ಬೆಂಗಳೂರಿನಿಂದ ಜೌನ್​ಪುರಕ್ಕೆ 40 ಬಾರಿ ಹೋಗಿದ್ದ ಅತುಲ್ ಸುಭಾಷ್, ಬೆಂಗಳೂರು ಟೆಕ್ಕಿ ಸಾವಿನ ಬಳಿಕ ಪೋಷಕರು ಹೇಳಿದ್ದೇನು?

| Updated By: Digi Tech Desk

Updated on: Dec 12, 2024 | 11:01 AM

ಪತ್ನಿಯ ಕಿರುಕುಳದಿಂದ ಬೇಸತ್ತು ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಸಾವಿನ ಹಿಂದಿರುವ ಕಾರಣವನ್ನು ಅವರು ಬರೆದಿಟ್ಟಿರುವ 24 ಪುಟಗಳ ಡೆತ್​ ನೋಟ್ ಹೇಳುತ್ತದೆ. ಆದರೆ ಇನ್ನೂ ಹಲವು ವಿಚಾರಗಳ ಬಗ್ಗೆ ಪೋಷಕರು ಮಾತನಾಡಿದ್ದಾರೆ. ಪತ್ನಿ ನಿಖಿತಾ ಅತುಲ್ ವಿರುದ್ಧ 9 ಪ್ರಕರಣಗಳನ್ನು ದಾಖಲಿಸಿದ್ದಳು, ಆರು ಕೆಳ ನ್ಯಾಯಾಲಯದಲ್ಲಿದ್ದರೆ ಇನ್ನು ಮೂರು ಹೈಕೋರ್ಟ್​ನಲ್ಲಿತ್ತು.

ಬೆಂಗಳೂರಿನಿಂದ ಜೌನ್​ಪುರಕ್ಕೆ 40 ಬಾರಿ ಹೋಗಿದ್ದ ಅತುಲ್ ಸುಭಾಷ್,  ಬೆಂಗಳೂರು ಟೆಕ್ಕಿ ಸಾವಿನ ಬಳಿಕ ಪೋಷಕರು ಹೇಳಿದ್ದೇನು?
ಅತುಲ್
Image Credit source: NDTV
Follow us on

ಪತ್ನಿಯ ಕಿರುಕುಳದಿಂದ ಬೇಸತ್ತು ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಸಾವಿನ ಹಿಂದಿರುವ ಕಾರಣವನ್ನು ಅವರು ಬರೆದಿಟ್ಟಿರುವ 24 ಪುಟಗಳ ಡೆತ್​ ನೋಟ್ ಹೇಳುತ್ತದೆ. ಆದರೆ ಇನ್ನೂ ಹಲವು ವಿಚಾರಗಳ ಬಗ್ಗೆ ಪೋಷಕರು ಮಾತನಾಡಿದ್ದಾರೆ.

ಪತ್ನಿ ನಿಕಿತಾ ಅತುಲ್ ವಿರುದ್ಧ 9 ಪ್ರಕರಣಗಳನ್ನು ದಾಖಲಿಸಿದ್ದಳು, ಆರು ಕೆಳ ನ್ಯಾಯಾಲಯದಲ್ಲಿದ್ದರೆ ಇನ್ನು ಮೂರು ಹೈಕೋರ್ಟ್​ನಲ್ಲಿತ್ತು. ಅದರ ವಿಚಾರಣೆಗೆ ಹಾಜರಾಗಲು ಬೆಂಗಳೂರಿನಿಂದ ಜೌನ್​ಪುರಕ್ಕೆ 40 ಬಾರಿ ಹೋಗಿದ್ದ, ಆತ ಆಕೆಯ ಮನೆಯವರಿಂದ ತುಂಬಾ ಕಷ್ಟಪಟ್ಟಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ 1 ಕೋಟಿ ರೂ. ಕೊಟ್ಟರೆ ಪ್ರಕರಣಗಳಿಂದ ಮುಕ್ತಗೊಳಿಸಿತ್ತೇನೆ ಎಂದಿದ್ದ ಆಕೆ ಆಮೇಲೆ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಳು. ಅಷ್ಟೇ ಅಲ್ಲದೆ ಪ್ರಕರಣ ಇತ್ಯರ್ಥ ಮಾಡಿಕೊಡಲು ನ್ಯಾಯಾಧೀಶೆ ಕೂಡ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಅವರು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.

ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟರು, ನಮಗೂ ನೋವು ಕೊಟ್ಟಿದ್ದಾರೆ, ಆದರೆ ಮಗ ಇದೆಲ್ಲವನ್ನೂ ಸಹಿಸಿಕೊಂಡಿದ್ದ. 2019ರಲ್ಲಿ ಮದುವೆಯಾಗಿತ್ತು, 2020ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಕೆಯ ಮನೆಯವರು ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ನಿರಾಕರಿಸಿದ್ದರಿಂದ ಆಕೆ ಮಗನನ್ನು ಕರೆದುಕೊಂಡು 2021ರಲ್ಲಿ ಮನೆ ಬಿಟ್ಟು ಹೋಗಿದ್ದಳು.

ಮತ್ತಷ್ಟು ಓದಿ: ಡೊನಾಲ್ಡ್​ ಟ್ರಂಪ್​ ಹಾಗೂ ಮಸ್ಕ್​ರಿಂದ​ ಸಹಾಯ ಕೇಳಿದ್ದ ಬೆಂಗಳೂರು ಟೆಕ್ಕಿ

ಅದಾದ ಬಳಿಕ ವರದಕ್ಷಿಣೆ ಪ್ರಕರಣ ಸೇರಿ ಆತನ ಮೇಲೆ 9 ಪ್ರಕರಣಗಳನ್ನು ದಾಖಲಿಸಿದ್ದಳು. ಜತೆಗೆ ಆಕೆಯ ತಂದೆಗೆ ಮೊದಲೇ ಹೃದಯ ಸಂಬಂಧಿ ಕಾಯಿಲೆ ಇದ್ದರೂ ಅದನ್ನು ಮುಚ್ಚಿಟ್ಟು ಅವರ ಸಾವಿಗೆ ಅತುಲ್​ ಕಾರಣ ಎಂದು ಬಿಂಬಿಸಲು ಟ್ರೈ ಮಾಡಿದ್ದಳು.

ನ್ಯಾಯಾಲಯದಲ್ಲಿ ಅತುಲ್​, ಈ ರೀತಿಯ ಸುಳ್ಳು ಪ್ರಕರಣಗಳಿಂದಾಗಿಯೇ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗ ನಿಕಿತಾ ನೀವು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ವ್ಯಂಗ್ಯವಾಗಿ ಮಾತನಾಡಿದ್ದಳು. ಹೀಗೆ ಹೇಳಿದಾಗ ನ್ಯಾಯಾಧೀಶೆ ಕೂಡ ನಕ್ಕಿದ್ದರು.

ಅತುಲ್ ಸಹೋದರ ಮಾತನಾಡಿ, ಅಣ್ಣ ಆಕೆಗಾಗಿ ಎಲ್ಲವನ್ನೂ ಮಾಡಿದ್ದಾನೆ, ದುರಾದೃಷ್ಟವೆಂಬಂತೆ ಆತ ನನ್ನ ಬಳಿಯಾಗಲೀ ಅಪ್ಪನ ಬಳಿಯಾಗಲೀ ಏನನ್ನೂ ಹಂಚಿಕೊಂಡಿರಲಿಲ್ಲ. ಆತನ ಸಾವಿಗೆ ನ್ಯಾಯ ಸಿಗಬೇಕಿದೆ. ಆಕೆಯ ಕುಟುಂಬದವರ ಬಳಿ ಮಾತನಾಡಲು ಪೊಲೀಸ್​ ಜೌನ್​ಪುರ ತೆರಳಿದ್ದಾರೆ.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:05 pm, Wed, 11 December 24