Bengaluru: ಹೊಸ ಸಿಮ್ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಗೆ 2.5 ಲಕ್ಷ ಹಣ ವಂಚನೆ

ನೀವು ಹೊಸ ಸಿಮ್​ ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗಬಹುದು. ಹೌದು ಹೊಸ ಸಿಮ್​ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ವಂಚಿಸಿರುವ ಘಟನೆ ನಡೆದಿದೆ.

Bengaluru: ಹೊಸ ಸಿಮ್ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಗೆ 2.5 ಲಕ್ಷ ಹಣ ವಂಚನೆ
ಹಣ ಕಳೆದುಕೊಂಡವರು
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 09, 2023 | 10:55 AM

ಬೆಂಗಳೂರು: ನೀವು ಹೊಸ ಸಿಮ್(​New Sim)ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗಬಹುದು. ಹೌದು ಹೊಸ ಸಿಮ್​ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 2.5 ಲಕ್ಷ ಹಣ ವಂಚನೆ ಮಾಡಿದ ಘಟನೆ ನಗರದ ಚಿಕ್ಕಸಂದ್ರದಲ್ಲಿ ನಡೆದಿದೆ. ಉದ್ಯಮಿ ಶಿವಕುಮಾರ್​ಗೆ ವಂಚನೆಗೊಳಗಾದವರು. ಬ್ಯಾಂಕ್​ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್​ ಡೆಡ್ ಆದ ಹಿನ್ನೆಲೆ ಹೊಸ ಸಿಮ್ ಖರೀದಿ ಮಾಡಿದ್ದಾರೆ. ಬಳಿಕ ಸಿಮ್ ಅಕ್ಟಿವೇಶನ್ ವೇಳೆ ಓಟಿಪಿಯನ್ನ ಪಡೆದು, ಬ್ಯಾಂಕ್​ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿಗೆ ಕನ್ನ ಹಾಕಿದ್ದಾರೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫುಡ್ ಡೆಲಿವರಿಗೆಂದು ತೆಗೆದುಕೊಂಡ ಸ್ಕೂಟರ್ ಅಕ್ರಮವಾಗಿ ಮಾರಾಟ; ಕೇಸ್​ ದಾಖಲು

ಬೆಂಗಳೂರು: ಫುಡ್ ಡೆಲಿವರಿಗೆಂದು ಗೋಪಾಲ್ ನಾಯ್ಡು ಅಲಿಯಾಸ್ ಲಲಿತ್ ಕುಮಾರ್ ಎಂಬಾತ ಸ್ಕೂಟರ್​ನ್ನು ಬಾಡಿಗೆಗೆ ಪಡೆದಿದ್ದ. ಬಳಿಕ ಇದೇ ಸ್ಕೂಟರ್​ನ್ನ ನಕಲಿ ದಾಖಲೆ ಸೃಷ್ಟಿಸಿ ಹಿಂದೂಪುರ ಮೂಲದ ಅಶೋಕ್ ಮಾನೆ ಎಂಬುವವರಿಗೆ ಮಾರಾಟ ಮಾಡಿದ್ದ. ಹೌದು ಆನ್ ಟ್ರ್ಯಾಕ್ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್ ಕಂಪನಿ ಹೆಸರಿನಲ್ಲಿದ್ದ ಬೈಕ್​ನ್ನು ತನ್ನ ಹೆಸರಿನಲ್ಲಿ ನಕಲಿ ಆರ್​ಸಿ, ಇನ್ಷ್ಯೂರೆನ್ಸ್ ಸೇರಿದಂತೆ ಹಲವು ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ.

ಇದನ್ನೂ ಓದಿ:ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಸಾಲು ಸಾಲು ದರೋಡೆ, ವಂಚನೆಗಳು; ಜನರಲ್ಲಿ ಆತಂಕ

ಜಿಪಿಎಸ್ ಟ್ರ್ಯಾಕರ್​ನಿಂದ ಹೊರಬಿತ್ತು ವಂಚನೆ ಪ್ರಕರಣ

ಸ್ಕೂಟರ್​ಗೆ ಅಳವಡಿಸಿದ್ದ ಜಿಪಿಎಸ್​ನಿಂದ ಟ್ರ್ಯಾಕ್​ ಮಾಡಿದ್ದ ಕಂಪನಿಯ ಸಿಬ್ಬಂದಿಗಳು, ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅಶೋಕ್ ಮಾನೆ ಕೊಂಡಿದ್ದ ಬೈಕ್​ನ್ನು ತಡೆದಿದ್ದಾರೆ. ಇದು ನಮ್ಮ ಕಂಪನಿಯ ವಾಹನ ಬಾಡಿಗೆ ಕೊಟ್ಟಿದೇವೆ. ನೀವ್ಯಾಕೆ ಅಕ್ರಮವಾಗಿ ತೆಗೆದುಕೊಂಡಿದ್ದಿರಾ? ಎಂದು ಪ್ರಶ್ನಿಸಿದಾಗ, ವಂಚನೆ ಪ್ರಕರಣ ಬಯಲಿಗೆ ಬಂದಿದೆ. ರಿಜಿಸ್ಟ್ರೇಷನ್ ಆ್ಯಪ್​ ನಲ್ಲಿ ಗಾಡಿ ನಂಬರ್​ ಹೊಡೆದು ನೋಡಿದಾಗ on track ಕಂಪನಿಯ ಹೆಸರಿನಲ್ಲಿತ್ತು.

50 ಸಾವಿರ ಹಣಕ್ಕೆ ಗಾಡಿ ಮಾರಿದ್ದ ಆಸಾಮಿ

ಇನ್ನು ಇತ ಸ್ಕೂಟರ್​ನ್ನು ಬರೊಬ್ಬರಿ 50 ಸಾವಿರ ರೂಪಾಯಿಗೆ ಸೇಲ್​ ಮಾಡಿದ್ದನಂತೆ. ಈ ಕುರಿತು ಕಂಪನಿ ಸಿಬ್ಬಂದಿಗಳು ಗೋಪಾಲ್ ನಾಯ್ಡು ಎಂಬಾತ ಸ್ವಿಗ್ಗಿ ಡೆಲಿವರಿಗೆಂದು ಬಾಡಿಗೆ ಪಡೆದುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sun, 9 July 23