ಸೊಂಟಕ್ಕೆ ಮಗು ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ: ಗಂಡ ಸತ್ತ ದಿನವೇ ಘೋರ ದುರಂತ
ಪತಿ ತೀರಿಕೊಂಡು ಸರಿಯಾಗಿ ಎರಡ ವರ್ಷದ ದಿನವೇ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಸಕಲವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೊಂಟಕ್ಕೆ ಮಗು ಕಟ್ಟಿಕೊಂಡು ಕೆರೆಗೆ ಹಾರಿದ್ದು, ಗಂಡ ಸತ್ತ ದಿನವೇ ಈ ಘೋರ ದುರಂತ ನಡೆದಿದೆ. ಇನ್ನೊಂದೆಡೆ ಪಿಜಿಯೊಂದರ ಸಂಪಗ್ನೊಳಗೆ ಉಸಿರುಗಟ್ಟಿ ಬಿದ್ದಿದ್ದ ಮೂವರನನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದೆ. ಈ ಎರಡು ಪ್ರತ್ಯೇಕ ಘಟನೆಯ ವಿವರ ಈ ಕೆಳಗಿನಂತಿದೆ.
ಬೆಂಗಳೂರು, (ಆಗಸ್ಟ್ 13): ಮಹಿಳೆಯೊಬ್ಬರು (Woman) ತನ್ನ 7 ವರ್ಷದ ಮಗುವಿನೊಂದಿಗೆ ಬನ್ನೇರುಘಟ್ಟ(bannerghatta) ಬಳಿಯ ಸಕಲವಾರ ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ. ಬೆಂಗಳೂರು(Bengaluru) ನಗರ ಜಿಲ್ಲೆ ಬನ್ನೇರುಘಟ್ಟ ಬಳಿಯ ಇರುವ ಸಕಲವಾರ ಕೆರೆ. ವಿಜಯಲಕ್ಷ್ಮೀ(35) ಹಾಗೂ ಮಗ ಹರಿಹರನ್(7) ಮೃತರು. ಆಂಧ್ರ ಮೂಲದ ಸಿಕೆ ಪಾಳ್ಯದಲ್ಲಿ ವಾಸವಿದ್ದ ವಿಜಯಲಕ್ಷ್ಮೀ, ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದಳು. ವಿಜಯಲಕ್ಷ್ಮೀ ಪತಿ ತೀರಿಕೊಂಡು ಇಂದಿಗೆ ಸರಿಯಾಗಿ 2 ವರ್ಷವಾಗಿದೆ. ಪತಿ ಸಾವಿನ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ವಿಜಯಲಕ್ಷ್ಮೀ, ಪತಿ ತೀರಿಕೊಂಡ ಸರಿಯಾಗಿ 2 ವರ್ಷದ ದಿನವೇ ಮಗುವಿನ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಮೃತ ದೇಹವನ್ನ ಹೊರತೆಗೆದಿದ್ದಾರೆ.
ಪಿಜಿಯೊಂದರ ಸಂಪ್ನಲ್ಲಿ ಬಿದ್ದಿದ್ದವರ ರಕ್ಷಣೆ
ಬೆಂಗಳೂರು: ಪಿಜಿಯೊಂದರ ಸಂಪ್ ನಲ್ಲಿ ಬಿದ್ದಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ನಿನ್ನೆ (ಆಗಸ್ಟ್ 12) ರಾತ್ರಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಪಿಜಿ ಸಂಪ್ನೊಳಗೆ ಪೇಟಿಂಗ್ ಮಾಡುವಾಗ ಧರ್ಮೇಂದ್ರ ಉಸಿರುಗಟ್ಟಿ ಬಿದ್ದಿದ್ದರು. 15 ಅಡಿ ಆಳದ ಟ್ಯಾಂಕ್ ನಲ್ಲಿ ಬಿದ್ದಿದ್ದ ಧರ್ಮೇಂದ್ರನನ್ನು ರಕ್ಷಿಸಲು ಹೋಗಿದ್ದ ಮಾಲೀಕ ಮಂಗಲ್ ರಾವ್ ಹಾಗೂ ಜಿತೀನ್ ಸಹ ಉಸಿರುಗಟ್ಟಿ ಸಂಪ್ನೊಳಗೆ ಬಿದ್ದಿದ್ದರು. ಕೂಡಲೇ ಎಲೆಕ್ಟಾನಿಕ್ ಸಿಟಿ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನೆ ಮಾಡಲಾಗಿತ್ತು. ವಿಷಯ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ಮಂಗಲ್ ರಾವ್(55), ಧರ್ಮೇಂದ್ರ(50), ಜೀತಿನ್(19) ಮೂವರ ರಕ್ಷಣೆ ಎನ್ನುವರನ್ನು ರಕ್ಷಣೆ ಮಾಡಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಷಯ ತಿಳಿದ ಐದೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿ ಮೂವರ ಜೀವ ಉಳಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:44 am, Sun, 13 August 23