ಉಕ್ರೇನ್ ಸೈನಿಕರು ನಮ್ಮ ತಲೆ ಮೇಲೆ ಗನ್ ಇಟ್ಟು ಪ್ರಶ್ನಿಸಿದ್ದರು; ಬೆಂಗಳೂರಿನಲ್ಲಿ ಕಣ್ಣೀರು ಹಾಕಿದ ವಿದ್ಯಾರ್ಥಿನಿ
ವಿದ್ಯಾರ್ಥಿ ಮೊಹಮ್ಮದ್ ಕೂಡ ಉರಗ ತಜ್ಞ. ಉಕ್ರೇನ್ನಿಂದ ವಾಪಸ್ ಆದ ಮೊಹಮ್ಮದ್ಗೆ ಮಾಲಾರ್ಪಣೆ ಮಾಡಿ, ಸಿಹಿ ತಿನ್ನಿಸಿ ಸ್ನೇಹಿತರು ಸ್ವಾಗತಿಸಿದ್ದಾರೆ.
ಬೆಂಗಳೂರು: ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಯುದ್ಧದಿಂದ ಕನ್ನಡಿಗರು ತಾಯ್ನಾಡಿಗೆ ಬರಲು ಹರಸಾಹಸ ಪಡುತ್ತಿದ್ದಾರೆ. ಇಂದು (ಮಾರ್ಚ್ 6) ಯುದ್ಧಭೂಮಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಯೀಷಾ, ಉಕ್ರೇನ್ನಲ್ಲಿ ನಾವು ನರಕಯಾತನೆ ಅನುಭವಿಸಿದ್ದೇವೆ. ಬಂಕರ್ನಲ್ಲಿ ಕೊರೆಯುವ ಚಳಿಯಲ್ಲಿ ಕಾಲ ಕಳೆದಿದ್ದೇವೆ. ಉಕ್ರೇನ್ನಲ್ಲಿ ಬಾಂಬ್ಗಳ ಶಬ್ದಕ್ಕೆ ಬೆಚ್ಚಿಬೀಳುತ್ತಿದ್ದೆವು. ಯುದ್ಧ ಹಿನ್ನೆಲೆ ಕುಡಿಯುವ ನೀರು ವಾಸನೆ ಬರುತ್ತಿತ್ತು. ನಮ್ಮ ಕಾರು ಮುಂದೆಯೇ 2 ಬಾಂಬ್ಗಳನ್ನ ಹಾಕಿದ್ದರು. ನಮ್ಮ ತಲೆ ಮೇಲೆ ಗನ್ ಇಟ್ಟು ಸೈನಿಕರು ಪ್ರಶ್ನಿಸಿದ್ದರು. ನಿಮ್ಮ ಬಳಿ ಏನಿದೆ ತೋರಿಸಿ ಎಂದು ಪ್ರಶ್ನೆ ಮಾಡ್ತಿದ್ದರು. ಉಕ್ರೇನ್ ಸೈನಿಕರು ತಲೆಗೆ ಗನ್ ಇಟ್ಟು ಪ್ರಶ್ನಿಸುತ್ತಿದ್ದರು ಅಂತ ಕಣ್ಣೀರು ಹಾಕಿದರು.
ಹಾಸ್ಟೆಲ್ ಮೇಲೆ ನಿಂತು ದೂರದಲ್ಲಿದ್ದ ರಷ್ಯಾ ಸೈನಿಕರನ್ನು ನೋಡಿದ್ದೆವು: ಮೊಹಮ್ಮದ್ ರಾಯಚೂರು: ಉಕ್ರೇನ್ನಿಂದ ಬಂದ ಮಗನಿಗೆ ತಂದೆ ಹಾವಿನ ಮರಿ ರಕ್ಷಿಸುವ ಮೂಲಕ ಮಗನಿಗೆ ಸ್ವಾಗತ ಕೋರಿದ್ದಾರೆ. ಮೊಹಮ್ಮದ್ ಅಸರ್ ಉರಗ ತಜ್ಞ. ವಿದ್ಯಾರ್ಥಿ ಮೊಹಮ್ಮದ್ ಕೂಡ ಉರಗ ತಜ್ಞ. ಉಕ್ರೇನ್ನಿಂದ ವಾಪಸ್ ಆದ ಮೊಹಮ್ಮದ್ಗೆ ಮಾಲಾರ್ಪಣೆ ಮಾಡಿ, ಸಿಹಿ ತಿನ್ನಿಸಿ ಸ್ನೇಹಿತರು ಸ್ವಾಗತಿಸಿದ್ದಾರೆ. ಟಿವಿ9ಗೆ ಪ್ರತಿಕ್ರಿಯೆ ನೀಡಿದ ಮೊಹಮ್ಮದ್, ನಾನು ಮನೆ ತಲುಪಿರುವ ಬಗ್ಗೆ ಖುಷಿಯಿದೆ. ಆದರೆ ಎಲ್ಲಾ ವಿದ್ಯಾರ್ಥಿಗಳು ವಾಪಸ್ ಆದ್ರೆ ಇನ್ನೂ ಹೆಚ್ಚಿನ ಖುಷಿ ಆಗತ್ತೆ. ಫೆಬ್ರವರಿ 24 ರ ಬೆಳಿಗ್ಗೆ 5.30 ಕ್ಕೆ ರಷ್ಯಾದಿಂದ ಯುದ್ಧ ಪ್ರಾರಂಭವಾಗಿದೆ. ಹಾಸ್ಟೆಲ್ ಮೇಲೆ ನಿಂತು ದೂರದಲ್ಲಿದ್ದ ರಷ್ಯಾ ಸೈನಿಕರನ್ನು ನೋಡಿದ್ದೆವು. ಮೊದಲು ಏರ್ ಪೋರ್ಟ್ನ ರನ್ ವೇ ನಾಶ ಮಾಡಿದ್ದರು. ಬಳಿಕ ನಾವಿದ್ದ ನಗರದಲ್ಲಿ ಮಿಲ್ನಿಂದ ದಾಳಿ ನಡೆಸಲು ಶುರು ಮಾಡಿದ್ದರು. ಯಾವಾಗಲೂ ಮಿಸೈಲ್, ಫೈಟರ್ಸ್, ಬಾಂಬ್ ನೋಡಿರಲಿಲ್ಲ. ಅದನ್ನೆಲ್ಲಾ ನೋಡಿ ಭಯಗೊಂಡಿದ್ದೆ ಅಂತ ಹೇಳಿದರು.
ತವರಿಗೆ ಮರಳಿದ ಅಂಕಿತಾ ಟಿವಿ9ಗೆ ಜೊತೆ ಮಾತನಾಡಿ, ಖಾರ್ಕಿವ್ ನಗರ ಉಳಿದಿರುವುದೇ ಡೌಟು. ರಷ್ಯಾ ಟಾರ್ಗೆಟ್ ಮಾಡಿದ್ದೇ ಖಾರ್ಕಿವ್ ಸಿಟಿಯನ್ನಾ. ದೇವರ ಮೇಲೆ ನಂಬಿಕೆ ಇಟ್ಟು 20 ನಿಮಿಷ ಟ್ರಾವೆಲ್ ಮಾಡಿದ್ದೀವಿ. ನಮ್ಮ ಮೇಲೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾರೆ. ಉಕ್ರೇನ್ ನಾಗರಿಕರಿಗೆ ಮೊದಲು ಆದ್ಯತೆ ಕೊಡುತ್ತಿದ್ದರು. ಯುದ್ದ ನಡೆಯುತ್ತೆ ಅಂತ ಉಕ್ರೇನ್ ಸರ್ಕಾರದಿಂದ ಮಾಹಿತಿ ಇರಲಿಲ್ಲ. ಕುಡಿಯುವ ನೀರು ಸಿಕ್ತಿರಲಿಲ್ಲ, ಊಟ ಸಿಕ್ಕಿಲ್ಲ. ನಮ್ಮ ತಂದೆ ತಾಯಿಗೆ ಸುಳ್ಳು ಹೇಳುತ್ತಿದ್ದೀವಿ. ತುಂಬಾ ರಿಸ್ಕ್ ತೆಗದುಕೊಂಡು ಭಾರತಕ್ಕೆ ಬಂದವಿ. ನವೀನ್ ಸಾವಿನ ಬಳಿಕ ನಮಗೆ ಭಯ ಶುರವಾಗಿತ್ತು. ನಾವು ಎಲ್ಲಾರು ಕಣ್ಣೀರು ಹಾಕಿದ್ದೇವೆ. ನಾವು ಇಲ್ಲಿಯವರೆಗೆ ಬರ್ತೀವಿ ಅಂದುಕೊಂಡಿರಲಿಲ್ಲ ಅಂತ ಹೇಳಿದರು.
ಇನ್ನು ಉಕ್ರೇನ್ನಲ್ಲಿ ಸಿಲುಕಿದ್ದ ಚಿತ್ರದುರ್ಗದ ವಿದ್ಯಾರ್ಥಿನಿ ಸುನೇಹಾ, ಬೆಂಗಳೂರಿನ ರಚನಾ ಹಂಗೇರಿಗೆ ಶಿಫ್ಟ್ ಆಗಿದ್ದಾರೆ. 2 ದಿನಗಳಿಂದ ವಿದ್ಯಾರ್ಥಿಗಳು ಹಂಗೇರಿಯಲ್ಲಿದ್ದಾರೆ. ಇಂಡಿಯನ್ ಅಂಬಾಸಿಯಿಂದ ವಿದ್ಯಾರ್ಥಿಗಳಿಗೆ ಆಶ್ರಯ ನೀಡಲಾಗುತ್ತಿದೆ. ಶೀಘ್ರ ತವರಿಗೆ ಕರೆತರುವ ವ್ಯವಸ್ಥೆ ಆಗಲೆಂದು ಪೋಷಕರು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ಹಂಗೇರಿಗೆ ಶಿಫ್ಟ್ ಆಗಿರುವ ಬಗ್ಗೆ ಟಿವಿ9ಗೆ ಸುನೇಹಾ ತಂದೆ ಪಿಡಬ್ಲೂಡಿ ಇಂಜಿನಿಯರ್ ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ
‘ಮೋದಿ ಸರ್ಕಾರದ ಚುನಾವಣಾ ಆಫರ್ ಶೀಘ್ರ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ’: ರಾಹುಲ್ ಗಾಂಧಿ
Petrol Diesel Rate Today: ಬೆಂಗಳೂರು ಹಾಗೂ ಇತರ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಇಲ್ಲಿ ತಿಳಿಯಿರಿ
Published On - 9:29 am, Sun, 6 March 22