AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯ ಅಕ್ರಮ ಸಂಬಂಧ ತಿಳಿಯುತ್ತಿದ್ದಂತೆ ಮಹಿಳೆ ಮನೆಗೆ ತೆರಳಿ ಹಲ್ಲೆ ನಡೆಸಿದ ಪತ್ನಿ-ಮಕ್ಕಳು

ಕೆಎಸ್​ಆರ್​ಟಿಸಿ ಡ್ರೈವರ್ ಆಗಿದ್ದ ಮಹಮ್ಮದ್ ಗೌಸ್ ಪೀರ್ ಎಂಬ ವ್ಯಕ್ತಿ ಗಂಡ ಸತ್ತಿದ್ದ ಶಿಕ್ಷಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪೀರ್​​ನ ಪತ್ನಿ-ಮಕ್ಕಳು ಮಹಿಳೆಯ ಮನೆಗೆ ನುಗ್ಗಿ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಅಕ್ರಮ ಸಂಬಂಧ ತಿಳಿಯುತ್ತಿದ್ದಂತೆ ಮಹಿಳೆ ಮನೆಗೆ ತೆರಳಿ ಹಲ್ಲೆ ನಡೆಸಿದ ಪತ್ನಿ-ಮಕ್ಕಳು
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು|

Updated on:Jan 23, 2024 | 10:47 AM

Share

ನೆಲಮಂಗಲ, ಜ.23: ತನ್ನ ಪತಿ ತನನ್ನು ಬಿಟ್ಟು ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ (Affair) ಇಟ್ಟುಕೊಂಡ ಹಿನ್ನೆಲೆ ಮನ ನೊಂದಿದ್ದ ಪತ್ನಿ ಹಾಗೂ ಆಕೆಯ ಮಕ್ಕಳು ಮಹಿಳೆ ಮನೆಗೆ ನುಗ್ಗಿ ಹಲ್ಲೆ (Assault) ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸ್ಲಾಂಪುರದಲ್ಲಿ ಈ ಘಟನೆ ನಡೆದಿದೆ. ಮಹಮ್ಮದ್ ಗೌಸ್ ಪೀರ್ ಎಂಬಾತ ತನ್ನ ಪತ್ನಿ-ಮಕ್ಕಳನ್ನು ಬಿಟ್ಟು ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಮಹಮ್ಮದ್ ಗೌಸ್ ಪೀರ್ ಪತ್ನಿ ಹಾಗೂ ಮಕ್ಕಳು ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃತ್ತಿಯಲ್ಲಿ KSRTC ಡ್ರೈವರ್ ಆಗಿದ್ದ ಮಹಮ್ಮದ್ ಗೌಸ್, ಖಾಸಗಿ ಶಾಲೆಯ ಶಿಕ್ಷಕಿಯಾಗಿರುವ ಅಂಜುಮ್ ಎಂಬ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಪತ್ನಿ ಅಮೀದಾ ಬಾನು ಹಾಗೂ ಮಕ್ಕಳು ಅಂಜುಮ್ ಮನೆ ಬಳಿ ಗಲಾಟೆ ನಡೆಸಿ ಬಳಿಕ ಹಲ್ಲೆ ಮಾಡಿದ್ದಾರೆ. ಮನೆ ಸಂಸಾರಕ್ಕೆ ಹಣ ಕೊಡದೆ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಅವಳ ಹಿಂದೆ ಹಿಂದೆ ಸುತ್ತುತ್ತಿದ್ದಾನೆ ಎಂದು ಪತಿ ವಿರುದ್ಧ ಅಮೀದಾ ಬಾನು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಡ್ರೈವರ್ ಮಹಮ್ಮದ್ ಗೌಸ್ ಪ್ರತಿ ದಿನ ಬಸ್ಸಿನಲ್ಲಿ ಓಡಾಡುತ್ತಿದ್ದ ಶಿಕ್ಷಕಿ ಅಂಜುಮ್​ಳನ್ನು ಪ್ರೀತಿ ಹೆಸರಲ್ಲಿ ಬಲೆಗೆ ಬೀಳಿಸಿಕೊಂಡಿದ್ದ. ಕಳೆದ ಎರಡು ವರ್ಷದ ಹಿಂದೆ ಅಂಜುಮ್ ಪತಿ ಸಾವನ್ನಪ್ಪಿದ್ರು, ಬಳಿಕ ಶಿಕ್ಷಕಿ ಬಾಳಲ್ಲಿ ಡ್ರೈವರ್ ಮಹಮ್ಮದ್ ಗೌಸ್ ಎಂಟ್ರಿ ಕೊಟ್ಟಿದ್ದ. ಕಳೆದ ಎರಡು ತಿಂಗಳ ಹಿಂದೆ ನಿವೃತ್ತಿ ಹೊಂದಿದ ಬಳಿಕ ತನ್ನ ಸಂಸಾರವನ್ನೂ ನಿರ್ಲಕ್ಷಿಸಿ ಆಕೆಯ ಹಿಂದೆ ಸುತ್ತುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಕೊಲೆ ಆರೋಪ

ಚಕ್ಕಡಿ, ಬೈಕ್​ ನಡುವೆ ಡಿಕ್ಕಿ; ಸವಾರ ದುರ್ಮರಣ

ಚಕ್ಕಡಿ, ಬೈಕ್​ ನಡುವೆ ಡಿಕ್ಕಿಯಾಗಿ, ಸವಾರ ಸ್ಥಳದಲ್ಲೇ ದುರ್ಮರಣಕ್ಕಿಡಾಗಿದ್ದಾನೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದ್ದು, ರೋಣ ತಾಲೂಕಿನ ಯಾವಗಲ್ ಗ್ರಾಮದ ರುದ್ರಗೌಡ ಮೃತಪಟ್ಟ ದುರ್ದೈವಿ. ಹುಲ್ಲೂರು ಗ್ರಾಮದಿಂದ ಯಲ್ಲಮ್ಮನಗುಡ್ಡಕ್ಕೆ ತೆರಳುತ್ತಿದ್ದ ಚಕ್ಕಡಿಯೂ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಇನ್ನೂ ಚಕ್ಕಡಿಯಲ್ಲಿದ್ದ ಮೂವರು ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:42 am, Tue, 23 January 24