Yelahanka engineer kidnap: ಯಲಹಂಕದ ರೈತ ಸಂತೆ ಬಳಿಯಿಂದ ಎಂಜಿನಿಯರ್ ಕಿಡ್ನ್ಯಾಪ್

| Updated By: ಸಾಧು ಶ್ರೀನಾಥ್​

Updated on: Feb 03, 2022 | 1:40 PM

ಎಂಜಿನಿಯರ್ ಮಾನಸ್ ಅವರನ್ನು ಅಪಹರಣ ಮಾಡಿದ್ದ ಪಾತಕಿಗಳು ಯಲಹಂಕದಿಂದ ಕೋಲಾರದತ್ತ ಹೋಗುತ್ತಿದ್ದರು. ಆ ವೇಳೆ ಐವರು ಕಿಡ್ನ್ಯಾಪರ್​​ಗಳನ್ನು ಅರೆಸ್ಟ್ ಮಾಡಿದ ಯಲಹಂಕ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ 30 ಲಕ್ಷ ರೂಪಾಯಿ ಒತ್ತೆ ಹಣಕ್ಕಾಗಿ ಕಿಡ್ನ್ಯಾಪ್ ಮಾಡಿದ್ದಾಗಿ ಹೇಳಿದ್ದಾರೆ.

Yelahanka engineer kidnap: ಯಲಹಂಕದ ರೈತ ಸಂತೆ ಬಳಿಯಿಂದ ಎಂಜಿನಿಯರ್ ಕಿಡ್ನ್ಯಾಪ್
ಯಲಹಂಕದ ರೈತ ಸಂತೆ ಬಳಿಯಿಂದ ಎಂಜಿನಿಯರ್ ಕಿಡ್ನ್ಯಾಪ್
Follow us on

ಬೆಂಗಳೂರು: ಬೆಂಗಳೂರಿನ ಯಲಹಂಕದ ರೈತರ ಸಂತೆಯ ಬಳಿ ಎಂಜಿನಿಯರ್ ಒಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳು 30 ಲಕ್ಷ ರೂಪಾಯಿ ಒತ್ತೆ ಹಣಕ್ಕೆ ಪೀಡಿಸಿದ್ದರು. ಆದರೆ 3 ಗಂಟೆಯಲ್ಲಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಯಲಹಂಕ ಪೊಲೀಸರು ಎಂಜಿನಿಯರ್ ಕಿಡ್ನ್ಯಾಪ್ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ. ಬುಧವಾರ ಬೆಳಗ್ಗೆ 9.40ಕ್ಕೆ ಎಂಜಿನಿಯರ್ ಮಾನಸ್ ಎಂಬುವವರನ್ನು ನಂದ, ಸುನಿಲ್ ಸೇರಿದಂತೆ ಐವರು ಪಾತಕಿಗಳು ಅಪಹರಣ ಮಾಡಿದ್ದರು. ಬೆಂಗಳೂರಿನ ಯಲಹಂಕದ ರೈತರ ಸಂತೆಯ ಬಳಿ ಎಂಜಿನಿಯರ್ ಮಾನಸ್ ಜತೆಗಿದ್ದ ಯುವತಿ ಪೊಲೀಸರಿಗೆ ನೀಡಿದ್ದ ಮಾಹಿತಿಯ ಮೇರೆಗೆ ಯಲಹಂಕ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದ್ದರು. ಇನ್ಸ್‌ಪೆಕ್ಟರ್ ಸತ್ಯನಾರಾಯಣ ಮತ್ತು ಟೀಂನಿಂದ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿ ನಡೆದಿದೆ. ಅಪಹರಣಕ್ಕೀಡಾಗಿದ್ದ ಎಂಜಿನಿಯರ್ ಮಾನಸ್ ಮತ್ತು ಆರೋಪಿಗಳ ಮೊಬೈಲ್ ಸ್ವಿಚ್​ ಆನ್ ಆಗಿದ್ದ ಹಿನ್ನೆಲೆ ಮೊಬೈಲ್ ಲೊಕೇಷನ್ ಆಧಾರವಾಗಿಸಿಕೊಂಡು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಪಹರಣಕಾರರ ಅರೆಸ್ಟ್ ಆಗಿದೆ (Yelahanka engineer kidnap).

ಎಂಜಿನಿಯರ್ ಮಾನಸ್ ಅವರನ್ನು ಅಪಹರಣ ಮಾಡಿದ್ದ ಪಾತಕಿಗಳು ಯಲಹಂಕದಿಂದ ಕೋಲಾರದತ್ತ ಹೋಗುತ್ತಿದ್ದರು. ಆ ವೇಳೆ ಐವರು ಕಿಡ್ನ್ಯಾಪರ್​​ಗಳನ್ನು ಅರೆಸ್ಟ್ ಮಾಡಿದ ಯಲಹಂಕ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ 30 ಲಕ್ಷ ರೂಪಾಯಿ ಒತ್ತೆ ಹಣಕ್ಕಾಗಿ ಕಿಡ್ನ್ಯಾಪ್ ಮಾಡಿದ್ದಾಗಿ ಹೇಳಿದ್ದಾರೆ.

ಎಂಜಿನಿಯರ್ ಮಾನಸ್ ಮತ್ತು ಆರೋಪಿ ನಂದ ಪಾಲುದಾರರು. ಎಂಜಿನಿಯರ್ ಆಗಿರುವ ಮಾನಸ್ ಕಟ್ಟಡ ನಿರ್ಮಾಣ ಕಾಂಟ್ರ್ಯಾಕ್ಟರ್ ಆಗಿದ್ದಾರೆ. ಆತ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ನಂದ ಬಳಿ ಜೆಸಿಬಿ ಮತ್ತು ಹಿಟಾಚಿ ವಾಹನಗಳನ್ನು ಬಾಡಿಗೆಗೆ ಪಡೆದಿದ್ದ. ಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಮಾನಸ್ ಬಳಿ ಪಾಲುದಾರ ನಂದ 30 ಲಕ್ಷ ಕೇಳಿದ್ದ. ಆದರೆ ಕೆಲಸ ಸರಿಯಾಗಿ ಮಾಡಿಲ್ಲ. ಹಾಗಾಗಿ ಅದೇ ಕೆಲಸ ಬೇರೆಯವರಿಂದ ಮಾಡಿಸಿದ್ದೇನೆ. ನಿಮಗೆ ಯಾವುದೇ ಹಣ ಕೊಡಬೇಕಾಗಿಲ್ಲವೆಂದು ಮಾನಸ್ ಹಣ ನೀಡಿರಲಿಲ್ಲ. ಹೀಗಾಗಿ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡಲು ಪ್ಲ್ಯಾನ್ ರೂಪಿಸಿದ್ದಾರೆ ನಂದ ಮತ್ತು ಕಿಡ್ನ್ಯಾಪ್ ಪಾಲುದಾರರು! ನಂದ ಪ್ಲ್ಯಾನ್‌ನಂತೆ ಇತರೆ ಆರೋಪಿಗಳು ಮಾನಸ್‌ನನ್ನು ಕಿಡ್ನ್ಯಾಪ್ ಮಾಡಿದ್ದರು. ಆದರೆ ಮೊಬೈಲ್​ ತಂತ್ರಜ್ಞಾನದಿಂದ ಮೇಲುಗೈ ಸಾಧಿಸಿದ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಮತ್ತು ಟೀಂ ಅಪಹರಣವಾದ ಮೂರೆ ಗಂಟೆಯಲ್ಲಿ ಯುವಕನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Also Read:
Brahma Muhurta: ಬ್ರಾಹ್ಮೀ ಮುಹೂರ್ತ ಅಂದ್ರೆ ಯಾವ ಸಮಯ? ಅದಕ್ಕೇಕೆ ಅಷ್ಟು ಮಹತ್ವ?

Also Read:
Om: ಸರ್ವೋಚ್ಚ ಸಂತೋಷ ಪಡೆಯಲು ಓಂ ಮಂತ್ರ ಪಠಿಸಿ, ಇದರಿಂದ ಆಧ್ಯಾತ್ಮವಷ್ಟೇ ಅಲ್ಲ ಆರೋಗ್ಯಕರ ಪ್ರಯೋಜವೂ ಇದೆ!

Published On - 6:46 am, Thu, 3 February 22