ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್​ ತಂತಿ ತಗುಲಿ 70 ಜನರ ಸಾವು: ಇಲ್ಲಿದೆ ಸಂಪೂರ್ಣ ಡೀಟೈಲ್ಸ್​

| Updated By: ವಿವೇಕ ಬಿರಾದಾರ

Updated on: Nov 20, 2023 | 1:05 PM

ರಾಜ್ಯ ರಾಜಧಾನಿ ಬೆಂಗಳೂರಿನ ಕಾಡುಗೋಡಿಯಲ್ಲಿ ರವಿವಾರ (ನ.19) ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಜೀವದಹನವಾಗಿದ್ದರು. ಬೆಸ್ಕಾಂ ವ್ಯಾಪ್ತಿಯಲ್ಲಿ ಕರೆಂಟ್​ ತಂತಿ ತುಳಿದು ಸತ್ತ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಕೂಡ ಸಾಕಷ್ಟು ಜನ ತಂತಿ ವಿದ್ಯುತ್​ ತಂತಿ ತುಳಿದು ಮೃತಪಟ್ಟಿದ್ದಾರೆ. ಹಾಗಿದ್ದರೆ ಯಾವ ವರ್ಷ ಎಷ್ಟು ಜನ ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ? ಇಲ್ಲಿದೆ ಡೀಟೈಲ್ಸ್​

ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್​ ತಂತಿ ತಗುಲಿ 70 ಜನರ ಸಾವು: ಇಲ್ಲಿದೆ ಸಂಪೂರ್ಣ ಡೀಟೈಲ್ಸ್​
ಬೆಸ್ಕಾಂ
Follow us on

ಬೆಂಗಳೂರು ನ.20: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಕಾಡುಗೋಡಿಯಲ್ಲಿ ರವಿವಾರ (ನ.19) ವಿದ್ಯುತ್ ತಂತಿ (Electrical wire) ತುಳಿದು ತಾಯಿ ಮತ್ತು ಮಗು ಸಜೀವದಹನವಾಗಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಾಯಿ ಮತ್ತು ಮಗುವಿನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಐವರನ್ನು ಅಮಾನತು ಮಾಡಲಾಗಿತ್ತು. ಹಾಗೇ ಈ ಐವರನ್ನು ಬಂಧಿಸಲಾಗಿತ್ತು. ಇದೀಗ ಈ ಅಧಿಕಾರಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ಕರೆಂಟ್​ ತಂತಿ ತುಳಿದು ಸತ್ತ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಕೂಡ ಸಾಕಷ್ಟು ಜನ ತಂತಿ ವಿದ್ಯುತ್​ ತಂತಿ ತುಳಿದು ಮೃತಪಟ್ಟಿದ್ದಾರೆ.

ಹಾಗಿದ್ದರೆ ಯಾವ ವರ್ಷ ಎಷ್ಟು ಜನ ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ? ಇಲ್ಲಿದೆ ಡೀಟೈಲ್ಸ್​

  1. 2018-19 ರಲ್ಲಿ ತಂತಿ ತಗುಲಿ 11 ಜನ ಮೃತಪಟ್ಟಿದ್ದರು. ಒಬ್ಬರು ಗಾಯಗೊಂಡಿದ್ದರು. ಒಟ್ಟು 12 ಜನರಿಗೆ ವಿದ್ಯುತ್​ ತಂತಿ ತಗುಲಿ ಶಾಕ್ ಹೊಡೆದಿತ್ತು.
  2. 2019-20 ರಲ್ಲಿ 10 ಜನ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು. ಒಟ್ಟು 13 ಜನರಿಗೆ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದಿತ್ತು.
  3. 2020-21 ರಲ್ಲಿ 9 ಜನ ಮೃತಪಟ್ಟಿದ್ದರು, ಮೂವರಿಗೆ ಗಾಯಗಳಾಗಿದ್ದವು. ಒಟ್ಟು 12 ಜನರಿಗೆ ವಿದ್ಯುತ್​ ತಂತಿ ತಗುಲಿತ್ತು.
  4. 2021-22 ರಲ್ಲಿ 13 ಜನ ಮೃತಪಟ್ಟಿದ್ದರು, ಇಬ್ಬರು ಗಾಯಗೊಂಡಿದ್ದರು. ಒಟ್ಟು 15 ಜನರಿಗೆ ತಂತಿ ತಗುಲಿತ್ತು.
  5. 2022-23 ರಲ್ಲಿ 19 ಜನ ಸಾವೀಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಒಟ್ಟು 21 ಜನರಿಗೆ ಬೆಸ್ಕಾಂ ವಿದ್ಯುತ್​ ತಂತಿ ತಗುಲಿತ್ತು.
  6. 2023-24 (2023ರ ಅಕ್ಟೋಬರ್​ ವರೆಗೆ) 8 ಜನ ಮೃತಪಟ್ಟಿದ್ದಾರೆ. ಒಟ್ಟು 8 ಜನರಿಗೆ ತಂತಿ ತಗುಲಿದೆ.
    ಕಳೆದ 5 ವರ್ಷದಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ 81 ಜನರಿಗೆ ವಿದ್ಯುತ್​ ತಂತಿ ತಗುಲಿದ್ದು, ಇದರಲ್ಲಿ ಒಟ್ಟು 70 ಜನ ಮೃತಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ