ಸೋಂಕಿನ ದರ ಹೆಚ್ಚಾಗ್ತಿದೆ, 4ನೇ ಅಲೆ ಆಗಸ್ಟ್ವರೆಗೆ ಇರಬಹುದು, ಜನ ಕಡ್ಡಾಯವಾಗಿ ಲಸಿಕೆ ಪಡೆಯಬೇಕು: ಆರೋಗ್ಯ ಸಚಿವ ಸುಧಾಕರ್
ಕೊರೊನಾ 4ನೇ ಅಲೆ ಪ್ರಾರಂಭವಾಗಿದ್ದು, ಈ ಅಲೆ ಜೂನ್ನಿಂದ ಆಗಸ್ಟ್ವರೆಗೆ ಇರಬಹುದು ಎಂದು ಐಐಟಿ ಕಾನ್ಪುರ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರು: ಕೊರೊನಾ 4ನೇ (Covid 4th wave) ಅಲೆ ಪ್ರಾರಂಭವಾಗಿದ್ದು, ಈ ಅಲೆ ಜೂನ್ನಿಂದ ಆಗಸ್ಟ್ವರೆಗೆ ಇರಬಹುದು ಎಂದು ಐಐಟಿ ಕಾನ್ಪುರ (IIT Kanpur) ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಬೆಂಗಳೂರಿನಲ್ಲಿ (Bengaluru) ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (K Sudhakar) ಹೇಳಿದ್ದಾರೆ. ಇದು ಸ್ವಾಭಾವಿಕವಾಗಿ ಬಂದು ಹೋಗುವ ಸೋಂಕಾಗಿದ್ದು, ಇದರ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ. ಬಿಗಿಯಾದ ಕ್ರಮ ಅಗತ್ಯವಿಲ್ಲವೆಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಕಠಿಣ ಕ್ರಮ ಇರುವುದಿಲ್ಲ. ಲಸಿಕೆ ಕಡ್ಡಾಯ ಮಾಡುವಂತಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ಆದೇಶದಿಂದ ಲಸಿಕೆ ವಿತರಣೆ ಕಷ್ಟವಾಗುತ್ತಿದೆ ಎಂದರು.
ಇದನ್ನು ಓದಿ: ಬೆಂಗಳೂರಿನಲ್ಲಿ ಸೋಂಕಿನ ದರ ಶೇ 3 ರಷ್ಟಾಗಿದೆ; ಜನರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು: ಸಚಿವ ಕೆ. ಸುಧಾಕರ
ಜನರು 3ನೇ ಡೋಸ್ ಹಾಕಿಸಿಕೊಳ್ಳಬೇಕು, ಈ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ. ಮಾಸ್ಕ್ ಧರಿಸುವಂತೆ ಅರಿವು ಮೂಡಿಸುತ್ತೇವೆ, ದಂಡ ವಿಧಿಸುವುದಿಲ್ಲ. ಮಾಸ್ಕ್ ಅರಿವು ಮೂಡಿಸೋ ಮೂಲಕವೇ ನಾವು ಯಶಸ್ವಿಯಾಗುತ್ತೇವೆ. ಡೆಂಗ್ಯೂ ಪ್ರಕರಣ ಹೆಚ್ಚಳದ ಬಗ್ಗೆ ಚರ್ಚೆ ಮಾಡಿದ್ದೇವೆ. ೧೯ – ೨೦ ರಲ್ಲಿ ಡೆಂಗ್ಯೂ ಕಡಿಮೆ ಇತ್ತು, ಈಗ ೨೧-೨೩ ರಲ್ಲಿ ಡೆಂಗ್ಯೂ ಒಂದೂವರೆ ಸಾವಿರ ಹೆಚ್ಚಳ ಆಗಿದೆ. ಬೆಂಗಳೂರಿನಲ್ಲಿ ಕೂಡ ಡೆಂಗ್ಯೂ ಹೆಚ್ಚಳ ಆಗಿದೆ. ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಜೊತೆ ಮಾತಾಡಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ತಿಳಿಸಿದರು.
ರಾಜ್ಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Mon, 13 June 22