ಅಶ್ವತ್ಥನಾರಾಯಣ, ಹರೀಶ್ ಪೂಂಜಾ ವಿರುದ್ಧ ಕ್ರಮ: ಡಿಜಿ ಐಜಿಪಿ ಅಲೋಕ್ ಮೋಹನ್
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆಗಿ ಹೋದ ಘಟನೆಗಳನ್ನು ಕೆದಕಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಅಶ್ವತ್ಥನಾರಾಯಣ, ಹರೀಶ್ ಪೂಂಜಾ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಡಿಜಿ ಐಜಿಪಿ ಅಲೋಕ್ ಮೋಹನ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆಗಿ ಹೋದ ಘಟನೆಗಳನ್ನು ಕೆದಕಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಸಿಎನ್ ಅಶ್ವತ್ಥನಾರಾಯಣ (CN Ashwath Narayan), ಹರೀಶ್ ಪೂಂಜಾ (Harish Poonja) ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕ್ರಮ ಆಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (Alok Mohan) ಹೇಳಿದ್ದಾರೆ. ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಈ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಮೈಸೂರಿನಲ್ಲಿ ಮಾಜಿ ಸಚಿವ ಅಶ್ವಥ್ ನಾರಾರಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಸೇರಿದಂತೆ ಒಟ್ಟು ಮೂರು ಕೇಸ್ ಆಗಿದೆ, ಈ ಬಗ್ಗೆ ಏನು ಹೇಳುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಕ್ರಮ ಆಗುತ್ತೆ. ಮುಂದೆ ಎಲ್ಲವೂ ಕೆಲಸ ಅಗುತ್ತೆ ಎಂದು ಹೇಳಿದರು.
ರೌಡಿಸಂ ಅನ್ನೊದು ಜೀರೋ ಆಗಬೇಕು: ಡಿಜಿ ಐಜಿಪಿ ಅಲೋಕ್ ಮೋಹನ್
ಇಂದು ಬೆಂಗಳೂರು ಸಿಟಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ರೌಡಿಗಳಿಗೆ ಜೀರೊ ಟಾಲರೆನ್ಸ್ ಇದೆ. ರೌಡಿಸಂ ಅನ್ನೊದು ಜೀರೋ ಆಗಬೇಕು. ಡ್ರಗ್ಸ್ ವಿರುದ್ಧ ಕ್ರಮ ಆಗಬೇಕು. ಬೆಂಗಳೂರು ಡ್ರಗ್ಸ್ ರಹಿತ ಸಿಟಿ ಆಗಬೇಕು. ಪೊಲೀಸರು ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರ ಜೊತೆಗೆ ವರ್ತನೆ ಮಾಡಬೇಕು. ಜನ ಸ್ನೇಹಿ ಪೊಲೀಸ್ ಕೆಲಸ ಮಾಡಬೇಕು, ಸಾರ್ವಜನಿಕರ ದೂರುಗಳನ್ನು ಪಡೆದು ಪ್ರಕರಣ ದಾಖಲು ಮಾಡಬೇಕು ಎಂದರು.
ಕ್ಲಬ್ ಹಾಗೂ ಗ್ಯಾಂಬ್ಲಿಂಗ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅಲೋಕ್ ಮೋಹನ್, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆ ಶೇಕಡಾ 100 ರಷ್ಟು ನಿಯಂತ್ರಣದಲ್ಲಿ ಇರಬೇಕು. ಸಮಾಜದಲ್ಲಿ ಯಾವ ಕಾರಣಕ್ಕೂ ಅಶಾಂತಿ ನೆಲಸಲು ಬಿಡಬಾರದು. ಟ್ರಾಫಿಕ್ ಬಗ್ಗೆ ಈಗಾಗಲೇ ಹೆಚ್ಚಿನ ಕ್ರಮ ಆಗಿದೆ, ಇನ್ನು ಮುಂದೆಯೂ ಟ್ರಾಫಿಕ್ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾವಣೆ ನಂತರ ರೌಡಿ ಆಕ್ಟಿವಿಟ್ ಆಗುತ್ತಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಪೊಲೀಸ್ ಮಹಾನಿರ್ದೇಶಕರು, ನಾವು ಅದನ್ನು ಬಿಡುವುದಿಲ್ಲ, ಅದನ್ನು ಕಂಟ್ರೋಲ್ ಮಾಡುತ್ತೆವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಯಿತು. ಈ ವೇಳೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು, ಯಾರೇ ತಪ್ಪು ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ