Bangaluru: ಎಲೆಕ್ಟ್ರಾನಿಕ್​ ಸಿಟಿಯಲ್ಲೊಂದು ಸ್ಮಾರ್ಟ್ ಬಸ್ ನಿಲ್ದಾಣ; ಇದರ ವಿಶೇಷತೆ ಹೀಗಿದೆ

ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಇದನ್ನು ಫೆ.27 ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಮತ್ತು ಬೆಂಗಳೂರಿನ ಸಂಚಾರಿ ವಿಶೇಷ ಪೊಲೀಸ್ ಆಯುಕ್ತ ಡಾ ಎಂಎ ಸಲೀಂ ಅವರು ಉದ್ಘಾಟಿಸಿದ್ದಾರೆ.

Bangaluru: ಎಲೆಕ್ಟ್ರಾನಿಕ್​ ಸಿಟಿಯಲ್ಲೊಂದು ಸ್ಮಾರ್ಟ್ ಬಸ್ ನಿಲ್ದಾಣ; ಇದರ ವಿಶೇಷತೆ ಹೀಗಿದೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 28, 2023 | 10:45 PM

ಬೆಂಗಳೂರು: ಸ್ಮಾರ್ಟ್​ ಯುಗಕ್ಕೆ ತಕ್ಕಂತೆ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣವೊಂದನ್ನ ನಿರ್ಮಿಸಲಾಗಿದ್ದು, ಫೆ.27 ರಂದು ಇದನ್ನ ಉದ್ಘಾಟಿಸಲಾಯಿತು. ಇನ್ನು ಈ ಬಸ್​ ನಿಲ್ದಾಣದ ವಿಶೇಷತೆ ನೋಡುವುದಾದರೆ ಇಲ್ಲಿ ವೆಂಡಿಂಗ್​ ಮಷೀನ್ ಅಳವಡಿಸಲಾಗಿದೆ ಜೊತೆಗೆ ಫೋನ್‌ ಮತ್ತು ಲ್ಯಾಪ್‌ಟಾಪ್​ಗಳಿಗೆ ಚಾರ್ಜರ್​ ವ್ಯವಸ್ಥೆ ಕೂಡ ಮಾಡಲಾಗಿದ್ದು, ಬಸ್ ಮಾರ್ಗಗಳು ಹಾಗೂ ಅವುಗಳ ನಿಖರ ಸಮಯವನ್ನ ಇಲ್ಲಿ ಪರಿಶೀಲಿಸಬಹುದಾಗಿದೆ.

ಇನ್ನು ಈ ಕುರಿತು ELCITA ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಉದ್ಘಾಟನೆಯ ದೃಶ್ಯಗಳನ್ನು ಹಂಚಿಕೊಂಡಿದೆ, ಇದಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಮತ್ತು ಬೆಂಗಳೂರಿನ ಸಂಚಾರಿ ವಿಶೇಷ ಪೊಲೀಸ್ ಆಯುಕ್ತ ಡಾ ಎಂಎ ಸಲೀಂ ಗೌರವ ಅತಿಥಿಗಳಾಗಿದ್ದರು.

ಇದನ್ನೂ ಓದಿ:Apple Jobs: ಆ್ಯಪಲ್ ಕರಾಮತ್ತು; ಕರ್ನಾಟಕ ಸೇರಿ ವಿವಿಧೆಡೆ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ

ಈ ಸ್ಮಾರ್ಟ್ ಬಸ್ ನಿಲ್ದಾಣವು ಸ್ಮಾರ್ಟ್ ಡಸ್ಟ್‌ಬಿನ್‌ಗಳನ್ನು ಹೊಂದಿದ್ದು, ಅದು 70% ತುಂಬಿದಾಗ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಬಸ್​ನ ನಿಖರವಾದ ಸಮಯದ ಬಗ್ಗೆ ಮಾಹಿತಿಯನ್ನ ತೋರಿಸುತ್ತದೆ. ಜೊತೆಗೆ ಇದು ಮಾರ್ಗ ನಕ್ಷೆಯನ್ನು ಕೂಡ ತೋರಿಸುತ್ತದೆ ಎಂದು ELCITA ಟ್ವೀಟ್‌ ಮಾಡಿದೆ. ಎಲ್ಲರ ಸುರಕ್ಷತೆಗಾಗಿ ಬಸ್ ನಿಲ್ದಾಣದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳು ಮತ್ತು ದ್ವಿಮುಖ SOS ವ್ಯವಸ್ಥೆಯನ್ನ ಮಾಡಲಾಗಿದೆ. “ಸ್ಮಾರ್ಟ್” ಜೊತೆಗೆ ಬಸ್ ನಿಲ್ದಾಣವು “ಹಸಿರು” ಆಗಿದೆ. ಸ್ಮಾರ್ಟ್ ಉದ್ಯಾನವನ್ನು ಸ್ಥಾಪಿಸಲಾಗಿದೆ ಎಂದು ELCITA ಹೇಳಿದೆ.

ಇಂದು ನಮ್ಮ ಇ-ನಗರದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಯುಗ ಆರಂಭವಾಗಿದೆ. ಶ್ರೀಮತಿ ಸತ್ಯವತಿ ಜಿ. IAS (ವ್ಯವಸ್ಥಾಪಕ ನಿರ್ದೇಶಕರು, BMTC), ಮತ್ತು ಡಾ ಎಂಎ ಸಲೀಂ IPS, (ಬೆಂಗಳೂರು ನಗರ ಸಂಚಾರಿ ವಿಶೇಷ ಪೊಲೀಸ್ ಆಯುಕ್ತರು), ಮೊದಲ ಸ್ಮಾರ್ಟ್ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಜೊತೆಗೆ ಮೊದಲ ಬಸ್ ಅನ್ನು ಸ್ಮಾರ್ಟ್ ಬಸ್ ನಿಲ್ದಾಣದಿಂದ ಇಬ್ಬರೂ ಗೌರವಾನ್ವಿತ ಅತಿಥಿಗಳು ಫ್ಲ್ಯಾಗ್ ಆಫ್ ಮಾಡಿದರು ಎಂದು “ELCITA ಟ್ವಿಟ್​ ಮೂಲಕ ಹಂಚಿಕೊಂಡಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Tue, 28 February 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ