ಬೆಂಗಳೂರಿನ ಈ ಪ್ರದೇಶಗಳಲ್ಲಿ ಎರಡು ದಿನ ವಿದ್ಯುತ್​ ವ್ಯತ್ಯಯ

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ 12 ಮತ್ತು 13 ರಂದು ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯದಿಂದಾಗಿ ವಿದ್ಯುತ್ ಕಡಿತವಾಗಲಿದೆ.ಕೋರಮಂಗಲ ಮತ್ತು ಯಲಹಂಕದಲ್ಲಿ ವಿದ್ಯುತ್ ಕಡಿತವಾಗುವ ಸಮಯ ಮತ್ತು ಪ್ರದೇಶಗಳನ್ನು ಬೆಸ್ಕಾಂ ಘೋಷಿಸಿದೆ.ಪ್ರಭಾವಿತ ಪ್ರದೇಶಗಳ ಪಟ್ಟಿಯನ್ನು ಬೆಸ್ಕಾಂನ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ. ಈ ಕಾರ್ಯದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಎರಡು ದಿನ ವಿದ್ಯುತ್​ ವ್ಯತ್ಯಯ
ವಿದ್ಯುತ್​ ವ್ಯತ್ಯಯ
Follow us
ವಿವೇಕ ಬಿರಾದಾರ
|

Updated on: Dec 11, 2024 | 11:39 AM

ಬೆಂಗಳೂರು, ಡಿಸೆಂಬರ್​ 11: ಬೆಂಗಳೂರಿನ (Bengaluru) ಹಲವು ಪ್ರದೇಶಗಳಲ್ಲಿ ಗುರುವಾರ (ಡಿಸೆಂಬರ್​ 12) ಮತ್ತು ಶುಕ್ರವಾರ (ಡಿಸೆಂಬರ್​ 13) ರಂದು ವಿದ್ಯುತ್​ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ವಿದ್ಯುತ್​ ಸರಬರಾಜಿನಲ್ಲಿ ಅಡಣೆಯಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ (BESCOM) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಎಲ್ಲೆಲ್ಲಿ ವಿದ್ಯುತ್​ ವ್ಯತ್ಯಯ

ಕೋರಮಂಗಲ ವಿಭಾಗದ ದೇವರಬೀಸನಹಳ್ಳಿ ಮತ್ತು ಅಡುಗೋಡಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವ ಕಾರಣ, ಕೇಂದ್ರ ವ್ಯಾಪ್ತಿಯಲ್ಲಿ ಗುರುವಾರ (ಡಿಸೆಂಬರ್​ 12)ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವ್ಯತ್ಯಯವಾಗುವ ಸ್ಥಳಗಳು: ಬೆಳ್ಳಂದೂರು, ಆರ್‌ಎಂಜೆಡ್. ಎಕೊಸ್ಪೇಸ್ ಎಕೊ ವರ್ಲ್ಡ್, ದೇವರ ಬೀಸನಹಳ್ಳಿ, ಕರಿಯಮ್ಮನ , 25 ಆಸ್ಪತ್ರೆ, ಪಾಸ್‌ಪೋರ್ಟ್ ಆಫೀಸ್, ಶೋಭ ಅಪಾರ್ಟ್‌ಮೆಂಟ್, ಹೊರ ವರ್ತುಲ ರಸ್ತೆ, 5ನೇ ಇಂಡಸ್ಟ್ರಿಯಲ್ ಲೇಔಟ್, ಕೋರಮಂಗಲ, ಮಡಿವಾಳ, ವೆಂಕಟೇಶ್ವರ ಬಡಾವಣೆ ಮತ್ತು ಸುತ್ತಮುತ್ತ ವಿದ್ಯುತ್ ಇರಲ್ಲ.

ಚಿಕ್ಕ ಆಡುಗೋಡಿ, thech ಕಾಲೊನಿ, ಲ್ಯಾಂಡ್ ಹೋಲ್ಡಿಂಗ್ ಬಿಲ್ಡಿಂಗ್, ಸೇಂಟ್ ಜಾನ್ ಸ್ಟಾಫ್ ಕ್ವಾಟ್ರಸ್. ಮಾರುತಿನಗರ, ಅಡುಗೋಡಿ 7 ಮತ್ತು 8ನೇ ಬ್ಲಾಕ್, ಸಿ.ಎ.ಆರ್. ಪೊಲೀಸ್ ಕ್ವಾಟ್ರಸ್, ಆಡುಗೋಡಿ ಮುಖ್ಯ ರಸ್ತೆ, ಸೇಂಟ್ ಜಾನ್ ಆಸ್ಪತ್ರೆ, ಮಡಿವಾಳ, ಮಾರುತಿ ನಗರ, ಡಾಲರ್ಸ್ ಕಾಲೊನಿ, 100 ಅಡಿ ರಿಂಗ್ ರಸ್ತೆ, ಆರ್ಯಾಕ್ ಕಂಪನಿ, ಬಿ.ಜಿ.ರಸ್ತೆ, ಕೆ.ಹೆಚ್.ಬಿ. ಕಾಲೊನಿ, 5ನೇ ಬ್ಲಾಕ್ ಇಂಡಸ್ಟ್ರಿಯಲ್, ಕೋರಮಂಗಲ, ಮೈಕ ಮೈಕೊ 3, 4, 5 ಮತ್ತು 6ನೇ ಬ್ಲಾಕ್ ಕೋರ ಮಂಗಲ, ಭುವನಪ್ಪ ಕಾವೇರಿ ಬಡಾವಣೆ, ಇಂಡಸ್ಟ್ರಿಯಲ್ ಲೇಔಟ್, ಎಸ್. ಜಿ.ಪಾಳ್ಯ, 2ನೇ ಬ್ಲಾಕ್ ಧವನ್ ಜ್ಯೂಯಲರಿ, ಮಡಿವಾಳ ಸಂತೆ, ಸಿದ್ದಾರ್ಥ ಕಾಲೊನಿ, ಹ್ಯಾಪಿ ಮೈಂಡ್ ಕಂಪನಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ಕಟ್​ ಆಗಲಿದೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ ಸಂಚರಿಸುವ ಮುನ್ನ ಗಮನಿಸಿ: ಸದಾ ಇರುತ್ತೆ ಟ್ರಾಫಿಕ್ ಜಾಮ್

ಅದೇ ರೀತಿಯಾಗಿ ಬೆಂಗಳೂರು ಉತ್ತರ ವೃತ್ತ ಅಟ್ಟೂರು ಯಲಹಂಕ ಎಂಯುಎಸ್​ಎಸ್​ದಲ್ಲಿನ ಕೆಲವು ಪ್ರದೇಶಗಳಲ್ಲಿ ಶುಕ್ರವಾರ (ಡಿಸೆಂಬರ್​ 13) ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್​ ಅಡಚಣೆ ​ಉಂಟಾಗಲಿದೆ.

ಕೆಎಂಎಫ್​​, ಮದರ್​ ಡೈರಿ, ಎಸ್​ಎಸ್​ಎಸ್​ 208, ಎಸ್​ಎಸ್​ಎಸ್​ 407, ಉನ್ನಿಕೃಷ್ಣನ್​ ರಸ್ತೆ, ಬಿ ಸೆಕ್ಟರ್​​, ಎನ್​ಇಎಸ್​ ರಸ್ತೆ, ಸಿಎಂ ಎನ್ಕ್ಲೇವ್​​, ಮಾತೃ ಲೇಔಟ್​, ಯಲಹಂಕ ಓಲ್ಡ್​ ಟೌನ್​​, ಯಲಹಂಕ ಎಂಯುಎಸ್​​ಎಸ್​, ಸೋಮೇಶ್ವರನಗರ, ಕನಕನಗರ, ನ್ಯಾಯಾಂಗ ಬಡವಾಣೆ, ಗಾಂಧಿ ನಗರ, ಹಳೆಯ ಪಟ್ಟಣ ಬಿಬಿಎಂಪಿ ರಸ್ತೆ, ಕರೆ, ಬಿಬಿಎಂಪಿ ರಸ್ತೆ ಕೋಡಿ ರೋಡ್​, ಪುರವಂಕರ ಅಪಾರ್ಟ್​​ಮೆಂಟ್​, ಆರ್​ಎಂ ಝೆಡ್​​ ಮಾಲ್​, ಆರ್​ಎಂ ಝಡ್​ ರೆಸಿಡೆನ್ಸಿಯಲ್​, ಅಟ್ಟೂರು, ಕೋರಮಂಗಲಮ ವಿಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ಕಟ್​ ಆಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು