ಆ್ಯಪ್ ಮೂಲಕ ಅಮಾಯಕರಿಗೆ ವಂಚಿಸಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ
ಆ್ಯಪ್‌ವೊಂದರ ಮೂಲಕ ಪರಿಚಯ ಮಾಡಿಕೊಂಡು ಅಮಾಯಕರಿಗೆ ವಂಚಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ: ಆ್ಯಪ್‌ವೊಂದರ (App) ಮೂಲಕ ಪರಿಚಯ ಮಾಡಿಕೊಂಡು ಅಮಾಯಕರಿಗೆ ವಂಚಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು (Accused) ದಾವಣಗೆರೆ (Davnagere) ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 2 ಮೊಬೈಲ್, ಆಟೋ ಜಪ್ತಿ ಮಾಡಿಕೊಂಡಿದ್ದಾರೆ. ಗ್ಯಾಂಗ್ ಗ್ರೇಂಡರ್ಗೇ ಆಪ್ ಮೂಲಕ ಅಮಾಯಕರನ್ನು ವಂಚಿಸಿ ದರೋಡೆ ಮಾಡುತ್ತಿತ್ತು. ಗ್ಯಾಂಗ್ ಅಮಾಯಕರನ್ನು ನಿರ್ಜನ ಪ್ರದೇಶಕ್ಕೆ ಕರೆಸಿ ಅವರಿಂದ ಹಣ ಒಡವೆ ಕಸಿದುಕೊಳ್ಳುತ್ತಿತ್ತು.
ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಗ್ಯಾಂಗ್ನ ಇಬ್ಬರು ಸದಸ್ಯರನ್ನು ಬಂಧಿಸಿದ್ದು, ಇಂತಹ ಸದಸ್ಯರಿಗೆ ಆಶ್ರಯ ನೀಡಿ ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಕೆಆರ್ಎಸ್ ಪಕ್ಷದ ಜಿಲ್ಲಾದ್ಯಕ್ಷ ಮಾಲತೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಮಾಲತೇಶ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಪೊಲೀಸರ ವಿರುದ್ದ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ತಂದೆಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯೆ
ಬೆಂಗಳೂರು: ತಂದೆಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ. ಚಂದು (19) ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಚಂದು ತಂದೆಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಪ್ರತಿದಿನ ಅಪ್ಪ- ಮಗನ ಮಧ್ಯೆ ಗಲಾಟೆ ನಡೆಯುತಿತ್ತು. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ನಂತರ, ಮಗ ಚಂದು ರೂಮ್ ಬಾಗಿಲು ಹಾಕಿಕೊಂಡಿದ್ದ. ಆದರೆ ಬೆಳಗ್ಗೆ ರೂಮ್ ಬಾಗಿಲು ತೆಗೆದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನದಲ್ಲಿ ಜಿಗುಪ್ಸೆ: ವಿಡಿಯೋ ಮಾಡಿ ತಡರಾತ್ರಿ ಯುವಕ ನೇಣಿಗೆ ಶರಣು
ರಾಮನಗರ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ ಶುಕ್ರವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮೊದಲು ಸಾವಿನ ಬಗ್ಗೆ ವಿಡಿಯೋ ಮಾಡಿಟ್ಟಿದ್ದಾನೆ. ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕುಂಬೇನಹಳ್ಳಿ ಗ್ರಾಮದ ಗೋಪಾಲ (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಬೇನಹಳ್ಳಿಯ ಗೋಪಾಲ ಸಾಯುವ ಮೊದಲು ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ಆತನ ಮಾತುಗಳು ಹೀಗಿವೆ: ಇವತ್ತು ತುಂಬಾ ಖುಷಿಯಾಗಿರೋ ದಿನ. ಮನಸ್ಸಿನಲ್ಲಿ ಯಾವುದೇ ಕಲಹ, ಬೇಜಾರು ಇಲ್ಲ. ನಾಳೆ ಏನು ಎಂದು ಯೋಚನೆ ಮಾಡದೇ ಇರುವ ದಿನ. ಬೇರೆಯವರಿಗೆ ನನ್ನಿಂದ ತೊಂದರೆ ಆಗಬಾರದು. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಯಾರೂ ಕಾರಣರಲ್ಲ. ನಾನು ಹಾಗೂ ನನ್ನ ಜೀವನವೇ ಇದಕ್ಕೆ ಕಾರಣ. ಕ್ಷಮೆ ಕೇಳುವ ಯೋಗ್ಯತೆ ಇಲ್ಲ. ನನ್ನಿಂದ ನಷ್ಟನೇ ಜಾಸ್ತಿ ಆಗಿದೆ. ಯಾರಿಗೂ ಕೆಟ್ಟದ್ದು ಮಾಡಿಲ್ಲ. ಯಾರನ್ನೂ ದೂಷಿಸಬೇಡಿ. ಪತ್ರ ಕೂಡ ಬರೆದಿದ್ದೇನೆ. ಯಾರಿಗೂ ಸಿಗುವುದಿಲ್ಲ. ಅದಕ್ಕಾಗಿ ವಿಡಿಯೋ ಮಾಡುತ್ತಿದ್ದೇನೆ ಎಂದು ಯುವಕ ವಿಡಿಯೋದಲ್ಲಿ ಮಾತನಾಡಿದ್ದಾನೆ
Published On - 9:36 pm, Sat, 20 August 22