ಬರ್ತಡೇ ಪಾರ್ಟಿಯಲ್ಲಿ ಯುವಕನಿಗೆ ಚಾಕು ಇರಿತ; ಆರೋಪಿಗಳು ಪರಾರಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ಮುಂಜುನಾಥ್ ಎಂಬುವವನಿಗೆ ಮೂವರು ಸ್ನೇಹಿತರು ಚಾಕು ಇರಿದಿದ್ದಾರೆ.
ನೆಲಮಂಗಲ: ಹುಟ್ಟು ಹಬ್ಬದ ಪಾರ್ಟಿಯಲ್ಲಿ ಯುವಕನಿಗೆ ಚಾಕು ಹಾಕಿರುವ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಚಾಕು ಹಾಕಿರುವ ಘಟನೆ ನೆಲಮಂಗಲದ ಜಕ್ಕಸಂದ್ರದಲ್ಲಿ ತಡರಾತ್ರಿ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ಮುಂಜುನಾಥ್ ಎಂಬುವವನಿಗೆ ಮೂವರು ಸ್ನೇಹಿತರು ಚಾಕು ಇರಿದಿದ್ದಾರೆ. ಗಂಭೀರ ಗಾಯಗೊಂಡ ಮಂಜುನಾಥ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಘು, ಶಂಕರ, ಗಿರೀಶ್ ಎಂಬ ಮೂವರು ಸೇರಿ ಚಾಕು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಅರೋಪಿಗಳು ತಲೆಮರೆಸಿಕೊಂಡಿದ್ದಾರೆ.
ತಂದೆಯನ್ನು ಥಳಿಸಿದ ಮಕ್ಕಳು ಹಾವೇರಿ: ಮದ್ಯ ಸೇವಿಸಿ ಕಳ್ಳತನ ಮಾಡುತ್ತಿದ್ದ ಹಿನ್ನೆಲೆ 70 ವರ್ಷದ ತಂದೆಯನ್ನು ಮಕ್ಕಳು ಥಳಿಸಿದ್ದಾರೆ. ತಂದೆ ಯಲ್ಲಪ್ಪನನ್ನು ಮಕ್ಕಳಾದ ಆನಂದ್ ಮತ್ತು ಜಗದೀಶ್ ಥಳಿಸಿದ್ದಾರೆ. ಈ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಜಿಲ್ಲೆ ಬ್ಯಾಡಗಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ ಗ್ರಾಮದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಕುಡಿದು ಅಡ್ಡಾಡುತ್ತಿದ್ದ. ಹೀಗಾಗಿ ತಂದೆ ಅನ್ನೋದನ್ನ ಮರೆತು ಇಬ್ಬರು ಮಕ್ಕಳು ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಗೊಂಡಿರುವ ಯಲ್ಲಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ತಿಂಗಳ ನಂತರ ಆರೋಪಿ ಬಂಧನ ಕೋಲಾರ: ಮಹಿಳೆಯ ರುಂಡವಿಲ್ಲದ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ 4 ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರತ್ನಪ್ಪ ಬಂಧಿತ ಆರೋಪಿ. ಮೇ 2ರಂದು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪಾಪೇನಹಳ್ಳಿಯ ಮಹಿಳೆಯ ಕೊಲೆ ನಡೆದಿತ್ತು. ವೈಯಕ್ತಿಕ ದ್ವೇಷಕ್ಕೆ ರತ್ನಪ್ಪ ಮಹಿಳೆಯನ್ನು ಹತ್ಯೆಗೈದಿದ್ದು, ಬೇತಮಂಗಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ
ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು
(Three friends Knife attack on young man in birthday party at nelamangala)