ಬೆಂಗಳೂರು, ಜು.02: ಕ್ಷುಲ್ಲಕ ಕಾರಣಕ್ಕೆ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ(ಸೋಮವಾರ) ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಂದ್ರಶೇಖರ್ (54) ಹಾಗೂ ಶಾರದಮ್ಮ(46) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಗನ ಹೆಂಡತಿ ತವರು ಮನೆಗೆ ತೆರಳಿದ ಹಿನ್ನಲೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಮಗ ಪ್ರಶಾಂತನಿಗೆ ಕೆಲ ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಆದ್ರೆ, ಮಗ ಕುಡಿತದಿಂದ ಮನೆಗೆ ಬರುವುದು ಕಡಿಮೆ ಮಾಡಿದ್ದ. ಇದರಿಂದ ನೊಂದು ಕಳೆದ ಮೂರು ತಿಂಗಳ ಹಿಂದೆ ಪ್ರಶಾಂತನ ಹೆಂಡತಿ ಮಾವನ ಮನೆ ಬಿಟ್ಟು ತವರು ಮನೆ ಸೇರಿದ್ದಳು. ಈ ಹಿನ್ನಲೆ ಮಗನ ಬಾಳು ಹೀಗಾಯಿತು ಎಂದು ನೊಂದು ಕೊಂಡಿದ್ದ ದಂಪತಿ. ನಿನ್ನೆ(ಜು.01) ದಿನ ಎರಡನೇ ಮಗನನ್ನ ಅಂಗಡಿ ಕಳಿಸಿ ನೇಣಿಗೆ ಶರಣಾಗಿದ್ದಾರೆ. ಮಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಹೊಸಕೋಟೆ ಮೂಲದ ದಂಪತಿಗಳಾದ ಇವರು, ಹಲವು ವರ್ಷಗಳಿಂದ ಹಳೆ ಬೈಯಪ್ಪನಹಳ್ಳಿಯಲ್ಲಿ ವಾಸ ಮಾಡಿಕೊಂಡಿದ್ದರು. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಶವವಾಗಿ ಪತ್ತೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ
ದಾವಣಗೆರೆ: ಸಿಲಿಂಡರ್ ಸ್ಪೋಟವಾಗಿ ಐವರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾದ ಘಟನೆ ದಾವಣಗೆರೆ ನಗರದ ಎಸ್ ಓ ಜಿ ಕಾಲೋನಿಯ ಸರ್ಕಾರಿ ಶಾಲೆ ಪಕ್ಕದ ಮನೆಯಲ್ಲಿ ನಡೆದಿದ್ದು, ಮನೆ ಸಂಪೂರ್ಣ ಧ್ವಂಸವಾಗಿದೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೆಚ್ಚಿನ ಚಿಕಿತ್ಸೆಗೆ ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಾಯಿ ಪಾರಮ್ಮ (55), ಮಗ ಪ್ರವೀಣ್ (27), ಸೊಸೆ ಭಾಗ್ಯಾ (23), ಹಾಗೂ ಇಬ್ಬರು ವೃದ್ಧ ದಂಪತಿಗಳಿಗೆ ಗಾಯವಾಗಿದೆ. ವೃದ್ದ ದಂಪತಿಗಳ ಮನೆಯಲ್ಲಿ ಸಿಲಿಂಡರ್ ವಾಸನೆ ಬರುತ್ತದೆ ಎಂದು ನೋಡಲು ಹೋದ ವೇಳೆ ಸಿಲಿಂಡರ್ ಈ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ