ ಒಂದೋಂದು ಸೆಟ್ ಆಭರಣಗಳನ್ನ ಹಾಕಿ ಅದ್ದೂರಿ ವಜ್ರಾಭರಣದ ಜಾತ್ರೆ ಮಾಡುತ್ತಾರೆ. ಹೀಗಾಗಿ ಈ ಭಾರಿ ಹಾಕಿದ ಆಭರಣ ಮತ್ತೆ 12 ವರ್ಷದ ನಂತರ ಹಾಕಲಿದ್ದು, ಸಂಪೂರ್ಣ ಸಂಪತ್ತಿನ 10 ರಷ್ಟು ಆಭರಣಗಳನ್ನ ಮಾತ್ರ ತಂದು ದೇವರಿಗೆ ಹಾಕಿ ಜಾತ್ರೆ ನಡೆಸುವುದು ಇಲ್ಲಿನ ವಿಶೇಷ.

fair

ವಜ್ರಾಭರಣಗಳ ಜಾತ್ರೆ

ವಜ್ರಾಭರಣಗಳ ಜೊತೆ ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ಹಾಕಲಿದ್ದು, ಮೊದಲ ಬಾರಿಗೆ ಬೆಳ್ಳಿ ಕಿರೀಟ, ಎರಡನೆ ಸುತ್ತಿಗೆ ಬಂಗಾರದ ಕಿರೀಟ, ಮೂರನೇ ಸುತ್ತಿನಲ್ಲಿ ರತ್ನ ಖಚಿತ ವಜ್ರದ ಕಿರೀಟವಿಟ್ಟು ಮೆರವಣಿಗೆ ಮಾಡುತ್ತಾರೆ. ನಂತರ ಬ್ರಹ್ಮರಥೋತ್ಸವದ ವೇಳೆ ಆಭರಣಗಳನ್ನು ವಾಪಸ್ ಸರ್ಕಾರದ ಖಜಾನೆಗೆ ಕಳಿಸುತ್ತಾರೆ. ಇನ್ನೂ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ರದ್ದಾಗಿದ್ದ ಜಾತ್ರೆ ಈ ಬಾರಿ ವಿಜೃಂಭಣೆಯಿಂದ ನೆರವೇರಿದ್ದು, ವಜ್ರಾಭರಣಗಳ ಜಾತ್ರೆಯನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಕ್ಕೆ ಧವಳ ಬಾಳೆಹಣ್ಣು ಅರ್ಪಿಸಿ ಇಷ್ಟಾರ್ಥಸಿದ್ದಿಗೆ ಪ್ರಾರ್ಥಿಸಿದರು.

ವರದಿ: ನವೀನ್

ಇದನ್ನೂ ಓದಿ: ಕಡಲ ತಡಿಯಲ್ಲಿ ಬಣ್ಣದೋಕುಳಿಯ ಹಬ್ಬ; ವೆಂಕಟರಮಣ ಜಾತ್ರೆಯಲ್ಲಿ ಬಣ್ಣದಲ್ಲಿ ಮಿಂದೆದ್ದ ಭಕ್ತಸಂಕುಲ

ಕ್ಯಾಮೇನಹಳ್ಳಿ ಹನುಮನ ಜಾತ್ರೆಗೆ ವಿವಾದದ ವಿಘ್ನ: ಜಿಲ್ಲಾಧಿಕಾರಿ ಆದೇಶ, ಸಂಪ್ರದಾಯಗಳ ತಾಕಲಾಟ

Published On - 8:37 am, Fri, 18 February 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!