AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಬ್ರವರಿ 5 ರಿಂದ 29 ಗಂಟೆ ಕಾಲ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಚಾರ ಬಂದ್: ವೇಳಾಪಟ್ಟಿ ಇಲ್ಲಿದೆ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕಾರಣ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 5 ರಿಂದ ಒಟ್ಟು 29 ಗಂಟೆಗಳ ಕಾಲ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್‌ನಲ್ಲಿ ವ್ಯತ್ಯಯ ಉಂಟಾಗಲಿದೆ. ಏರ್ ಶೋ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಏರ್​ಪೋರ್ಟ್ ಆಡಳಿತ ಹೇಳಿದ್ದು, ಕಾರ್ಯಾಚರಣೆಯ ವೇಳಾಪಟ್ಟಿ ಪ್ರಕಟಿಸಿದೆ. ವಿವರ ಇಲ್ಲಿದೆ.

ಫೆಬ್ರವರಿ 5 ರಿಂದ 29 ಗಂಟೆ ಕಾಲ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಚಾರ ಬಂದ್: ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು ವಿಮಾನ ನಿಲ್ದಾಣ
Ganapathi Sharma
|

Updated on:Feb 04, 2025 | 11:26 AM

Share

ಬೆಂಗಳೂರು, ಫೆಬ್ರವರಿ 4: ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕಾರಣ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಫೆಬ್ರವರಿ 5ರಿಂದ ಮೊದಲುಗೊಂಡು ಒಟ್ಟು 29 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಟೇಕಾಫ್, ಲ್ಯಾಂಡಿಂಗ್ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಮಾಹಿತಿ ನೀಡಿದೆ. ಏರ್ ಶೋ ಕಾರ್ಯಕ್ರಮದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿಮಾನ ಪ್ರಯಾಣಿಕರು ಟೇಕಾಫ್, ಲ್ಯಾಂಡಿಂಗ್ ಸ್ಥಗಿತಗೊಳ್ಳಲಿರುವ ಸಮಯವನ್ನು ಗಮನಿಸಿಕೊಂಡು ಪ್ರಯಾಣದ ಯೋಜನೆ ರೂಪಿಸುವಂತೆ ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಸಲಹೆ ನೀಡಿದೆ.

ಬೆಂಗಳೂರು ಏರ್​ಪೋರ್ಟ್ ಟ್ವೀಟ್

ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತದ ವೇಳಾಪಟ್ಟಿ

ಫೆಬ್ರವರಿ 5ರಿಂದ 15ರ ವರೆಗೆ 10 ದಿನಗಳ ಅವಧಿಯಲ್ಲಿ ವಿವಿಧ ಸಮಯಗಳಲ್ಲಿ ಏರ್​ಪೋರ್ಟ್ ಕಾರ್ಯಾಚರಣೆ ಬಂದ್ ಆಗಿರಲಿದೆ. ದಿನಾಂಕಗಳು ಮತ್ತು ಏರ್​ಪೋರ್ಟ್ ಕಾರ್ಯಾಚರಣೆ ಸ್ಥಗಿತವಾಗಲಿರುವ ಸಮಯದ ಮಾಹಿತಿ ಇಲ್ಲಿದೆ.

  • ಫೆಬ್ರವರಿ 5: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
  • ಫೆಬ್ರವರಿ 6: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
  • ಫೆಬ್ರವರಿ 7: ಬೆಳಿಗ್ಗೆ 09 ರಿಂದ 11 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
  • ಫೆಬ್ರವರಿ 8: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 4:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
  • ಫೆಬ್ರವರಿ 9: ಬೆಳಿಗ್ಗೆ 9 ರಿಂದ 11 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
  • ಫೆಬ್ರವರಿ 10: ಬೆಳಿಗ್ಗೆ 9 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ 3:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
  • ಫೆಬ್ರವರಿ 11-12: ಮಧ್ಯಾಹ್ನ 12:00 ರಿಂದ 2:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
  • ಫೆಬ್ರವರಿ 13-14: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5:00 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.

ಇದನ್ನೂ ಓದಿ: ಬೆಂಗಳೂರು ಏರ್ ಶೋ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಬಂದ್: ಇಲ್ಲಿದೆ ವಿವರ

ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ ಏರ್​ ಶೋ ನಡೆಯಲಿದ್ದು, ಇದು ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. ಮಿಲಿಟರಿ ಮತ್ತು ನಾಗರಿಕ ವಿಮಾನಯಾನ ತಜ್ಞರು, ಉದ್ಯಮ ವಲಯದ ಪ್ರಮುಖರು ಮತ್ತು ತಂತ್ರಜ್ಞಾನ ಉತ್ಸಾಹಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 am, Tue, 4 February 25