ಬಡ ಮಹಿಳೆಯ ಜೀವ ಉಳಿಸಿ ಕುಟುಂಬಕ್ಕೆ ಆಸರೆಯಾದ ವೈದ್ಯರು; ಏನಿದು ಅಂತೀರಾ? ಈ ಸ್ಟೋರಿ ನೋಡಿ

ಚಲಿಸುತ್ತಿದ್ದ ಬೈಕ್​ಗೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿಯಾದ ಕಾರಣ ತಲೆ ಬುರುಡೆ ಒಪನ್ ಆಗಿ, ಗಂಭೀರ ಗಾಯದಿಂದ ಸಾವು ಬದುಕಿನ ನಡುವೆ‌ ಹೋರಾಟ ನಡೆಸುತ್ತಿದ್ದ ಮಹಿಳೆಗೆ, ವೈದ್ಯರೊಬ್ಬರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ, ಜೀವ ಉಳಿಸಿದ್ದಾರೆ.

ಬಡ ಮಹಿಳೆಯ ಜೀವ ಉಳಿಸಿ ಕುಟುಂಬಕ್ಕೆ ಆಸರೆಯಾದ ವೈದ್ಯರು; ಏನಿದು ಅಂತೀರಾ? ಈ ಸ್ಟೋರಿ ನೋಡಿ
ಮಹಿಳೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 01, 2023 | 8:45 AM

ಬೆಂಗಳೂರು ಗ್ರಾಮಾಂತರ: ಇಂದು(ಜು.1) ರಾಷ್ಟ್ರೀಯ ವೈದ್ಯರ ದಿನ. ಯಾರಿಗೆ ಎಂತಹುದೇ ಆರೋಗ್ಯ ಸಮಸ್ಯೆಯಾದರೇ ಮೊದಲು ಹೋಗುವುದು ಡಾಕ್ಟರ್(Doct0r)​ ಬಳಿಗೆ, ನಂತರ ದೇವರ ಬಳಿ ಹೋಗಿ ಪ್ರಾರ್ಥಿಸುತ್ತೇವೆ. ಹೌದು ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಇಲ್ಲೊಬ್ಬ ವೈದ್ಯರು ಅರ್ಥ ಕಲ್ಪಿಸಿದ್ದಾರೆ. ಚಲಿಸುತ್ತಿದ್ದ ಬೈಕ್​ಗೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿಯಾದ ಕಾರಣ ತಲೆ ಬುರುಡೆ ಒಪನ್ ಆಗಿ, ಗಂಭೀರ ಗಾಯದಿಂದ ಸಾವು ಬದುಕಿನ ನಡುವೆ‌ ಹೋರಾಟ ನಡೆಸುತ್ತಿದ್ದ ಮಹಿಳೆಗೆ ವೈದ್ಯರೊಬ್ಬರ ತಂಡ ಆಸರೆಯಾಗುವ ಮೂಲಕ ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಅರ್ಥ ಕಲ್ಪಿಸಿದ್ದಾರೆ.

ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದ ಪ್ರಿಯಾ ಎಂಬುವವರು ಗ್ರಾಮದಿಂದ ಟಿವಿಎಸ್ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ, ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಎಸ್ಕೇಪ್ ಆಗಿತ್ತು. ಹೀಗಾಗಿ ಅಪಘಾತದ ರಬಸಕ್ಕೆ ಬೈಕ್ ಸಮೇತ ಚರಂಡಿಗೆ ಬಿದ್ದಿದ್ದ ಮಹಿಳೆ ಪ್ರಿಯಾಳ ತಲೆಗೆ ಗಂಭೀರ ಗಾಯವಾಗಿ ಮೆದುಳು ಒಪನ್ ಆಗಿ ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ರು. ಹೀಗೆ ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಮಹಿಳೆಯನ್ನ ಆಕೆಯ ಪತಿ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲು ಹೇಳಿ ಹಣವಿಲ್ಲವೆಂದು ವೈದ್ಯರ ಬಳಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕೊಪ್ಪಳದಲ್ಲೊಂದು ಭೀಕರ ಅಪಘಾತ: ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

ಚಿಕಿತ್ಸೆಗೆ ಹಣವಿಲ್ಲವೆಂದ ಗಂಡ; ಮಾನವೀಯತೆ ತೋರಿದ ವೈದ್ಯರ ತಂಡ

ಮಹಿಳೆಯ ಪರಿಸ್ಥಿತಿ ಕಂಡ ವೈದ್ಯ ಸುಪ್ರಿತ್ ನೇತೃತ್ವದ ತಂಡ ಮಾನವೀಯತೆ ಆಧಾರದ ಮೇಲೆ ಹಣವಿಲ್ಲದಿದ್ರು, 24 ಗಂಟೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಇದೀಗ ಒಂದು ವಾರದಿಂದ ಆಸ್ವತ್ರೆಯಲ್ಲೆ ಮಹಿಳೆಯ ಹಾರೈಕೆ ಮಾಡಿದ ವೈದ್ಯರು ಪ್ರಾಣಾಪಾಯದಿಂದ ಆಕೆಯನ್ನ ಪಾರು ಮಾಡಿದ್ದು, ಇದೀಗ ಚೇತರಿಕೆ ಕಾಣುತ್ತಿದ್ದಾರೆ.

ಮಹಿಳೆ ಉಳಿಯುವುದಿಲ್ಲವೆಂದುಕೊಂಡಿದ್ದ ಕುಟುಂಬಸ್ಥರು

ಇನ್ನು ಪ್ರಿಯಾಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು. ಆಕೆಯ ಕುಟುಂಬಸ್ಥರು ಹೈನುಗಾರಿಕೆ ಹಾಗೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಅಪಘಾತದ ನಂತರ ಮಹಿಳೆಯ ಸ್ಥಿತಿ ಕಂಡು ಉಳಿಯುವುದಿಲ್ಲ ಅಂದುಕೊಂಡಿದ್ರಂತೆ. ಆದ್ರೆ, 24 ಗಂಟೆಯ ನಿರಂತರ ಶ್ರಮದಿಂದ ವೈದ್ಯರು ಆಕೆಯ ಜೀವ ಉಳಿಸಿದ್ದು, ಇದೀಗ ಚೇತರಿಕೆ ಕಂಡ ಪ್ರಿಯಾಳನ್ನ ಕಂಡು ಕುಟುಂಬಸ್ಥರು ಭಾವುಕರಾಗಿದ್ದಾರೆ. ಮೆದುಳಿನ ಈ ಶಸ್ತ್ರ ಚಿಕಿತ್ಸೆಗೆ ಹೊರಗಿ‌ನ‌ ಇತರೆ ಆಸ್ವತ್ರೆಗಳಲ್ಲಿ 30 ಲಕ್ಷಕ್ಕೂ ಅಧಿಕ ಹಣ ಖರ್ಚಾಗಲಿದ್ದು, ಮಹಿಳೆಯ ಕುಟುಂಬಸ್ಥರ ಸ್ಥಿತಿ ಕಂಡ ವೈದ್ಯರು ಆಕೆಯ ಶಸ್ತ್ರ ಚಿಕಿತ್ಸೆಯ ಅಲ್ಪ ವೆಚ್ಚವನ್ನ ಮಾತ್ರ, ಅಲ್ಪ ಅಲ್ಪವಾಗಿ ನೀಡಲು ಅವಕಾಶ ನೀಡಿದ್ದಾರೆ.

ಇದನ್ನೂ ಓದಿ:Crime News: ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು, ಬೆಂಗಳೂರಿನಲ್ಲೊಂದು ಭೀಕರ ರಸ್ತೆ ಅಪಘಾತ

ಈ ಮೂಲಕ ವೈದ್ಯರು ದೇವರೆಂದು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಸಾಕಷ್ಟು ಜನ ವೈದ್ಯರ ನಡುವೆ ಹಣವಿಲ್ಲದಿದ್ರು ಕೂಡಲೇ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಸಿಲಿಕಾನ್ ಸಿಟಿ ಆಸ್ವತ್ರೆ ವೈದ್ಯರು ಮಾನವೀಯತೆ ಮೆರೆದು, ಇತರೆ ವೈದ್ಯರಿಗೆ ಮಾದರಿಯಾಗಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us