AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ತಿಂಗಳ ಬಳಿಕ ಮಹಿಳಾ ಆಯೋಗಕ್ಕೆ ಅಧ್ಯಕ್ಷರ ನೇಮಕ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರದಾಟ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರ್ತಿದ್ದಂತೆ ಆರ್ಥಿಕವಾಗಿ ಮಹಿಳೆಯರಿಗೆ ಆನೆ ಬಲ ಬಂದಿದೆ. ಮಹಿಳೆಯರಿಗೆ ಶಕ್ತಿ ನೀಡುವ ಉದ್ದೇಶದಿಂದಲೇ ಸ್ತ್ರೀ ಶಕ್ತಿ, ಗೃಹಲಕ್ಷ್ಮಿ ಯತಂಹ ಮಹತ್ವದ ಯೋಜನೆ ನೀಡಿದೆ. ಆದರೆ ಅದ್ಯಾಕೋ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಅನ್ನೊ ಆರೋಪ ಶುರುವಾಗಿದೆ.

7 ತಿಂಗಳ ಬಳಿಕ ಮಹಿಳಾ ಆಯೋಗಕ್ಕೆ ಅಧ್ಯಕ್ಷರ ನೇಮಕ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರದಾಟ
ನಾಗಲಕ್ಷ್ಮಿ ಬಾಯಿ , ಮಾಜಿ ಅಧ್ಯಕ್ಷೆ ಮಹಿಳಾ ಆಯೋಗ
Vinay Kashappanavar
| Edited By: |

Updated on:Mar 03, 2024 | 8:46 AM

Share

ಬೆಂಗಳೂರು, ಮಾರ್ಚ್.03: ರಾಜ್ಯದಲ್ಲಿ ವಿವಿಧ ಸ್ವರೂಪದ ಮಹಿಳಾ ದೌರ್ಜ್ಯನ್ಯ ಪ್ರಕರಣಗಳು ಕಳೆದ 7 ತಿಂಗಳಿನಿಂದ ಹೆಚ್ಚುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಬಲಿಯಾಗ್ತೀದ್ದಾರೆ. ಆದರೆ ರಾಜ್ಯದಲ್ಲಿ ಕಳೆದ ಏಳು ತಿಂಗಳಿನಿಂದ ಮಹಿಳಾ ಅಧ್ಯಕ್ಷರ ನೇಮಕಾತಿ ಮಾಡದ ಹಿನ್ನಲೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರದಾಟ ಶುರುವಾಗಿದೆ. ಕಳೆದ ಏಳು ತಿಂಗಳಿನಿಂದ ಆಯೋಗಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ನಿನ್ನೆಯಷ್ಟೇ ಅಧ್ಯಕ್ಷರನ್ನಾಗಿ ನಾಗಲಕ್ಷ್ಮಿ ಚೌಧರಿಯವರನ್ನ ಆಯ್ಕೆ ಮಾಡಿದೆ. ಆದ್ರೆ ಕಳೆದ ಏಳು ತಿಂಗಳಿನಿಂದ ಕೇಸ್ ಏರಿಕೆಯಿಂದಾಗಿ ದೌರ್ಜನ್ಯಕ್ಕೆ ಹಲ್ಲೆಗೊಳಗಾದ ಮಹಿಳೆಯರು ನ್ಯಾಯಕ್ಕಾಗಿ ಪರದಾಡುವಂತಾಗಿದೆ.

ಈ ಹಿಂದೆ ಇದ್ದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವಧಿ ಮುಕ್ತಾಯದ ಬಳಿಕ ಸರ್ಕಾರ ಬರೊಬ್ಬರಿ ಏಳು ತಿಂಗಳು ಕಾಲ ಯಾರನ್ನ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಮಾಡಿರಲ್ಲಿಲ್ಲ. ಇದರಿಂದ ಪ್ರತಿ ನಿತ್ಯ ರಾಜ್ಯದಲ್ಲಿ ದಾಖಲಾಗುವ ದೌರ್ಜನ್ಯ, ಬಾಲ್ಯವಿವಾಹ, ಮಹಿಳೆಯರ ಮೇಲಿನ ಹತ್ಯೆ, ವರದಕ್ಷಣೆ ಕಿರುಕುಳ, ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಪ್ರಕರಣಗಳು, ಕರ್ತವ್ಯದ ಜಾಗದಲ್ಲಿ ಕಿರುಕುಳ ಪ್ರಕರಣಗಳು ಜಾಸ್ತಿಯಾಗಿವೆ. ಕಳೆದ ಆರು ತಿಂಗಳಿನಿಂದ ಮಹಿಳಾ ಆಯೋಗಕ್ಕೆ ಸಾಲು ಸಾಲು ದೂರುಗಳು ಈ ಬಗ್ಗೆ ಕೇಳಿ ಬರ್ತಿವೆ. ಆದರೆ ಆಯೋಗಕ್ಕೆ ಅಧ್ಯಕ್ಷರು ಇಲ್ಲದೆ ಇರುವುದರಿಂದ ಕೇಸ್ ಪೆಡ್ಡಿಂಗ ಉಳಿದುಕೊಂಡಿವೆ. ಹೀಗಾಗಿ ದೌರ್ಜನ್ಯ ಹಲ್ಲೆಗೆ ಒಳಗಾದ ಮಹಿಳೆಯರು ಪರದಾಡುವಂತಾಗಿದೆ.

ಕಳೆದ 7 ತಿಂಗಳಿಂದ ಮಹಿಳಾ ಆಯೋಗಕ್ಕೆ ಬಂದ ಒಟ್ಟು ದೂರುಗಳು -1749. 1749 ಪ್ರಕರಣಗಳಲ್ಲಿ 1449 ಪ್ರಕರಣ ಮುಕ್ತಾಯ. 291 ಪ್ರಕರಣಗಳು ಪೆಡ್ಡಿಂಗ್. ಪ್ರತಿ ನಿತ್ಯ 10ಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗುತ್ತಿದೆ. ಕಳೆದ 6 ತಿಂಗಳಿನಿಂದ 100ಕ್ಕು ಹೆಚ್ಚು ಪ್ರಕರಣಗಳು ಅಧ್ಯಕ್ಷರಿಲ್ಲದೆ ಪೆಡ್ಡಿಂಗ್. ಕೌಟುಂಬಿಕ ದೌರ್ಜನ್ಯ – 350, ರಕ್ಷಣೆ -481, ಮಹಿಳೆಯರ ಮೇಲಿನ ಹತ್ಯೆ -97, ಸೈಬರ್ ಕ್ರೈಂ ಇತರೆ -580, ವರದಕ್ಷಣೆ ಕಿರುಕುಳ -97, ಕೌಟುಂಬಿಕ ಕಲಹ -23.

ಇದನ್ನೂ ಓದಿ: ಕಾಫಿನಾಡಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶ; ಖಾಕಿ ಹೈ ಅಲರ್ಟ್, ಹಲವೆಡೆ ಸಂಚಾರ ಬಂದ್

ಇನ್ನು ನಿತ್ಯ ಮಹಿಳಾ ಮಣಿಗಳು ಆಯೋಗದ ಕಚೇರಿಗೆ ಬಂದರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೋರ್ಟ್ ಕೇಸ್ ಮೊರೆ ಹೋಗುತ್ತಿದ್ದು ಅನ್ಯಾಯಕ್ಕೊಳಗಾದ ಮಹಿಳೆಯರು ಪರದಾಡುವಂತಾಗಿತ್ತು. ಈಗ ಸರ್ಕಾರ ಆಯೋಗಕ್ಕೆ ನಾಗಲಕ್ಷ್ಮಿ ಚೌಧರಿ ಅನ್ನೊವರನ್ನ ಆಯ್ಕೆ ಮಾಡಿದೆ. ಆದ್ರೆ ಇವರು ಈ ಸ್ಥಾನಕ್ಕೆ ಅಹರ್ತೆ ಪಡೆದಿಲ್ಲ. ಕಾನೂನಿನ ಜ್ಞಾನ ಇಲ್ಲದವರನ್ನ ಸರ್ಕಾರ ಆಯೋಗಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಬಗ್ಗೆಯೂ ಆರೋಪ ಕೇಳಿ ಬರ್ತಿದೆ.

ಒಟ್ನಲ್ಲಿ ಮಹಿಳಾ ಆಯೋಗಕ್ಕೆ ಸರ್ಕಾರ ಹೊಸ ಅಧ್ಯಕ್ಷರನ್ನ ಆಯ್ಕೆ ಮಾಡಿದೆ. ಆದ್ರೆ ಕಳೆದ ಏಳು ತಿಂಗಳಿನಿಂದ ಅಧ್ಯಕ್ಷರಿಲ್ಲದೇ ಇರುವುದರಿಂದ ಕೆಲವು ಗಂಭೀರ ಪ್ರಕರಣದ ನಿರ್ಣಯ ಹಾಗೂ ಮೇಲ್ವಚಾರಣೆ ಕಷ್ಟ ಎದುರಾಗಿದೆ. ಈಗ ಹೊಸ ಅಧ್ಯಕ್ಷರು ಸೋಮವಾರ ಅಧಿಕಾರ ಪಡೆಯುತ್ತಿದ್ದು ಯಾವ ರೀತಿ ಸಮಸ್ಯೆ ಸರಿಪಡಿಸುತ್ತಾರೆ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:42 am, Sun, 3 March 24

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?