ಕ್ಯಾಮೇನಹಳ್ಳಿ ಹನುಮನ ಜಾತ್ರೆಗೆ ವಿವಾದದ ವಿಘ್ನ: ಜಿಲ್ಲಾಧಿಕಾರಿ ಆದೇಶ, ಸಂಪ್ರದಾಯಗಳ ತಾಕಲಾಟ

ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇಗುಲ ಅರ್ಚಕರ ಪೂಜೆಯ ವಿವಾದ ಮತ್ತೊಂದು ತಿರುವು ಪಡೆದಿದೆ. ದೇಗುಲ ಸಮಿತಿ ಹಾಗೂ ಸ್ಥಳೀಯ ಭಕ್ತರ ಮಧ್ಯೆ ವಾಗ್ವಾದ ಆರಂಭವಾಗಿದೆ

ಕ್ಯಾಮೇನಹಳ್ಳಿ ಹನುಮನ ಜಾತ್ರೆಗೆ ವಿವಾದದ ವಿಘ್ನ: ಜಿಲ್ಲಾಧಿಕಾರಿ ಆದೇಶ, ಸಂಪ್ರದಾಯಗಳ ತಾಕಲಾಟ
ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇಗುಲ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2022 | 9:49 PM

ತುಮಕೂರು: ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇಗುಲ ಅರ್ಚಕರ ಪೂಜೆಯ ವಿವಾದ ಮತ್ತೊಂದು ತಿರುವು ಪಡೆದಿದೆ. ದೇಗುಲ ಸಮಿತಿ ಹಾಗೂ ಸ್ಥಳೀಯ ಭಕ್ತರ ಮಧ್ಯೆ ವಾಗ್ವಾದ ಆರಂಭವಾಗಿದೆ. ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೃಷ್ಣಾಚಾರ್ ಮತ್ತು ರಾಮಾಚಾರ್‌ ಪೂಜೆ ಮಾಡುತ್ತಿದ್ದರು. ಅವರ ಪೂಜೆಯ ಹಕ್ಕನ್ನು ಮುಂದುವರಿಸಬೇಕೆಂದು ಭಕ್ತರ ಒಂದು ಬಣ ಪಟ್ಟು ಹಿಡಿದಿದೆ. ಆದರೆ ದೇಗುಲ ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರ ಮತ್ತೊಂದು ಬಣವು ಜಿಲ್ಲಾಧಿಕಾರಿ ಆದೇಶ ಪಾಲಿಸಬೇಕೆಂದು ಆಗ್ರಹಿಸಿದೆ. ಮಾಧ್ವ ಸಂಪ್ರದಾಯದ ಕೃಷ್ಣಾಚಾರ್ ಮತ್ತು ರಾಮಾಚಾರ್ ಅವರು ಈವರೆಗೆ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು. ಇದೀಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ, ದೇವರಾಯನದುರ್ಗ ಕ್ಷೇತ್ರದ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅರ್ಚಕರಾದ ಲಕ್ಷ್ಮೀನಾರಾಯಣ ಭಟ್ಟರನ್ನು ಅರ್ಚಕರಾಗಿ ನೇಮಿಸಿದ್ದಾರೆ. ಪೂಜಾ ವಿಧಾನದಲ್ಲಿ ವ್ಯತ್ಯಾಸ ಆಗುತ್ತದೆ ಎನ್ನುವ ಕಾರಣಕ್ಕೆ ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಪೂಜೆ ಸಲ್ಲಿಸಲು ಶನಿವಾರ ದೇಗುಲದ ಹಿಂದಿನ ಅರ್ಚಕರು ಅವಕಾಶ ನೀಡಲಿಲ್ಲ.

ಇದೇ ವಿಚಾರಕ್ಕೆ ದೇಗುಲ ವ್ಯವಸ್ಥಾಪನಾ ಸಮಿತಿ ಮತ್ತು ಸ್ಥಳೀಯರ ಮಧ್ಯೆ ವಾಕ್ಸಮರವೂ ನಡೆಯಿತು. ದೇವಾಲಯದ ಬಳಿ ಗುಂಪುಗಳು ಸೇರಿ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು. ಕ್ಯಾಮೇನಹಳ್ಳಿಯಲ್ಲಿ ಫೆ 6ರಿಂದ 17ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಲಕ್ಷ್ಮೀನಾರಾಯಣ ಭಟ್ಟರನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ನೇಮಕ ಮಾಡಿದ್ದಾರೆ. ನಾಲ್ಕೈದು ವರ್ಷಗಳಿಂದ ನಡೆದ ಜಾತ್ರೆಯಲ್ಲಿ ಇಲ್ಲದೇ ಇರುವ ವಿದ್ಯಮಾನ ಈಗೇಕೆ ನಡೆಯಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಕ್ಯಾಮೇನಹಳ್ಳಿ ಆಂಜನೇಯ ಜಾತ್ರೆಗೆ ವಿವಾದದ ಅಡ್ಡಿ

ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇಗುಲಕ್ಕೆ ಶನಿವಾರ ಬೀಗ ಹಾಕಲಾಗಿತ್ತು. ಅರ್ಚಕರ ನಡುವಣ ವೈಮನಸ್ಯವೇ ದೇಗುಲಕ್ಕೆ ಬೀಗ ಬೀಳಲು ಮುಖ್ಯ ಕಾರಣ ಎನ್ನಲಾಗಿದೆ. ದೇಗುಲದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಾಚಾರಿ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಮಧ್ಯೆ ಪ್ರಧಾನ ಅರ್ಚಕರ ಹುದ್ದೆ ವಿವಾದ ತಾರಕಕ್ಕೇರಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಗುಲದಲ್ಲಿ ಪೂಜೆ ನಿಂತಿದೆ. ಪ್ರತಿದಿನ ಮುಂಜಾನೆಯಿಂದಲೇ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದವು. ಆದರೆ ಭಾನುವಾರ (ಫೆ 6) ಮಾತ್ರ ಮಧ್ಯಾಹ್ನ 1 ಗಂಟೆ ದಾಟಿದರೂ ದೇಗುಲದ ಬೀಗ ತೆಗೆಯಲಿಲ್ಲ. ತಾವೂ ಪೂಜೆ ಸಲ್ಲಿಸದೇ, ಬೇರೆಯವರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡದೇ ಅರ್ಚಕರು ಬೀಗ ಜಡಿದರು.

ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿಯ ದೇಗುಲದಲ್ಲಿ ಮೂಲ ಅರ್ಚಕ ರಾಮಾಚಾರಿ ಮತ್ತು ಸರ್ಕಾರದ ಆದೇಶದಂತೆ ನೇಮಕವಾಗಿರುವ ಅರ್ಚ ನಾರಾಯಣ ಭಟ್ಟರ ನಡುವೆ ಅಸಮಾಧಾನವಿದೆ. ಕ್ಯಾಮೇನಹಳ್ಳಿಯಲ್ಲಿ ಶನಿವಾರದಿಂದ ಬ್ರಹ್ಮೋತ್ಸವ ಪೂಜೆಗಳು ಆರಂಭವಾಗಬೇಕಿತ್ತು. ಬೆಳಿಗ್ಗೆಯೇ ಪೂಜೆ ಸಲ್ಲಿಕೆಗೆಂದು ಬಂದಿದ್ದ ಲಕ್ಷ್ಮೀನಾರಾಯಣ ಭಟ್ಟರು ಬೀಗದ ಕೀ ಇಲ್ಲದೆ ಕಾದು ಕುಳಿತಿದ್ದರು. ಮಧ್ಯಾಹ್ನ ಒಂದು ಗಂಟೆಯ ನಂತರ ಅರ್ಚಕ ರಾಮಾಚಾರಿ ದೇಗುಲ ಸಮೀಪಕ್ಕೆ ಬಂದರು. ತೇರಿನ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲೆಂದು ಗ್ರಾಮಕ್ಕೆ ಬಂದಿದ್ದ ಭಕ್ತರು ಅರ್ಚಕರ ನಡುವಣ ವಿವಾದದಿಂದಾಗಿ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದೆ ಹೊರಗೆ ಕಾದು ಕುಳಿತಿದ್ದರು.

ಏನಿದು ವಿವಾದ?

ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇಗುಲದ ಜಾತ್ರೆಯು ಫೆ 6ರಿಂದ 17ರವರೆಗೆ ನಡೆಯಬೇಕಿದೆ. ಪ್ರಧಾನ ಅರ್ಚಕರ ಹುದ್ದೆ ಖಾಲಿ ಇರುವುದರಿಂದ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಆದೇಶದಂತೆ ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇಗುಲ ಅರ್ಚಕರಾದ ಡಿ.ಕೆ.ಲಕ್ಷ್ಮೀನಾರಾಯಣ ಭಟ್ಟರ್ ಅವರನ್ನು ಕ್ಯಾಮೇನಹಳ್ಳಿ ದೇಗುಲಕ್ಕೆ ನಿಯೋಜಿಸಲಾಗಿತ್ತು.

ಆದರೆ ಕ್ಯಾಮೇನಹಳ್ಳಿ ದೇಗುಲದಲ್ಲಿ ಮಾಧ್ವ ಸಂಪ್ರದಾಯದ ಪ್ರಕಾರ ಪೂಜೆ ನಡೆಯುವ ಸಂಪ್ರದಾಯವಿದೆ. ಈ ದೇಗುಲಕ್ಕೆ ಶ್ರೀವೈಷ್ಣವ ಸಂಪ್ರದಾಯದ ಅಯ್ಯಂಗಾರ್ ಅರ್ಚಕರ ನೇಮಕ ಸರಿಯಲ್ಲ ಎಂದು ರಾಮಾಚಾರ್ ವಾದಿಸಿದರು. ಸರ್ಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶದ ಬಗ್ಗೆ ವಿವರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ತುಮಕೂರಿನ ದೊಡ್ಡ ಜಾತ್ರೆ

ಕ್ಯಾಮೇನಹಳ್ಳಿಯ ಎರಡು ಮುಖದ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ತುಮಕೂರು ಜಿಲ್ಲೆಯ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಜನರು ಜಾತ್ರೆಗೆ ಬರುವುದು ವಾಡಿಕೆ. ಕ್ಯಾಮೇನಹಳ್ಳಿ ಸುತ್ತಮುತ್ತಲ ಬಿಲೋಟಿ, ಹೊನ್ನಾರನಹಳ್ಳಿ, ತಿಮ್ಮನಹಳ್ಳಿ ಮತ್ತು ತುಂಬಗಾನಹಳ್ಳಿ ಗ್ರಾಮಗಳಲ್ಲಿ ಕ್ಯಾಮೇನಹಳ್ಳಿ ಜಾತ್ರೆ ನಡೆಯುವ ಅಷ್ಟೂ ದಿನ ಹಬ್ಬದ ವಾತಾವರಣ ಇರುತ್ತದೆ. ಸುತ್ತಮುತ್ತಲ ಗ್ರಾಮಸ್ಥರು ಭಕ್ತರಿಗೆ ಪ್ರಸಾದದ ಸೌಕರ್ಯ ಕಲ್ಪಿಸುತ್ತಾರೆ. ಸುತ್ತಮುತ್ತಲ ಮಹಿಳೆಯರು ಕಾಲ್ನಡಿಗೆಯಲ್ಲಿ ಆರತಿ ಹೊತ್ತು ತರುತ್ತಾರೆ.

ಇದನ್ನೂ ಓದಿ: ಅರ್ಚಕರ ಮಧ್ಯೆ ಜಗಳ: ಕ್ಯಾಮೇನಹಳ್ಳಿ ಆಂಜನೇಯ ದೇಗುಲಕ್ಕೆ ಬೀಗ, ಜಾತ್ರೆಗೆ ಅಡ್ಡಿ

ಇದನ್ನೂ ಓದಿ: ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಗೆ ಭಕ್ತರಿಗೆ ನಿರ್ಬಂಧ ; ಸರಳ ಕಾರ್ಣಿಕ ಆಚರಣೆಗೆ ನಿರ್ಧಾರ

2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್