ವಿಧಾನಸೌಧದ ಗುಮ್ಮಟದಲ್ಲಿ ಕಾಣಿಸಿಕೊಂಡ ಬಿರುಕು; ದಿಢೀರ್ ಪರಿಶೀಲನೆ ನಡೆಸಿದ ಸ್ಪೀಕರ್ ಯುಟಿ ಖಾದರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 20, 2024 | 4:31 PM

ವಿಧಾನಸೌಧ,(Vidhana Soudha)ದ ಪೂರ್ವ ದಿಕ್ಕಿನಲ್ಲಿ ಇರುವ ಗುಮ್ಮಟದಲ್ಲಿ ಬಿರುಕು ಮೂಡಿದ್ದು, ಇಂದು(ಶನಿವಾರ) ಸ್ಪೀಕರ್ ಯು ಟಿ ಖಾದರ್(U. T. Khader ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಇದು ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರ ಅಡಿಯಲ್ಲಿ ಬರುತ್ತದೆ. ಅವರ ಗಮನಕ್ಕೆ ತಂದು ಸರಿ ಪಡಿಸಲು ಹೇಳುತ್ತೇನೆ.

ವಿಧಾನಸೌಧದ ಗುಮ್ಮಟದಲ್ಲಿ ಕಾಣಿಸಿಕೊಂಡ ಬಿರುಕು; ದಿಢೀರ್ ಪರಿಶೀಲನೆ ನಡೆಸಿದ ಸ್ಪೀಕರ್ ಯುಟಿ ಖಾದರ್
ವಿಧಾನಸೌಧದ ಗುಮ್ಮಟದಲ್ಲಿ ಕಾಣಿಸಿಕೊಂಡ ಬಿರುಕು
Follow us on

ಬೆಂಗಳೂರು, ಜು.20: ವಿಧಾನಸೌಧ(Vidhana Soudha)ದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸ್ಪೀಕರ್ ಯು ಟಿ ಖಾದರ್(U. T. Khader) ಇಂದು(ಶನಿವಾರ) ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಹೌದು, ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಇರುವ ಗುಮ್ಮಟದಲ್ಲಿ ಬಿರುಕು ಮೂಡಿದ್ದು, ಮಳೆ ನೀರು ಸೋರಿಕೆಯಾಗುತ್ತಿದೆ. ಈ ಕುರಿತು ಮಾತನಾಡಿದ ಅವರು, ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ನಾನು ತರುತ್ತೇನೆ ಎಂದರು.

ಇದು ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರ ಅಡಿಯಲ್ಲಿ ಬರುತ್ತದೆ. ಅವರ ಗಮನಕ್ಕೆ ತಂದು ಸರಿ ಪಡಿಸಲು ಹೇಳುತ್ತೇನೆ. ಇದೊಂದು ಬಹಳ ವರ್ಷದ ಕಟ್ಟಡವಾಗಿದ್ದರಿಂದ ಕೆಲವೊಂದು ಲೋಪದೋಷ ಆಗಿರಬಹುದು. ನಾನು ಆದಷ್ಟು ಬೇಗ ಮುಖ್ಯಮಂತ್ರಿ ಅವರಿಗೆ ವಿಚಾರ ತಿಳಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ವಿಧಾನಮಂಡಲ ಕಲಾಪ: ವಿಧಾನಸೌಧದಲ್ಲಿ ಶಾಸಕರ ಹಾಜರಾತಿ ದಾಖಲು ಮಾಡುತ್ತೆ ಎಐ ಕ್ಯಾಮರಾ!

ಯಾವ ಸಚಿವರೂ ವಿಧಾನಸೌಧದ ಕೊಠಡಿಯ ಗೋಡೆ ಹೊಡೆಯುವುದಕ್ಕೆ ಅವಕಾಶವಿಲ್ಲ

ಇನ್ನು ಇತ್ತೀಚೆಗೆ ಸಚಿವರುಗಳಿಂದ ಕೊಠಡಿ ನವೀಕರಣ ವಿಚಾರವಾಗಿ ಮಾತನಾಡಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಸುಣ್ಣ ಬಣ್ಣ ಹಚ್ಚಿಕೊಳ್ಳಲು ಅವಕಾಶ ಇದೆ. ಶೌಚಾಲಯ, ಬಣ್ಣ ಬದಲಿಸಿಕೊಳ್ಳಬಹುದು. ಹಾಗೂ ನವೀಕರಣ ಮಾಡುವುದಾದರೆ ಅನುಮತಿ ಪಡೆದು ಮಾಡಬೇಕು. ವಾಸ್ತು ಪ್ರಕಾರ ವಿಧಾನಸೌಧ ಮಾಡಿದ್ದಾರೆ. ಮತ್ತೆ ಆ ರೀತಿ ಅವಕಾಶ ಕೊಡುವುದಿಲ್ಲ. ಯಾವ ಸಚಿವರೂ ಕೊಠಡಿಯ ಗೋಡೆ ಹೊಡೆಯುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Sat, 20 July 24