Crime News: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ಸೆರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 03, 2022 | 3:22 PM

ಮಹಾನಗರದಲ್ಲಿ ಸರಣಿ ಕಳ್ಳತನ ನಡೆದಿರುವಂತಹ ಘಟನೆ ನಗರದ ಮೋಕಾ ರಸ್ತೆಯ ನಾಲ್ಕು ಅಂಗಡಿಗಳ ಶೆಟರ್​ನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ.

Crime News: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ಸೆರೆ
ಬಂಧಿತ ಆರೋಪಿಗಳು
Follow us on

ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್​ನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಘು, ಸಾಯಿ ಕಿರಣ್​ ಬಂಧಿತ ಆರೋಪಿಗಳು. ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರಿಂದ ಬಂಧನ ಮಾಡಿದ್ದು, ಖಾಸಗಿ ಕಂಪನಿಯ ಲೋಗೋ ಬಳಸಿ ಆರೋಪಿಗಳು ವಂಚಿಸುತ್ತಿದ್ದರು. ಪ್ರೈವೇಟ್ ಏಜೆನ್ಸಿ ಆಲ್ಕನ್ ಇಂಡಿಯಾ ಕಂಪನಿ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ಕೆಲಸ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲಿ ಮಾಡಲಾಗಿದ್ದು, 11 ಮೊಬೈಲ್, 2 ಸಿಪಿಯು, ಲ್ಯಾಪ್​ಟಾಪ್, 43000 ಹಣ ಜಪ್ತಿ ಮಾಡಲಾಗಿದೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಹಾನಗರದಲ್ಲಿ ಸರಣಿ ಕಳ್ಳತನ

ಬಳ್ಳಾರಿ: ಮಹಾನಗರದಲ್ಲಿ ಸರಣಿ ಕಳ್ಳತನ ನಡೆದಿರುವಂತಹ ಘಟನೆ ನಗರದ ಮೋಕಾ ರಸ್ತೆಯ ನಾಲ್ಕು ಅಂಗಡಿಗಳ ಶೆಟರ್​ನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ನಂದಿನಿ ಪಾರ್ಲರ್ ಶಾಪನಲ್ಲಿದ್ದ 36 ಸಾವಿರ ರೂಪಾಯಿ ನಗದು, ೫ ಗ್ರಾಂನ ಬಂಗಾರ ಕಳ್ಳತನ ಮಾಡಲಾಗಿದೆ. ಮೂರು ಅಂಗಡಿಗಳ ಬೀಗ ಮುರಿಯಲು ವಿಫಲ ಯತ್ನ. ಬಳ್ಳಾರಿಯ ಮೋಕಾ ರಸ್ತೆಯ ನಂದಿನಿ ಪಾರ್ಲರ್. ನಂದಾಸ್ ಸೂಪರ್ ಮಾರ್ಟ್. ಲಕ್ಷ್ಮೀ ಪದ್ಮಾವತಿ ಎಜೆನ್ಸಿಸ್. ಜೆರಾಕ್ಸ್ ಶಾಪನಲ್ಲಿ ಕಳ್ಳತನ ನಡೆದಿದೆ. ಕಳ್ಳತನಕ್ಕೆ ಯತ್ನಿಸಿದ ದೃಶ್ಯಗಳು ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರಿಂದ ಕಳ್ಳತನಕ್ಕೆ ಯತ್ನಿಸಿದ್ದು, ಮಾಸ್ಕ್ ಧರಿಸಿ ಕಬ್ಬಿಣದ ರಾಡ್​ನಿಂದ ಶೆಟರ್ ಮುರಿಯಲು ಯತ್ನಿಸಲಾಗಿದೆ. ನಿನ್ನೆ ರಾತ್ರಿ ಭಾರಿ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡ ವೇಳೆ ಕಳ್ಳತನಕ್ಕೆ ಯತ್ನಿಸಲಾಗಿದೆ. ಸ್ಥಳಕ್ಕೆ ಗಾಂಧಿನಗರ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ.

ಈಜಲು ಹೋಗಿ ವ್ಯಕ್ತಿ ಸಾವು

ದಾವಣಗೆರೆ: ಈಜಲು ಹೋಗಿ ದೇವರಬೆಳಕೆರೆ ಪಿಕ್​ಅಪ್ ಡ್ಯಾಂನಲ್ಲಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ. ತಿಪ್ಪೇಸ್ವಾಮಿ ಎ.ಸಿ (51) ಸಾವನ್ನಪ್ಪಿದ ವ್ಯಕ್ತಿ. ಪಿಕ್ ಅಪ್ ಡ್ಯಾಂ ನಲ್ಲಿ ಈಜಲು ಹೋದ ವೇಳೆ ಮೀನುಗಾರರು ಹಾಕಿದ ಬಲೆಗೆ ಸಿಲುಕಿ ದೇವರಬೆಳಕೆರೆ ನಿವಾಸಿ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.