ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತಾಯಿಯ ಕೈಯಲ್ಲಿದ್ದ 40 ದಿನದ ಹಸುಗೂಸನ್ನು ಕದ್ದ ಖದೀಮರು
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು (ಜೂನ್13) ರಂದು ಮಧ್ಯಾಹ್ನ ಹಾಡಹಗಲೇ ತಾಯಿಯ ಕೈಯಲ್ಲಿದ್ದ 40 ದಿನದ ಹಸುಗೂಸನ್ನು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿಯ (Hubli) ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಇಂದು (ಜೂನ್13) ರಂದು ಮಧ್ಯಾಹ್ನ ತಾಯಿಯ ಕೈಯಲ್ಲಿದ್ದ 40 ದಿನದ ಹಸುಗೂಸನ್ನು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕುಂದಗೋಳದ ನೆಹರು ನಗರದ ನಿವಾಸಿ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಎಂಬುವ ದಂಪತಿಯ ಮಗುವನ್ನು ಕಳ್ಳತನ ಮಾಡಿದ್ದಾರೆ. ಉಮ್ಮೇ ಜೈನಾಬ್ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಸಂಬಂಧ ಮಾತನಾಡಿದ ಕಿಮ್ಸ್ ಅಧೀಕ್ಷಕ ಅರುಣ್ ಕುಮಾರ್ ಮಗು ಕಳ್ಳತನವಾಗಿದ್ದು ವಾರ್ಡನಿಂದ ಅಲ್ಲ ಕಾರಿಡಾರ್ ನಿಂದ. ಮಧ್ಯಾಹ್ನ ಊಟದ ಸಮಯದಲ್ಲಿ ಘಟನೆ ನಡೆದಿದೆ. ಭದ್ರತೆ ಬಿಗಿಯಾಗಿದ್ದರು ಕಳ್ಳತನ ಹೇಗೆ ನಡೆಯಿತು ಎಂಬುದರ ಕುರಿತು ಸಂಶಯ ವ್ಯಕ್ತವಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಪರಿಶಿಲನೆ ಮಾಡುತ್ತಿದ್ದಾರೆ. ಮುಕ್ಕಾಲು ಭಾಗ ಪರಿಶೀಲನೆ ಮುಗಿದಿದೆ. ಮಗುವಿಗೆ ವಾಂತಿ ಕಂಡು ಬಂದ ಹಿನ್ನೆಲೆ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ದಿನದ ಹಿಂದೆ ಚಿಕಿತ್ಸೆಗಾಗಿ ದಾಖಲಾಗಿತ್ತು ವಾಂತಿ ಕಡಿಮೆಯಾದ ಹಿನ್ನೆಲೆ ಇಂದು ಬಿಡುಗಡೆ ಮಾಡಲಾಗಿದೆ. ಚಿಕ್ಕ ಮಕ್ಕಳ ವಿಭಾಗದಿಂದ ಬಿಡುಗಡೆಗೆ ಸಿದ್ದಗೊಳಿಸಲಾಗಿತ್ತು. ಅಷ್ಠರಲ್ಲೆ ಘಟನೆ ನಡೆದಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಸ್ತೆ ದಾಟುತ್ತಿದ್ದ ಬೈಕ್ ಗೆ ವೇಗವಾಗಿ ಬಂದ ಕಾರು ಡಿಕ್ಕಿ
ಬೆಂಗಳೂರು: ರಸ್ತೆ ದಾಟುತ್ತಿದ್ದ ಬೈಕ್ ಗೆ ವೇಗವಾಗಿ ಬಂದ ಕಾರು ಡಿಕ್ಕಿಯಾದ ಘಟನೆ ಹೊಸಕೋಟೆ ತಾಲೂಕಿನ ಮಲ್ಲಿಮಾಕನಪುರ ಗೇಟ್ ಬಳಿ ಚಿಂತಾಮಣಿ ಹೊಸಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಕಾರು ಡಿಕ್ಕಿ ಹೊಡೆದ ರಬಸಕ್ಕೆ ಬೈಕ್ 200 ಅಡಿ ಮುಂದೆ ಹೋಗಿ ಬಿದ್ದಿದೆ. ಡಿಕ್ಕಿ ಹೊಡೆದ ನಂತರ ಕಾರು ಸಹ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.
ಕಾರಿನಲ್ಲಿದ್ದ 5 ಜನ ಹಾಗೂ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗಳಾಗಿವೆ, ಗಾಯಾಳುಗಳು ಹೊಸಕೋಟೆಯ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:21 pm, Mon, 13 June 22