ಬೆಂಗಳೂರಿನಲ್ಲಿ 15 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸ್ ಜಪ್ತಿ; ಐವರು ವಶಕ್ಕೆ
15 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸ್(ತಿಮಿಂಗಿದ ವಾಂತಿ)ನ್ನ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 49 ಕೆಜಿ ಅಂಬರ್ಗ್ರೀಸ್ನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: 15 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸ್(ತಿಮಿಂಗಿಲದ ವಾಂತಿ)ನ್ನ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಸಾಜೀರ್, ಸಲೀಂ, ಚಾಲ್ಸ್, ವಿಜು, ನೌಶಾದ್ ಬಂಧನಕ್ಕೊಳಗಾದ ಆರೋಪಿಗಳು. ಇವರು ಕೇರಳದಿಂದ ಬಂದು ಬೆಂಗಳೂರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಯತ್ನಿಸಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 15 ಕೋಟಿ ರೂ ಬೆಲೆಬಾಳುವ 49 ಕೆಜಿ ಅಂಬರ್ಗ್ರೀಸ್(ತಿಮಿಂಗಿಲದ ವಾಂತಿ)ನ್ನ ಜಪ್ತಿ ಮಾಡಿದ್ದಾರೆ. ಇನ್ನು ಈ ಗ್ಯಾಂಗ್ ಅಂಬರ್ಗ್ರೀಸ್ನ್ನ ತ್ರಿಶ್ಶೂರ್ನ ಮೀನುಗಾರರ ಬಳಿ ಖರೀದಿಸಿದ್ದರಂತೆ. ಈ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬರ್ ಗ್ರೀಸ್ ಎಂದರೇನು? ಎಲ್ಲಿ ಬಳಸಲಾಗುತ್ತದೆ
ಇದು ತಿಮಿಂಗಿಲಗಳಿಂದ ಉತ್ಪತ್ತಿಯಾದಾಗ ಅಂಬರ್ ಗ್ರೀಸ್ ಸಮುದ್ರದ ವಾಸನೆ, ಮಲದ ವಾಸನೆಯನ್ನು ಹೊಂದಿರುತ್ತದೆ. ಗಟ್ಟಿಯಾಗಲು ಆರಂಭಿಸಿದಾಗ ಅದು ಸಿಹಿ ವಾಸನೆಯ ಪರಿಮಳವನ್ನು ಅಭಿವೃದ್ಧಿಪಡಿಸುತ್ತದೆ. ಇದನ್ನು ಐಷಾರಾಮಿ ಸುಗಂಧ ದ್ರವ್ಯಗಳಲ್ಲಿ ಮತ್ತು ಕೆಲವು ಸಾಂಪ್ರದಾಯಿಕ ಔಷಧಿಗಳಲ್ಲಿಯೂ ಬಳಸಲಾಗುತ್ತದೆ.
ಅಕ್ರಮವಾಗಿ ಬೋಟ್ನಲ್ಲಿ ಸಾಗಿಸುತ್ತಿದ್ದ 2.90 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ
ಉತ್ತರ ಕನ್ನಡ: ಜಿಲ್ಲೆಯ ಮಾಜಾಳಿ ಬಳಿ ಸಮುದ್ರದಲ್ಲಿ ಅಕ್ರಮವಾಗಿ ಬೋಟ್ನಲ್ಲಿ ಸಾಗಿಸುತ್ತಿದ್ದ 2.90 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ ಮಾಡಲಾಗಿದೆ. ಗೋವಾದಿಂದ ಫೆನ್ನಿ, ವಿಸ್ಕಿ, ಉರಾಕ್ ಸೇರಿದಂತೆ ಹಲವು ಬ್ರ್ಯಾಂಡ್ಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕರಾವಳಿ ಕಾವಲುಪಡೆ ಇನ್ಸ್‌ಪೆಕ್ಟರ್ ನಿಶ್ಚಲ್ ಕುಮಾರ್ ನೇತೃತ್ವದ ತಂಡದಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಬೋಟ್ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಕಾರವಾರ ಕರಾವಳಿ ಕಾವಲುಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 1 ಕೋಟಿ ರೂ. ನಗದು ಹಣ ಜಪ್ತಿ
ದೇವರ ಮುಂದೆ ಹಚ್ಚಿದ್ದ ದೀಪದಿಂದ ಹೊತ್ತಿ ಉರಿದ ಮನೆ
ಧಾರವಾಡ: ನಗರದ ಲೈನ್ ಬಜಾರ್ ಬಳಿಯ ಕೊರವರ ಓಣಿಯಲ್ಲಿ ದೇವರ ಮುಂದೆ ಹಚ್ಚಿದ್ದ ದೀಪದಿಂದ ಮನೆಯೇ ಹೊತ್ತಿ ಉರಿದ ಘಟನೆ ನಡೆದಿದೆ. ಮಹಾದೇವಪ್ಪ ಭಜಂತ್ರಿ ಎಂಬುವರಿಗೆ ಸೇರಿದ್ದ ಮನೆ ಇದಾಗಿದ್ದು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತುಗಳು ನಾಶವಾಗಿದ್ದು, ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Sat, 1 April 23