ಬೆಂಗಳೂರಿನಲ್ಲಿ ಘೋರ ದುರಂತ: ಹೆಣ್ಣು ಮಗುವೆಂದು ದಂಪತಿ ನಡುವೆ ಗಲಾಟೆ ಸಾವಿನಲ್ಲಿ ಅಂತ್ಯ
ಹೆಣ್ಣುಮಕ್ಕಳನ್ನು ಮನೆಯ ಮಹಾಲಕ್ಷ್ಮಿ, ಭಾಗ್ಯಲಕ್ಷ್ಮಿ ಎಂದು ಕರೆಯುವುದು ರೂಢಿ. ಮನೆಯಲ್ಲಿ ಹೆಣ್ಣು ಮಗು ಜನಿಸಿದೆ ಎಂದರೆ ಸಂಭ್ರಮ ಇರುತ್ತದೆ. ಹೆಣ್ಣು ಮಗುವೆಂದು ತಾತ್ಸಾರ ಪಡುವುದು ಸ್ವಲ್ಪ ಕಡಿಮೆಯಾಗಿದೆ. ಹೆಣ್ಣು ಮಗುವಿನ ಬಗ್ಗೆ ಜಾಗೃತಿ ಕಾರ್ಯ ನಡೆದಿದ್ದು, ಹೆಣ್ಣು ಮಕ್ಕಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದ್ರೆ, ಇಲ್ಲೋರ್ವ ಪತಿ ಮಹಾಶಯ ಹೆಣ್ಣು ಹುಟ್ಟಿತ್ತೆಂದು ಗಲಾಟೆ ಮಾಡಿದ್ದು, ಸಾವಿನಲ್ಲಿ ಅಂತ್ಯವಾಗಿದೆ.

ಬೆಂಗಳೂರು, (ಅಕ್ಟೋಬರ್ 06): ಪತಿಯ (Husband) ಕಿರುಕುಳದಿಂದ ಬೇಸತ್ತು ಪತ್ನಿ (Wife) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಲಗ್ಗೆರೆಯ ಮುನೇಶ್ವರ ಬ್ಲಾಕ್ ನಲ್ಲಿ ನಡೆದಿದೆ. ರಕ್ಷಿತಾ(26) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಅರಸಿಕೆರೆ ಮೂಲದ ರಕ್ಷಿತಾ ಹಾಗೂ ಕುಣಿಗಲ್ ಬಳಿಯ ಹುಲಿದುರ್ಗ ಮೂಲದ ರವೀಶ್ 4 ವರ್ಷದಿಂದ ಹಿಂದೆ ಅಷ್ಟೇ ಮದುವೆಯಾಗಿದ್ದರು. ಆದ್ರೆ, ಕೌಟುಂಬಿಕ ಕಲಹಕ್ಕೆ ಬೇಸತ್ತು ಮನೆಯಲ್ಲಿ ನೇಣುಬಿಗಿದುಕೊಂಡು ರಕ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೆಣ್ಣು ಮಗು ಬೇಡ ಗಂಡು ಬೇಕಿತ್ತು ಎಂದು ಗಲಾಟೆ ಮಾಡಿ ಕಿರುಕುಳ ನೀಡಿದ್ದರಿಂದ ಮನವೊಂದು ರಕ್ಷಿತಾ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದ್ದು, ಈ ಸಂಬಂಧ ರಕ್ಷಿತಾಳ ಕುಟುಂಬಸ್ಥರು ರವೀಶ್ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಇಂದು ಬೆಳಗ್ಗೆ ತಂದೆ ತಿಮ್ಮರಾಜು ಅವರು ರಕ್ಷಿತಾಗೆ ಕರೆ ಮಾಡಿದ್ದಾರೆ. ಆದ್ರೆ, ಕರೆ ಸ್ವೀಕರಿಸದಿದ್ದಕ್ಕೆ ಅನುಮಾನ ಬಂದು ನೇರವಾಗಿ ಮನೆಗೆ ದೌಡಾಯಿಸಿದ್ದಾರೆ. ಆದರೆ ಮನೆ ಹೊರಗಿನಿಂದ ಡೋರ್ ಲಾಕ್ ಆಗಿತ್ತು. ನಂತರ ಓನರ್ ಬಳಿ ಕೀ ಪಡೆದು ಡೋರ್ ಓಪನ್ ಮಾಡಿದಾಗ ರಕ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಇದನ್ನೂ ಓದಿ: ನೀರು ಕೊಡದಿದ್ದಕ್ಕೆ ಲಟ್ಟಣಿಗೆಯಿಂದ ಹೊಡೆದ ಪತಿ: ಕೋಮ ಸೇರಿದ್ದ ಪತ್ನಿ ದುರಂತ ಸಾವು
ಅರಸಿಕೆರೆ ಮೂಲದ ರಕ್ಷಿತಾ ಹಾಗೂ ಹುಲಿದುರ್ಗದ ರವೀಶ್ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು, ಬೆಂಗಳೂರಿನ ಲಗ್ಗೆರೆ ಬಳಿ ಹಲವು ವರ್ಷಗಳಿಂದ ವಾಸವಾಗಿದ್ದರು. ಆದ್ರೆ, ದಂಪತಿ ನಡುವೆ ಕಳೆದ ಮೂರು ವರ್ಷಗಳಿಂದ ಗಲಾಟೆ ನಡೆಯುತ್ತಲೇ ಇತ್ತು. ನಿನ್ನೆ ರಾತ್ರಿ ಸಹ ಪತಿ ರವೀಶ್ ಹಾಗೂ ಸಹೋದರ ಲೋಕೇಶ್ ಸೇರಿಕೊಂಡು ರಕ್ಷಿತಾಗೆ ಜಗಳ ಮಾಡಿದ್ದಾರೆ. ಇದರಿಂದ ಮನನೊಂದು ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೆಣ್ಣು ಹುಟ್ಟಿತ್ತೆಂದು ಮೂರು ತಿಂಗಳಾದ್ರೂ ಮಗುವಿನ ಮೂಖ ನೋಡಿರಲಿಲ್ಲ . ಹೆಣ್ಣು ಮಗು ಎಂದು ಆಸ್ಪತ್ರೆ ಬಿಲ್ ಕೂಡ ಕಟ್ಟಿರಲಿಲ್ಲ. ವರ್ಷವಾದ್ರೂ ಮನೆಗೆ ಕರೆಯದೆ ಗಲಾಟೆ ಮಾಡಿದ್ದ. ಬಳಿಕ ಸಂಬಂಧಿಕರು ಸೇರಿ ರಾಜಿ ಮಾಡಿ ರಕ್ಷಿತಾಳನ್ನ ಕಳಿಸಲಾಗಿತ್ತು. ಅಂದಿನಿಂದ ಪ್ರತಿನಿತ್ಯಾ ಗಲಾಟೆ ಮಾಡಿ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದ. ಅಲ್ಲದೇ ಒಂದು ವಾರದ ಹಿಂದೆ ಮಗುವಿನ ಕಿವಿ ಸುಟ್ಟಿದ್ದ ಎಂದು ತಿಳಿದುಬಂದಿದೆ.
ಸದ್ಯ ರಕ್ಷಿತಾಳನ್ನು ಕೊಲೆ ಮಾಡಿ ಬಳಿಕ ನೇಣಿಗೆ ಹಾಕಿದ್ದಾರೆ ಎಂದು ಆಕೆಯ ಕುಟುಂಬಸ್ಥರ ಆರೋಪಿಸಿದ್ದು, ಈ ಸಂಬಂಧ ರವೀಶ್ ಹಾಗು ಲೋಕೇಶ್ ವಿರುದ್ಧ ದೂರು ನೀಡಿದ್ದಾರೆ. ಎರಡು ದಿನದ ಹಿಂದೆಯೆ ಆಸ್ತಿ ಪತ್ರ ಮತ್ತು ಚಿನ್ನಾಭರಣ ಬೇರೆಡೆ ಕೊಂಡೊಯ್ದಿದ್ದಾರೆ. ಕೊಲೆ ಮಾಡಲು ಮೊದಲೆ ಪ್ಲಾನ್ ಮಾಡಿಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.




