ದೇವನಹಳ್ಳಿ: ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್- ನಿರ್ಮಾಪಕ ಉಮಾಪತಿ ಮತ್ತು ಅರುಣಾ ಕುಮಾರಿ ನಡುವಿನ ವಿವಾದದ ಕುರಿತು ನಟ, ಜೆಡಿಎಸ್ ಯುವ ನಾಯಕ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅವರು ಬಹಳ ಶಕ್ತಿಯುತವಾಗಿ ಇದ್ದಾರೆ. ಆ ವಿವಾದವನ್ನು ದರ್ಶನ್ ಅವರು ಬಗೆಹರಿಸಿಕೊಳ್ಳುತ್ತಾರೆ. ದರ್ಶನ್ ಹಿರಿಯ ನಟ, ಅವರು ನಮ್ಮ ಕನ್ನಡ ಚಲನಚಿತ್ರೋದ್ಯಮಕ್ಕೆ ಬಹಳ ಕೊಡುಗೆ ಕೊಟ್ಟಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ವಿವಾದ ನಡೆಯುತ್ತಿದೆ. ಅವರು ಆ ವಿವಾದವನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸದ್ಯ ನಡೆಯುತ್ತಿರುವ ವಿವಾದದ ಕುರಿತು ದೇವನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ದರ್ಶನ್ ಹಿರಿಯ ನಟ, ಅವರು ನಮ್ಮ ಕನ್ನಡ ಚಲನಚಿತ್ರೋದ್ಯಮಕ್ಕೆ ಬಹಳ ಕೊಡುಗೆ ಕೊಟ್ಟಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ವಿವಾದ ನಡೆಯುತ್ತಿದೆ. ಅವರು ಆ ವಿವಾದವನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್
ಅರುಣಾ ಕುಮಾರಿಯಿಂದ ಉದ್ಯಮಿ ನಾಗವರ್ಧನ್ಗೆ ಮೋಸ ಆಗಿದೆ. ನಾಗವರ್ಧನ್ಗೆ 5 ವರ್ಷಗಳ ಹಿಂದೆ ಸಮಸ್ಯೆ ಆಗಿತ್ತು. ನಾಗವರ್ಧನ್ ಸಮಸ್ಯೆಗೆ ಅರುಣಾ ಕುಮಾರಿ ಕಾರಣ. 2015ರಲ್ಲಿ ಅರುಣಾ ಕುಮಾರಿ ಜತೆ ನಾನೂ ಮಾತನಾಡಿದ್ದೆ ಎಂದು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಇಂದು (ಜುಲೈ 13) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಾಗವರ್ಧನ್ ನನಗೆ ವಿಚಾರ ತಿಳಿಸಿದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ. ಈ ಬಗ್ಗೆ ಇಂದು ಬೆಳಗ್ಗೆ ನನಗೆ ನಾಗವರ್ಧನ್ ತಿಳಿಸಿದ್ದಾರೆ. ಉಮಾಪತಿ ಗೌಡ ಹಾಗೂ ದರ್ಶನ್ಗೆ ಕೂಡ ಮಾಹಿತಿ ಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಅರುಣಾ ಕುಮಾರಿ ತುಂಬಾ ಫ್ರಾಡ್ ಮಾಡಿದ್ದಾಳೆ. ನನಗೆ 2015ರ ಸೆಪ್ಟೆಂಬರ್ ಕೊನೆಯಲ್ಲಿ ವಂಚನೆ ಮಾಡಿದ್ದಾರೆ. ಫೇಸ್ಬುಕ್ ಮೂಲಕ ಪರಿಚಯವಾಗಿ ಸಿನಿಮಾಗೆ ಆಫರ್ ಕೊಟ್ಟಿದ್ದರು. ಅರುಣಾ ಕುಮಾರಿ ಸಿನಿಮಾಗೆ ಆಫರ್ ನೀಡಿದ್ದಳು ಎಂದು ಉದ್ಯಮಿ ನಾಗವರ್ಧನ್, ನಾಗೇಂದ್ರ ಪ್ರಸಾದ್ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತೆರೆದಿಟ್ಟಿದ್ದಾರೆ.
ಇದನ್ನೂ ಓದಿ:
Nikhil Kumarswamy: ತಂದೆ ಆಗುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ
ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್
(Actor JDS Youth leader Nikhil Kumaraswamy talked about Actor Darshan and Producer Umapathy Gowda issue)
Published On - 7:11 pm, Tue, 13 July 21