ಬೆಂಗಳೂರು: ಅಪೋಲೊ ಫಾರ್ಮಸಿಗಳಿಗೆ ನುಗ್ಗಿ ದರೋಡೆ ಮಾಡ್ತಿದ್ದ ಅರೋಪಿ ಬಂಧನ; ಇಲ್ಲಿದೆ ವಿವರ
ಬೆಂಗಳೂರು ನಗರದಲ್ಲಿ ನಡೆದಿದ್ದ ಹದಿಮೂರು ಡರೋಡೆಯನ್ನು ಈ ಒಬ್ಬನೇ ಮಾಡಿದ್ದು ಬೆಳಕಿಗೆ ಬಂದಿದೆ. ತನ್ನ ಸ್ಕೂಟರ್ನಲ್ಲಿ ಬರುತ್ತಿದ್ದ ಅರೋಪಿ ಸಮಿ ಉದ್ದಿನ್, ಬೆಳಗ್ಗೆ ಮತ್ತು ರಾತ್ರಿ ಮೆಡಿಕಲ್ ತೆರೆಯುವಾಗ ಮತ್ತು ಬಾಗಿಲು ಹಾಕುವ ಸಮಯದಲ್ಲಿ ಒಬ್ಬರು ಮಾತ್ರ ಇರುತ್ತಾರೆ ಎಂದು ಪ್ಲಾನ್ ಮಾಡಿ ಈ ಕೃತ್ಯ ಎಸಗುತ್ತಿದ್ದ. ಇದೀಗ ಖತರ್ನಾಕ್ ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು, ಅ.19: ಅಪೋಲೊ ಮತ್ತು ಮೆಡ್ ಪ್ಲೆಸ್ ಫಾರ್ಮಸಿಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ಅರೋಪಿಯನ್ನು ಬಂಧಿಸಿದ ಘಟನೆ ಬೆಂಗಳೂರು(Bengaluru) ನಗರದ ಹದಿಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆಸಿ ನಗರ ನಿವಾಸಿ ಸಮಿ ಉದ್ದಿನ್ ಬಂಧಿತ ಅರೋಪಿ. ಇತ ರಾತ್ರಿ ವೇಳೆಯಲ್ಲಿ ಒಬ್ಬನೇ ಹೆಲ್ಮೆಟ್ ಹಾಕಿಕೊಂಡು ಅಪೋಲೊ ಪಾರ್ಮಸಿ(Apollo Pharmacy)ಗಳಿಗೆ ನುಗ್ಗುತಿದ್ದ. ಬಳಿಕ ಚಾಕು ತೋರಿಸಿ ಕ್ಯಾಶ್ ಬಾಕ್ಸ್ನಿಂದ ಹಣ ಕೊಡುವಂತೆ ಬೆದರಿಸುತಿದ್ದ. ಈ ವೇಳೆ ಯಾರಾದರೂ ಹಣ ಕೊಡದೆ ಇದ್ದಾಗ ಚಾಕುವಿನಿಂದ ಇರಿದು ನಂತರ ಕ್ಯಾಶ್ ಬಾಕ್ಸ್ನಲ್ಲಿರುವ ಹಣ ದೋಚಿ ಪರಾರಿ ಆಗುತ್ತಿದ್ದ. ಈ ಕುರಿತು ಹಲವು ದಿನಗಳ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿತ್ತು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಅರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ವಿದ್ಯಾರಣ್ಯಪುರದಲ್ಲಿ ವಿಫಲ ಯತ್ನ ಮಾಡಿದ್ದ ಅರೋಪಿ
ಇನ್ನು ವಿಚಾರಣೆ ವೇಳೆ ನಗರದಲ್ಲಿ ನಡೆದಿದ್ದ ಹದಿಮೂರು ಡರೋಡೆಯನ್ನು ಈ ಒಬ್ಬನೇ ಮಾಡಿದ್ದು ಬೆಳಕಿಗೆ ಬಂದಿದೆ. ತನ್ನ ಸ್ಕೂಟರ್ನಲ್ಲಿ ಬರುತ್ತಿದ್ದ ಅರೋಪಿ ಸಮಿ ಉದ್ದಿನ್, ಬೆಳಗ್ಗೆ ಮತ್ತು ರಾತ್ರಿ ಕೃತ್ಯ ಎಸಗುತಿದ್ದ. ಮೆಡಿಕಲ್ ತೆರೆಯುವಾಗ ಮತ್ತು ಬಾಗಿಲು ಹಾಕುವ ಸಮಯದಲ್ಲಿ ಒಬ್ಬರು ಮಾತ್ರ ಇರುತ್ತಾರೆ ಎಂದು ಪ್ಲಾನ್ ಮಾಡಿ ಈ ಕೃತ್ಯ ಎಸಗುತ್ತಿದ್ದ. ಮಹಾನಗರದ ಹೆಚ್ಎಸ್ಆರ್ ಲೇಔಟ್, ಮಾರತ್ ಹಳ್ಳಿ, ಸರ್ಜಾಪುರ, ಮಹದೇವಪುರ, ರಾಮಮೂರ್ತಿ ನಗರ, ಕೆಂಗೇರಿ, ಹೆಬ್ಬಗೋಡಿ, ಬೆಳ್ಳಂದೂರು ಹಾಗೂ ಕೊತ್ತನೂರು ಸೇರಿದಂತೆ ಅನೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ.
ಅರೋಪಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು
ಹೌದು, ಮಹಾನಗರದ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ ಹಿನ್ನಲೆ ಬರೋಬ್ಬರಿ 11 ಪೊಲೀಸ್ ಠಾಣೆಯ ಪೊಲೀಸರು ಓರ್ವ ಅರೋಪಿಗಾಗಿ ಹುಡುಕಾಟ ನಡೆಸಿದ್ದರು. ಎಲ್ಲಾ ಕಡೆಗಳಲ್ಲೂ ಕೃತ್ಯದ ಸಿಸಿಟಿವಿ ಮತ್ತು ಇತರ ಸಿಸಿ ಟಿವಿಗಳ ಪರಿಶೀಲನೆ ಮಾಡಿದ್ದರು. ಎಷ್ಟೇ ಪ್ರಯತ್ನಿಸಿದ್ದರು. ಈ ಸಿಟಿ ರೌಂಡ್ಸ್ ಹಾಕುತ್ತಿದ್ದ ಅರೋಪಿಯನ್ನು ಹಿಡಿಯಲು ಆಗುತ್ತಿರಲಿಲ್ಲ. ಒಬ್ಬರೆ ಮೆಡಿಕಲ್ನಲ್ಲಿ ಇರುವುದು ಗಮನಿಸಿ ಹೋಗುತಿದ್ದ ಈ ಆಸಾಮಿ, ಇದೀಗ ವಿದ್ಯಾರಣ್ಯ ಪೊಲೀಸರು ಬಂಧಿಸಿದ್ದು, ಸದ್ಯ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ