Crime News: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು, ಬೆಂಗಳೂರಿನಲ್ಲೊಂದು ಭೀಕರ ರಸ್ತೆ ಅಪಘಾತ
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ಜುಲೈ2 ರಂದು ತುಮಕೂರಿನ ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಆಕ್ಟೀವ್ ಹೋಂಡಾಗೆ ಅಪರಿಚಿತ ಗಾಡಿ (vehicle) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಕಲ್ಯಾಣನಗರದ ಜಂಕ್ಷನ್ ಬಳಿ ನಡೆದಿದೆ. ಶ್ವೇತಾ (23) ಸಾವನ್ನಪ್ಪಿದ ಮಹಿಳೆ. ಅಪರಿಚಿತ ಗಾಡಿ ಡಿಕ್ಕಿ ಹೊಡೆದ ರಭಸಕ್ಕೆ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರನಾದ ಶ್ವೇತ ಪತಿ ಆನಂದ್ (28 ) ಸ್ಥಿತಿ ಗಂಭೀರವಾಗಿದೆ. ಹೆಚ್.ಬಿ. ಆರ್ ಮುಖ್ಯ ರಸ್ತೆ ಬಳಿ ಇರುವ ಆಲ್ಟಿಯಸ್ ಆಸ್ಪತ್ರೆಯಲ್ಲಿ ಆನಂದ್ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೆ ದಂಪತಿ ಮದ್ವೆಯಾಗಿದ್ದರು. ನೆನ್ನೆ ರಾತ್ರಿ ಫಿಲ್ಮ್ ನೋಡಿಕೊಂಡು ವಾಪಾಸಾಗುವ ವೇಳೆ ಘಟನೆ ನಡೆದಿದೆ. ಶ್ವೇತಾಳ ಶವ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ವ್ಯಕ್ತಿಯ ಕೊಲೆ
ನೆಲಮಂಗಲ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ಜುಲೈ2 ರಂದು ತುಮಕೂರಿನ ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಮೂಲದ ದೊಡ್ಡಲಿಂಗಪ್ಪ(45)ಕೊಲೆಯಾದ ವ್ಯಕ್ತಿ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಲಕ್ಷ್ಮೀ(35) ಪ್ರಿಯಕರ ವೆಂಕಟೇಶ್(40)ಸೇರಿ ಕೊಲೆ ಮಾಡಿದ್ದಾರೆ. ಮನೆಗೆ ಬಂದಿದ್ದ ವೇಳೆ ತಲೆಮೇಲೆ ಕಲ್ಲು ಎತ್ತಾಕಿ ಭೀಕರವಾಗಿ ಕೊಂದಿದ್ರು. ಬಳಿಕ ಮೃತ ದೊಡ್ಡಲಿಂಗಪ್ಪ ಬೈಕ್ನಲ್ಲೇ ಶವ ಸಾಗಿಸಿದ್ರು. ನೆಲಮಂಗಲದ ಕಳಲುಘಟ್ಟ ಬ್ರಿಡ್ಜ್ ಕೆಳಗೆ ಶವ ಬಿಸಾಡಿ ಹೋಗಿದ್ರು. ಜುಲೈ9 ತಾರೀಖಿನಂದು ಪತ್ನಿ ಯಲ್ಲಮ್ಮ, ಪತಿ ನಾಪತ್ತೆ ಬಗ್ಗೆ ದೂರು ದಾಖಲು ಮಾಡಿದ್ರು. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ರು. ಲಕ್ಷ್ಮೀ, ವೆಂಕಟೇಶ್, ರನ್ನ ಠಾಣೆಗೆ ಕರೆತಂದು ವಿಚಾರಣೆ ವೇಳೆ ಕೊಲೆ ರಹಸ್ಯೆ ಬಯಲಾಗಿದೆ.
ಕೊಟ್ಟಿದ್ದ 30ಸಾವಿರ ಹಣ ವಾಪಸ್ ಕೇಳುತ್ತಿದ್ದು, ಎಲ್ಲಾ ವಿಚಾರದಲ್ಲಿ ತೊಂದರೆ ಕೊಡುತ್ತಿದ್ದ. ಹಾಗಾಗಿ ಇಬ್ಬರು ಸೇರಿ ಕೊಲೆಗೈದ ಬಗ್ಗೆ ಮಾಹಿತಿ ನೀಡಲಾಗಿದೆ. ಪತಿ ಸತ್ತ ಮೇಲೆ ಮೂರು ಜನರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆಯೂ ಆರೋಪ ಮಾಡಲಾಗಿದೆ. ಒಂದುವರೆ ತಿಂಗಳ ಬಳಿಕ ನೆಲಮಂಗಲ ತಾಲೂಕಿನ ಕಳಲುಘಟ್ಟ ಬ್ರಿಡ್ಜ್ ಕೆಳಗೆ ಅಸ್ತಿಪಂಜರ ಪತ್ತೆಯಾಗಿದೆ. ತುಮಕೂರಿನ ಜಯನಗರ ಪೊಲೀಸರಿಂದ ನೆಲಮಂಗಲದಲ್ಲಿ ಮಹಜರು ಕಾರ್ಯ ಆರಂಭ ಮಾಡಿದ್ದು, ಜಯನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಾಡಹಗಲೇ ಮನೆಗಳ್ಳತನ: 30 ಗ್ರಾಂ ಚಿನ್ನಾಭರಣ, 1.25 ಲಕ್ಷ ನಗದು ಕಳ್ಳತನ
ರಾಯಚೂರು: ನಗರದಲ್ಲಿ ಹಾಡಹಗಲೇ ಮನೆಗಳ್ಳತನ ಮಾಡಿರುವಂತಹ ಘಟನೆ ತಾಲ್ಲೂಕಿನ ಗಿಲ್ಲೆಸುಗೂರು ಕ್ಯಾಂಪ್ನಲ್ಲಿ ನಡೆದಿದೆ. ಮನೆ ಬೀಗ ಮುರಿದು ಒಳ ನುಗ್ಗಿ ಕಳ್ಳತನ ಮಾಡಿದ್ದು, ಮನೆ ಬಿರುವಿನಲ್ಲಿದ್ದ 30 ಗ್ರಾಂ ಚಿನ್ನಾಭರಣ, 1.25 ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಇದೇ ಆಗಸ್ಟ್ 17 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶ್ರೀನಿವಾಸ್ ಅನ್ನೋರಿಗೆ ಸೇರಿದ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಶ್ರೀನಿವಾಸ್ ಡ್ರೈವಿಂಗ್ ಕೆಲಸಕ್ಕೆ ಹೋಗಿದ್ದು, ಆತನ ಪತ್ನಿ ಗಾರ್ಮೆಂಟ್ ಕೆಲಸಕ್ಕೆ ಹೋಗಿದ್ರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಸುಕಿನ ಜಾವ ಬೈಕ್ ಕಳ್ಳತನ
ಬೆಂಗಳೂರು: ನಗರದಲ್ಲಿ ಬೈಕ್ ಕಳ್ಳರಿಗಿಲ್ಲ ಬ್ರೇಕ್ ಇಲ್ಲದಂತ್ತಾಗಿದ್ದು, ನಸುಕಿನ ಜಾವ ಎಂಟ್ರಿ ಕೊಟ್ಟ ಕಳ್ಳನಿಂದ ಬೈಕ್ ಕಳ್ಳತನ ಮಾಡಿರುವಂತಹ ಘಟನೆ ರಾಮಮೂರ್ತಿ ನಗರದ ಗ್ರೀನ್ ವುಡ್ ಲೇಔಟ್ನಲ್ಲಿ ನಡೆದಿದೆ. ಇದೇ ತಿಂಗಳ 10 ರಂದು ಘಟನೆ ನಡೆದಿದೆ. ಮೋಹನ್ ಪ್ರಸಾದ್ ಎಂಬುವವರ ಗಾಡಿಯನ್ನು ಕಳ್ಳರು ಕದಿದ್ದಾರೆ. ಕಳ್ಳರ ಚಾಲಕಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೆಡ್ ತರಲು ಹೋಗಿದ್ದ ಬಾಲಕನ ಅಪಹರಣ
ಕಾರವಾರ: ಅಂಗಡಿಗೆ ಬ್ರೆಡ್ ತರಲು ಹೋಗಿದ್ದ ಬಾಲಕನ ಅಪಹರಣ ಮಾಡಿರುವಂತಹ ಘಟನೆ ಉತ್ತರಕನ್ನಡ ಜಿಲ್ಲೆ ಭಟ್ಕಳದ ಆಜಾದ್ ನಗರದಲ್ಲಿ ನಡೆದಿದೆ. 8 ವರ್ಷದ ಬಾಲಕ ಅಲಿಸಾದ ಇಸ್ಲಾಂಸಾದನ ಕಿಡ್ನ್ಯಾಪ್ ಆಗಿದ್ದಾನೆ. ಮಾರುತಿ ಕಾರಿನಲ್ಲಿ ಬಾಲಕನನ್ನು ಖದೀಮರು ಅಪಹರಿಸಿದ್ದಾರೆ. ಬಾಲಕನ ಅಪಹರಣ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:31 am, Sun, 21 August 22