ಸತೀಶ್ ಜಾರಕಿಹೊಳಿ ಸ್ಮಶಾನವನ್ನ ಪ್ರೀತಿಸುವವರು, ಹಿಂದೂ ಸಂಸ್ಕೃತಿಯನ್ನ ದ್ವೇಷಿಸುತ್ತಾರೆ: ಸಂಸದ, ನಟ ಜಗ್ಗೇಶ್

ಸತೀಶ್ ಜಾರಕಿಹೊಳಿಗೆ ಏನೂ ಗೊತ್ತಿಲ್ಲ, ಯಾಕಂದರೆ ಅವರು ವಾಮಾಚಾರ ಫ್ಯಾಮಿಲಿಯವರು ಎಂದು ಕೆಂಪೇಗೌಡ ಏರ್​​​ಪೋರ್ಟ್​ ಬಳಿ ಸಂಸದ ನಟ ಜಗ್ಗೇಶ್ ಹೇಳಿಕೆ ನೀಡಿದರು.

ಸತೀಶ್ ಜಾರಕಿಹೊಳಿ ಸ್ಮಶಾನವನ್ನ ಪ್ರೀತಿಸುವವರು, ಹಿಂದೂ ಸಂಸ್ಕೃತಿಯನ್ನ ದ್ವೇಷಿಸುತ್ತಾರೆ: ಸಂಸದ, ನಟ ಜಗ್ಗೇಶ್
ಸಂಸದ, ನಟ ಜಗ್ಗೇಶ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 09, 2022 | 4:03 PM

ದೇವನಹಳ್ಳಿ: ಸತೀಶ್ ಜಾರಕಿಹೊಳಿಗೆ (Satish Jarkiholi) ಏನೂ ಗೊತ್ತಿಲ್ಲ, ಯಾಕಂದರೆ ಅವರು ವಾಮಾಚಾರ ಫ್ಯಾಮಿಲಿಯವರು ಎಂದು ಕೆಂಪೇಗೌಡ ಏರ್​​​ಪೋರ್ಟ್​ ಬಳಿ ಸಂಸದ ನಟ ಜಗ್ಗೇಶ್ ಹೇಳಿಕೆ ನೀಡಿದರು. ಸತೀಶ್ ಜಾರಕಿಹೊಳಿ ಸ್ಮಶಾನ ಪ್ರೀತಿಸುವವರು, ಹಿಂದೂ ಸಂಸ್ಕೃತಿಯನ್ನ ದ್ವೇಷಿಸುತ್ತಾರೆ. ಮಾಟಮಂತ್ರ, ಮಾಯಾಜಾಲ ಮಾಡುವಂತಹವರು. ಮುಸ್ಲಿಂ ಧರ್ಮದ ವಿರುದ್ಧ ಮಾತಾಡಿದರೆ ಅವರ ಪರಿಣಾಮ ವಿಕೃತವಾಗಿರುತ್ತದೆ. ನಮ್ಮ ಹಿಂದೂಗಳು ಶಾಂತಿಪ್ರಿಯರು, ಕ್ಷಮಾಗುಣವುಳ್ಳವರು. ಅವರು ಕ್ಷಮಿಸಿದ್ದಾರೆ ಅಂತ ಪದೆ ಪದೆ ಮಾತನಾಡಲು ಹೋಗಬೇಡಿ. ಅವರು ಎದ್ದುನಿಂತರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡುತ್ತಾರೆ ಎಂದು ನಟ ಜಗ್ಗೇಶ್ ಹೇಳಿದರು. ಡಿಕ್ಷನರಿ ಕಂಡುಹಿಡಿದದ್ದು, ಆಂಗ್ಲರು. ಆಂಗ್ಲರಿಗೆ ದೇಶ ಹೊಡೆದು ಆಳುವ ಚಿಂತೆನೆಯಿತ್ತು. ಅವರಿಗೆ ದೇಶವನ್ನ ಕೂಡಿಸಿ ಒಗ್ಗಟ್ಟಾಗಿರಲಿ ಅನ್ನುವ ಚಿಂತನೆ ಇರಲಿಲ್ಲ. ಅವರು ಸಾವಿರ ಅರ್ಥ ಕೊಡಬಹುದು ಆದರೆ ನೀವು ಹಿಂದೂವಾಗಿ ಈ ಮಣ್ಣಲ್ಲಿ ಜನಿಸಿದವರು. ಸರ್ವೆಜನ ಸಖಿನೋ ಭವಂತು ಅಂತ ಹೇಳೋ ಧರ್ಮ ಯಾವುದಾದರು ಇದರೆ ಅದು ನಮ್ಮ ಹಿಂದೂ ಧರ್ಮ‌.

ಸತೀಶ್​ ಜಾರಕಿಹೊಳಿ ಹಿಂದೂ ಹೇಳಿಕೆ ವಿರುದ್ಧ ಬದ್ಧತೆಯಿದ್ದರೆ ಕಾಂಗ್ರೆಸ್ ಕ್ರಮಕೈಗೊಳ್ಳಬೇಕು: ಸಿಎಂ ಬೊಮ್ಮಾಯಿ

ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ಹಿಂಪಡೆಯಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್​​ ಪಕ್ಷ ಸತೀಶ್​ ಹೇಳಿಕೆ ಒಪ್ಪುವುದಿಲ್ಲ ಎಂದು ಹೇಳುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟತೆ ಇದ್ದರೆ ಸತೀಶ್​ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳಗಾವಿ ಜಿಲ್ಲೆಯ ರಾಯಬಾಗ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು. ಸತೀಶ್ ಹೇಳಿಕೆ ಕಾಂಗ್ರೆಸ್ ತನ್ನ ಸ್ಪಷ್ಟನೆ ನೀಡಲಿ. ಇದನ್ನು ನಾವು ಹೇಗೆ ತೆಗೆದುಕೊಂಡು ಹೋಗುತ್ತೇವೆ ಎನ್ನುವುದಕ್ಕಿಂತ, ಕಾಂಗ್ರೆಸ್​​ ಇದನ್ನು ಹೇಗೆ ತೆಗೆದುಕೊಂಡು ಹೋಗುತ್ತೆ ಅನ್ನೋದು ಮುಖ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಒಂದು ನೂರು ವರ್ಷದ ಹಳೆ ಪಕ್ಷ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವ ಹಾಗೆ ಇವರು ನಡೆದುಕೊಳ್ಳುತ್ತಾರೆ. ಭಾರತವನ್ನು ಗೊಂದಲದಲ್ಲಿಟ್ಟು ಆಳಬೇಕು ಎನ್ನುವುದು ಮೂಲ ಸಿದ್ದಾಂತ ಮತ್ತೊಮ್ಮೆ ಪ್ರಕಟವಾಗಿದೆ. ರಾಹುಲ್ ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನೊಂದು ಕಡೆ ಈ ರೀತಿಯ ಹೇಳಿಕೆಗಳು ಬಂದಾಗ ಸುಮ್ಮನಿರುತ್ತಾರೆ. ಅವುಗಳಿಗೆ ಇನ್ ಡೈರೆಕ್ಟ್ ಆಗಿ ಬೆಂಬಲ ನೀಡುತ್ತಾರೆ. ಈ ರೀತಿಯ ದ್ವಂದ್ವ ನೀತಿ ದೇಶಕ್ಕೆ ಹಾಗೂ ಕಾಂಗ್ರೆಸ್​ಗೆ ಸರಿಯಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:01 pm, Wed, 9 November 22