ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ಅಟ್ಯಾಕ್, ಜೊತೆಯಲ್ಲಿದ್ದವ್ರೇ ಌಸಿಡ್ ಹಾಕಲು ಸುಪಾರಿ ಕೊಟ್ಟಿದ್ರು

ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ಅಟ್ಯಾಕ್, ಜೊತೆಯಲ್ಲಿದ್ದವ್ರೇ ಌಸಿಡ್ ಹಾಕಲು ಸುಪಾರಿ ಕೊಟ್ಟಿದ್ರು
ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ಅಟ್ಯಾಕ್

ಅಂದುಕೊಂಡಂತೆ ಯೋಗೇಶ್ ಮಾರ್ಚ್ 18 ರ ಮುಂಜಾನೆ ಮನೆ ಹೊರಗೆ ಮಲಗಿದ್ದ ದೇವಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್ ಠಾಣೆ ಪೊಲೀಸರು ಮೂವರನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

TV9kannada Web Team

| Edited By: Ayesha Banu

Mar 20, 2022 | 10:44 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ಅಟ್ಯಾಕ್(Acid Attack) ಮಾಡಲಾಗಿದೆ. ಇವರೆಲ್ಲರು ಕಲಾವಿದ ಸ್ನೇಹಿತರು. ಒಟ್ಟೊಟ್ಟಿಗೆ ಡ್ರಾಮಾ ಮಾಡ್ಕೊಂಡಿದ್ದವರು. ಆದ್ರೆ ಇವರ ಮಧ್ಯೆ ನಡೆಯಬಾರದ ಘಟನೆ ನಡೆದಿದೆ. ಮುಂಜಾನೆ ಹೊತ್ತಲ್ಲಿ ಬಾಟೆಲ್ ಹಿಡಿದು ಬಂದವನು ಕೆಲಸ ಮುಗಿಸಿ ಹೊರಟಿದ್ದ. ಈ ವೇಳೆ ಜೊತೆಗಿದ್ದ ಮಹಿಳೆ ಮುಖಕ್ಕೆ ಆ್ಯಸಿಡ್ ಹಾಕಿದ್ದಾನೆ.

ಮಾರ್ಚ್ 18 ರ ಮುಂಜಾನೆ 4 ಗಂಟೆ ಸಮಯದಲ್ಲಿ ವ್ಯಕ್ತಿಯೊಬ್ಬ ಒಂದು ಕೈನಲ್ಲಿ ಮಾಫ್ ಸ್ಟಿಕ್, ಮತ್ತೊಂದು ಕೈಯಲ್ಲಿ ಬಾಟೆಲ್ ಹಿಡಿದು, ಮಂಕಿ ಕ್ಯಾಪ್ ಹಾಕ್ಕೊಂಡು ಓಡಾಡಿದ್ದ. ಹೀಗೆ ಬಂದವನ ಕೈಯಲ್ಲಿ ಇದ್ದದ್ದು ಌಸಿಡ್. ಌಸಿಡ್ ಹಿಡಿದು ಬಂದಿದ್ದ ಯೋಗೇಶ್, ರಂಗಭೂಮಿ ಕಲಾವಿದೆ ದೇವಿ ಎಂಬುವವರ ಮೇಲೆ ಆಸ್ಯಿಡ್ ಎರಚಿ ನಾಪತ್ತೆಯಾಗಿದ್ದ. ಡ್ರಾಮಾ ಆರ್ಟಿಸ್ಟ್ ಆಗಿದ್ದ ದೇವಿ ಅವರ ಪತಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳೊಂದಿಗೆ ಗಣೇಶ ಬ್ಲಾಕ್ನಲ್ಲಿ ವಾಸವಾಗಿದ್ರು. ಡ್ರಾಮಾ ಕೆಲಸ ಮಾಡೋ ವೇಳೆ ಈಕೆಗೆ ರಮೇಶ್ ಮತ್ತು ಸ್ವಾತಿ ಎಂಬ ಇಬ್ಬರು ಪರಿಚಯವಾಗಿದ್ರು. ರಮೇಶ್ ಸಿವಿಲ್ ಎಂಜಿನಿಯರ್ ಆದ್ರೂ ಆಗಾಗ ಡ್ರಾಮಾ ಕೂಡ ಮಾಡ್ತಿದ್ದ. ಹೀಗೆ ಮೂವರು ಒಟ್ಟೊಟ್ಟಿಗೆ ಸೇರಿ ಡ್ರಾಮಾ ಮಾಡ್ತಿದ್ರು.

ಹೀಗೆ ಒಟ್ಟಿಗೆ ಇದ್ದವರ ಮಧ್ಯೆ ಅದೇನಾಯ್ತೋ ಏನೋ. ಒಮ್ಮೆ ರಮೇಶ್ ಪತ್ನಿಗೆ ದೇವಿ ವಾಟ್ಸಾಪ್ ಮೆಸೇಜ್ ಮಾಡಿ ರಮೇಶ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರಂತೆ. ಇದ್ರಿಂದ ಮನೆಯಲ್ಲಿ ಗಲಾಟೆಯಾಗಿ ರಮೇಶ್ ಪತ್ನಿ ಮನೆ ಬಿಟ್ಟು ತೆರಳಿದ್ದರು. ಅಲ್ಲದೆ ನಾಟಕ ಮಾಡೋ ಜಾಗದಲ್ಲಿ ಸ್ವಾತಿ ಬಗ್ಗೆಯೂ ದೇವಿ ಕೆಟ್ಟದಾಗಿ ಮಾತಾಡಿದ್ದರಂತೆ ಹೀಗಾಗಿ ಸಿಟ್ಟಾಗಿದ್ದ ರಮೇಶ್ ಮತ್ತು ಸ್ವಾತಿ ಯೋಗೇಶ್ಗೆ ಌಸಿಡ್ ಹಾಕಲು ಸುಪಾರಿ ಡೀಲ್ ಕೊಟ್ಟಿದ್ರಂತೆ.

ಅಂದುಕೊಂಡಂತೆ ಯೋಗೇಶ್ ಮಾರ್ಚ್ 18 ರ ಮುಂಜಾನೆ ಮನೆ ಹೊರಗೆ ಮಲಗಿದ್ದ ದೇವಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್ ಠಾಣೆ ಪೊಲೀಸರು ಮೂವರನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

ವರದಿ: ರಾಚಪ್ಪಾಜಿ ನಾಯಕ್, ಟಿವಿ9, ಬೆಂಗಳೂರು

ಇದನ್ನೂ ಓದಿ: ಹೋಳಿ ಹಬ್ಬದ ವೇಳೆ ಬಣ್ಣ ಎರಚುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ; ಇಬ್ಬರು ಯುವಕರಿಗೆ ಚಾಕು ಇರಿತ

ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಸರ್ಕಾರ ರಚನೆಯ ಕುರಿತು ತಮ್ಮ ನಿವಾಸದಲ್ಲಿ ಸಭೆ ಕರೆದ ಪ್ರಧಾನಿ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada