ಕಡಲ ತಡಿಯಲ್ಲಿ ಬಣ್ಣದೋಕುಳಿಯ ಹಬ್ಬ; ವೆಂಕಟರಮಣ ಜಾತ್ರೆಯಲ್ಲಿ ಬಣ್ಣದಲ್ಲಿ ಮಿಂದೆದ್ದ ಭಕ್ತಸಂಕುಲ
ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ವೆಂಕಟರಮಣ ದೇವರ ಉತ್ಸವ ನಡೆಯುತ್ತಿದೆ. ಅದೇ ಉತ್ಸವ ನಿನ್ನೆ(ಫೆ.08) ಕಲರ್‌ಫುಲ್ ಆಗಿತ್ತು. ಕಾರ್ ಸ್ಟ್ರೀಟ್‌ನಲ್ಲಿ ವೆಂಕಟ್ರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆದಿತ್ತು.
ಮಂಗಳೂರು: ಬಣ್ಣದಲ್ಲಿ ಮಿಂದೇಳೋ ಹೋಳಿ ಹಬ್ಬ(Holi Celebration) ಇನ್ನೂ ದೂರ ಇದೆ. ಆದ್ರೆ ಮಂಗಳೂರಿನಲ್ಲಿ ಮಾತ್ರ ಈಗ್ಲೇ ಓಳಿಯ ಆಚರಣೆಯಾಗಿದೆ. ವೆಂಕಟರಮಣ ಜಾತ್ರೆಯಲ್ಲಿ( Venkataramana Jatre) ಭಕ್ತರು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಮಕ್ಕಳ, ಹಿರಿಯರು, ಯುವಕ-ಯುವತಿಯರು ಬಣ್ಣಗಳನ್ನು ಎರಚಿ ಬಣ್ಣದಲ್ಲೇ ಮಿಂದೆದ್ದಿದ್ದಾರೆ. ಕೈಯಲ್ಲಿ ಪಿಚಕಾರಿ ಹಿಡಿದು ಬಣ್ಣದೋಕುಳಿಯಾಡಿದ್ದಾರೆ. ಇದ್ರ ನಡುವೆ ಚಂಡೆ ಸದ್ದಿಗೆ ಹೆಜ್ಜೆ ಹಾಕುತ್ತ ಎಲ್ಲರೂ ಕುಣಿದು ಎಂಜಾಯ್ ಮಾಡಿದ್ದಾರೆ.
ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ವೆಂಕಟರಮಣ ದೇವರ ಉತ್ಸವ ನಡೆಯುತ್ತಿದೆ. ಅದೇ ಉತ್ಸವ ನಿನ್ನೆ(ಫೆ.08) ಕಲರ್‌ಫುಲ್ ಆಗಿತ್ತು. ಕಾರ್ ಸ್ಟ್ರೀಟ್‌ನಲ್ಲಿ ವೆಂಕಟ್ರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆದಿತ್ತು. ನಿನ್ನೆ ಈ ದೇವರ ಅವಭೃತ ಸ್ನಾನ ನಡೆದು ಆ ಬಳಿಕ ದೇವರು ಗರ್ಭಗುಡಿ ಸೇರಿತ್ತು. ಈ ವೇಳೆ ದೇವರ ಈ ಸ್ನಾನವನ್ನ ಬಣ್ಣದ ಹಬ್ಬವನ್ನಾಗಿ ಆಚರಿಸುವ ಮೂಲಕ ಮುಂಜಾನೆಯಿಂದ ಸಂಜೆಯವರೆಗೂ ಎಲ್ಲಾ ಭಕ್ತರೂ ಬಣ್ಣದ ಆಟದಲ್ಲೇ ಮುಳುಗಿ ಫುಲ್ ಎಂಜಾಯ್ ಮಾಡ್ತಾರೆ. ಚಂಡೆ ವಾದ್ಯಕ್ಕೆ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದ್ರು.
ಇನ್ನು ವೆಂಕಟ್ರಮಣ ದೇವರ ರಥೋತ್ಸವ ಅಂದ್ರೆ ಎಲ್ಲಾ ಬಂಧುಗಳು ಸೇರೋ ಹಬ್ಬ . ವರ್ಷಕ್ಕೊಮ್ಮೆ ತಮ್ಮ ಆತ್ಮೀಯರನ್ನ ಭೇಟಿಯಾಗೋ ಒಂದು ಸದಾವಕಾಶವೂ ಸಿಕ್ಕಂತಾಗುತ್ತೆ. ಕೆಲಸದ ಮೇಲೆ ದೂರ ದೂರ ಆಗಿರೋರು ಈ ಹಬ್ಬದ ವೇಳೆ ಇಲ್ಲಿ ಸಂಗಮವಾಗ್ತಾರೆ. ಅದ್ರಲ್ಲೂ ರಥೋತ್ಸವ ಮಿಸ್ ಮಾಡಿಕೊಂಡ್ರೂ ಈ ಓಕುಳಿ ಹಬ್ಬವನ್ನ ಮಿಸ್ ಮಾಡಿಕೊಳ್ಳೋದಿಲ್ಲ. ಮುಂಜಾನೆಯಿಂದ ಸಂಜೆವರೆಗೂ ಬಣ್ಣದ ಎರಚಾಟ, ಹಾಡು , ಕುಣಿತ ನಿರಂತರವಾಗಿ ಸಾಗುತ್ತೆ. ಒಟ್ನಲ್ಲಿ ಕೊರೊನಾ ನಡುವೆ ಜಾತ್ರೆಗಳೆಲ್ಲಾ ಬಂದ್ ಆಗಿದ್ವು. ಆದ್ರೀಗ ಸೋಂಕು ಕಡಿಮೆಯಾಗ್ತಿದ್ದಂತೆ ಮತ್ತೆ ಉತ್ಸವಗಳು ಆರಂಭವಾಗಿವೆ. ಅದ್ರಲ್ಲೂ ಕರಾವಳಿಯ ಈ ಬಣ್ಣದೋಕುಳಿ ಕಲರವ ಸೃಷ್ಟಿಸಿದೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು
ಇದನ್ನೂ ಓದಿ: ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ನೀವೂ ನಟಿಸಬಹುದು; ‘ರಿಯಲ್ ಸ್ಟಾರ್’ ನೀಡಿದ ಸೂಪರ್ ಅವಕಾಶ