ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಕೇಸ್: ಶಿವರಾತ್ರಿಯಂದೇ ಹೋಟೆಲ್ ಪುನಾರಂಭವೆಂದ ಮಾಲೀಕ ರಾಘವೇಂದ್ರ ರಾವ್
ಫುಡ್ಪ್ರಿಯರ ಅಚ್ಚುಮೆಚ್ಚಿನ ತಾಣ ಫೇಮಸ್ ಹೋಟೆಲ್ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಬೆಂಗಳೂರಿಗರು ಅಕ್ಷರಶಃ ದಂಗಾಗಿ ಹೋಗಿದ್ದಾರೆ. ಸದ್ಯ ಈ ವಿಚಾರವಾಗಿ ರಾಮೇಶ್ವರಂ ಕೆಫೆ ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮುಂದಿನ ಶುಕ್ರವಾರ ಶಿವರಾತ್ರಿಯಂದು ಹೋಟೆಲ್ ಪುನಾರಂಭವಾಗುತ್ತೆ. ಬಾಂಬ್ ಸ್ಫೋಟದ ಕೃತ್ಯವನ್ನು ಭಾರತೀಯರೆಲ್ಲರೂ ಖಂಡಿಸಬೇಕಿದೆ. ರಾಮೇಶ್ವರಂ ಕೆಫೆ ಹೋಟೆಲ್ ನಿನ್ನೆ, ಮೊನ್ನೆ ಹುಟ್ಟಿದ್ದಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು, ಮಾರ್ಚ್ 2: ನಗದರಲ್ಲಿ ಹಾಡಹಗಲೇ ಆಗಿದ್ದ ಬಾಂಬ್ ಸ್ಫೋಟ (Rameshwaram Cafe Bomb Blast Case) ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಘಟನೆ ಸಂಭವಿಸಿ ಒಂದು ದಿನ ಕಳೆದರೂ ಆರೋಪಿ ಪತ್ತೆಯ ಸುಳಿವಿಲ್ಲ. ಪ್ರಕರಣದ ತನಿಖೆಗೆ 8 ರಿಂದ 10 ತಂಡ ರಚಿರುವ ಪೊಲೀಸರು ಆರೋಪಿಯ ಬೇಟೆಗೆ ಇಳಿದಿದ್ದಾರೆ. ಸದ್ಯ ರಾಮೇಶ್ವರ್ ರಾವ್ ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಶುಕ್ರವಾರ ಘಟನೆ ಸಂಭವಿಸಿದೆ. ಶಿವರಾತ್ರಿಯ ಮುಂದಿನ ಶುಕ್ರವಾರ ರಾಮೇಶ್ವರಂ ಪುನರ್ ಜನ್ಮವಾಗುತ್ತೆ. ನಮ್ಮ ಸಂಸ್ಥೆ ವತಿಯಿಂದ ಕರ್ನಾಟಕದ ಜನತೆಗೆ ವಂದನೆ ಹೇಳುತ್ತೇನೆ. ರಾಮೇಶ್ವರಂ ಕೆಫೆ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. 2012 ರಲ್ಲಿ ಕುಮಾರಪಾರ್ಕ್ ಸಮೀಪ ಶುರು ಮಾಡಿದೇವೆ. ತುಂಬಾ ಸವಾಲುಗಳು ನಮಗೆ ಎದುರಾಗಿದೆ. ತಲೆತಲಾಂತರವಾಗಿ ನಮಗೆ ಕಷ್ಟಗಳು ಬರುತ್ತಿದ್ದು ಎದುರಿಸುತ್ತಿದ್ದೇವೆ. ನಾವು ಎಪಿಜೆ ಅಬ್ದುಲ್ ಕಲಾಂ ನಂಬಿದ್ದೇವೆ. ಅವರ ಜನ್ಮಸ್ಥಳ ರಾಮೇಶ್ವರಂ ಎಂದಿದ್ದಾರೆ.
ಭಾರತೀಯರೆಲ್ಲರೂ ಬಾಂಬ್ ಸ್ಫೋಟಿಸಿದ ಕೃತ್ಯವನ್ನು ಖಂಡಿಸಬೇಕಿದೆ
ಕೋಲಾರ ತಾಲೂಕುಮಾಲೂರಿನ ಹುಳದೇನಹಳ್ಳಿ ಗ್ರಾಮದವನು ನಾನು. ರಾಮೇಶ್ವರಂ ಪ್ರಾರಂಭಕ್ಕೂ ಮುನ್ನ ಹಲವು ಹೊಟೇಲ್ಗಳಲ್ಲಿ ಕೆಲಸ ಮಾಡಿದ್ದೇವೆ. ಕಲ್ಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದೇವೆ. ಭಾರತೀಯರೆಲ್ಲರೂ ಇಂತಹ ಕೃತ್ಯವನ್ನು ಖಂಡಿಸಬೇಕಿದೆ. ಎಲ್ಲಾ ಗಣ್ಯರು ಪೋಲಿಸರು ನಿನ್ನೆಯಿಂದಲೂ ನಮ್ಮ ಜೊತೆಗಿದ್ದಾರೆ. ಪ್ರತಿಯೊಬ್ಬರು ಬಂದು ಶುಕ್ರವಾರ ರೀ ಓಪನ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿ ಪ್ಲ್ಯಾನ್: FSL ವರದಿ ಬಹಿರಂಗ
ಯಾವುದೇ ವ್ಯವಹಾರಿಕ ದ್ವೇಷದಿಂದ ಕೃತ್ಯ ನಡೆದಿಲ್ಲ. ಹೋಟೆಲ್ ಬ್ಯುಸಿನೆಸ್ ಮಾಡುವವರು ಈ ರೀತಿ ಕೃತ್ಯ ಮಾಡುವುದಿಲ್ಲ. ಅನ್ ಐಡೆಂಟಿಪೈಡ್ ಐಟಂ ಆಗಿದ್ದರೆ ನಾವು ಅದನ್ನು ಆ್ಯಪ್ನಲ್ಲಿ ಹಾಕುತ್ತಿದೆವು. ನಿನ್ನೆ ಘಟನೆ ವೇಳೆ ನಮ್ಮ ಸಿಬ್ಬಂದಿ ನೋಟಿಸ್ ಬರಲು ಗ್ರಾಹಕರ ದಟ್ಟಣೆಯಿತ್ತು ಎಂದಿದ್ದಾರೆ.
ಚಿಕಿತ್ಸೆ ವೆಚ್ಚ ನಾವೇ ಭರಿಸುತ್ತೇವೆ
ನವಂಬರ್ನಲ್ಲಿ ಬಸವೇಶ್ವರ ನಗರದ ಬ್ರಾಂಚ್ನಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಕೂಡಲೆ ಪೊಲೀಸರ ಗಮನಕ್ಕೆ ತಂದಿದ್ದೇವೆ. ಅದು ಯಾವುದೇ ಸಂಶಯಾಸ್ಪದವಾಗಿರಲಿಲ್ಲ. ಪಂಚೆ ಮತ್ತು ವಸ್ತ್ರ ಇತ್ತು ಅಷ್ಟೇ. ನಾವು ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಲಿದ್ದೇವೆ. ಸರ್ಕಾರ ಕೂಡ ಹೇಳಿದೆ ನಾವು ಇರುತ್ತೇವೆ ಅಂತ. ಹಾಗಾಗಿ ನಾವೇ ಚಿಕಿತ್ಸೆ ವೆಚ್ಚ ಭರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಖಡಕ್ ಸೂಚನೆಗಳಿವು
ಆರೋಪಿ ಟೈಮರ್ ಅಳವಡಿಸಿ, IED ಬಾಂಬ್ ಸ್ಫೋಟಿಸಿದ್ದಾರೆ. ಸ್ಥಳದಲ್ಲಿ ಬ್ಯಾಟರಿ, ನಟ್ಗಳು ಪತ್ತೆಯಾಗಿವೆ. ಹೋಟೆಲ್ನ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಗ್ರಾನೇಟ್ ಕಲ್ಲುಗಳು ಪುಡಿ ಪುಡಿಯಾಗಿವೆ. ಮಹಿಳೆ ಸೇರಿ 9 ಮಂದಿ ಗಾಯಗೊಂಡಿದ್ದಾರೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಒಂದೇ ಕಂಪನಿಯ ಐವರು ಸಹೋದ್ಯೋಗಿಗಳು, ಕೆಫೆಯ ಮೂವರು ಸಿಬ್ಬಂದಿ ಸುಟ್ಟ ಗಾಯಗಳಿಂದ ನರಳಾಡಿದ್ದಾರೆ. ಜನರು ಬಟ್ಟೆ, ಬರೆಯೆಲ್ಲ ಸುಟ್ಟು ಹೋಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.