ಬೆಂಗಳೂರು: ಉಂಡ ಮನೆಗೆ ದ್ರೋಹ, ಜ್ಯುವೆಲ್ಲರಿ ಶಾಪ್ನಿಂದ ಕೆಜಿ ಕೆಜಿ ಚಿನ್ನ, ಬೆಳ್ಳಿ ಕದ್ದ ಮನೆ ಕೆಲಸದಾಳು
ಜ್ಯುವೆಲ್ಲರಿ ಶಾಪ್ ಮಾಲೀಕ ಮುಂಬೈಗೆ ತೆರಳಿದ್ದಾಗ ಜ್ಯುವೆಲರಿ ಶಾಪ್ಗೆ ನುಗ್ಗಿದ ಮನೆ ಕೆಲಸಗಾರ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅ.29 ರಂದು ನಡೆದ ಘಟನೆ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ನ.17: ಜ್ಯುವೆಲರಿ ಶಾಪ್ ಮಾಲೀಕ ಮುಂಬೈಗೆ ತೆರಳಿದ್ದಾಗ ಜ್ಯುವೆಲ್ಲರಿ ಶಾಪ್ಗೆ ನುಗ್ಗಿದ ಮನೆ ಕೆಲಸಗಾರ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷ ನಗದು ಕಳ್ಳತನ (Theft) ಮಾಡಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಅ.29 ರಂದು ನಡೆದ ಘಟನೆ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾಜಸ್ಥಾನ ಮೂಲದ ಕೇತರಾಮ್, ಜ್ಯುವೆಲ್ಲರಿ ಶಾಪ್ ಮಾಲೀಕ ಅರವಿಂದ್ ಕುಮಾರ್ ಥಾಡೆ ಅವರ ಮನೆ ಕೆಲಸಗಾರನಾಗಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸೇರಿಕೊಂಡಿದ್ದನು. ತನ್ನ ಮಾಲೀಕನೊಂದಿಗೆ ಒಳ್ಳೆಯವನಂತೆ ನಟಿಸುತ್ತಿದ್ದ ಕೇತರಾಮ್, ಆರ್ಥಿಕ ವ್ಯವಹಾರಗಳನ್ನೆಲ್ಲಾ ಅರಿತುಕೊಂಡಿದ್ದ.
ಇದನ್ನೂ ಓದಿ: ಮುಂಬೈನ ಅಂಗಡಿಯಿಂದ ₹5 ಕೋಟಿಗೂ ಅಧಿಕ ಮೌಲ್ಯದ ವಜ್ರ ಕಳವು: ಮೂವರ ಬಂಧನ
ಆದರೆ, ದಸರಾ ಹಬ್ಬ ಹಿನ್ನೆಲೆ ಅರವಿಂದ್ ಕುಮಾರ್ ಅವರು ಮುಂಬೈಗೆ ತೆರಳುವ ಸಂದರ್ಭದಲ್ಲಿ ಅವರ ಬ್ಯಾಗ್ನಲ್ಲಿದ್ದ ಬೀಗವನ್ನು ಕೇತರಾಮ್ ಕಳವು ಮಾಡಿದ್ದಾನೆ. ಬಳಿಕ ತನ್ನದೇ ಊರಿನ ರಾಕೇಶ್ ಎಂಬಾತನನ್ನು ಕರೆಸಿಕೊಂಡು ಮಾಲೀಕನ ಜ್ಯುವೆಲ್ಲರಿ ಅಂಗಡಿ ಬೀಗ ತೆರೆದು ಒಳಗೆ ನುಗ್ಗಿದ್ದಾರೆ.
ಬಳಿಕ ಅಂಗಡಿಯಲ್ಲಿದ್ದ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷ ನಗದು ಕಳ್ಳತನ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಸ್ಥಳೀಯರು ಅರವಿಂದ್ ಅವರ ಪುತ್ರನಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅರವಿಂದ್ ಮಗ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Fri, 17 November 23