ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ತಿಂಥಣಿ ಮೌನೇಶ್ವರ ಜಾತ್ರೆ: ದೂಳಗಾಯಿ ಅರ್ಪಿಸಿ ಹರಕೆ ತೀರಿಸಿದ ಭಕ್ತರು
ಕಲ್ಯಾಣ ಕರ್ನಾಟಕ ಭಾಗದಲ್ಲೇ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಿಂಥಣಿ ಮೌನೇಶ್ವರ ಜಾತ್ರೆ ಈ ಬಾರಿ ಅದ್ದೂರಿಯಾಗಿ ನಡೆಯಿತ್ತು. ದಕ್ಷಿಣದ ಕಾಶಿ ಎಂದು ಕರೆಸಿಕೊಳ್ಳುವ ತಿಂಥಣಿ ಕ್ಷೇತ್ರದಲ್ಲಿ ಮೌನೇಶ್ವರರ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಸುಮಾರು 5 ದಿನಗಳ ಕಾಲ ನಡೆಯುವ ಈ ಜಾತ್ರೆ ಪ್ರತಿ ದಿನವು ವಿಶೇಷವಾಗಿರುತ್ತೆ.
ಯಾದಗಿರಿ, ಮಾರ್ಚ್ 2: ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಸಿದ್ಧ ಜಾತ್ರೆ. ಐದು ದಿನಗಳ ಕಾಲ ನಡೆಯುವ ಆ ಜಾತ್ರೆಗೆ ಲಕ್ಷಾಂತರ ಭಕ್ತರ ದಂಡೆ ಹರಿದು ಬರುತ್ತೆ. ಹಿಂದು-ಮುಸ್ಲಿಂ ಭಾವೈಕ್ಯತೆ ಹೆಸರಾಗಿರುವ ಜಾತ್ರೆಯಲ್ಲಿ ಕೊನೆ ದಿನ ದೂಳಗಾಯಿ ಹೊಡೆಯುವುದು ವಿಶೇಷ. ಭಕ್ತರು ನೈವೇದ್ಯದ ರೂಪದಲ್ಲಿ ದೇವರಿಗೆ ದೂಳಗಾಯಿ ಅರ್ಪಿಸುತ್ತಾರೆ. ಕೆಳಗೆ ಮೌನೇಶ್ವರ (Thinthani Mouneshwara) ಮೇಲೆ ಮೌನೋದ್ದಿನ್ ದರ್ಶನವನ್ನು ಭಕ್ತರು ಪಡೆಯುತ್ತಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಿಂಥಣಿ ಮೌನೇಶ್ವರ ಜಾತ್ರೆ ಈ ಬಾರಿ ಅದ್ದೂರಿಯಾಗಿ ನಡೆಯಿತ್ತು. ದಕ್ಷಿಣದ ಕಾಶಿ ಎಂದು ಕರೆಸಿಕೊಳ್ಳುವ ತಿಂಥಣಿ ಕ್ಷೇತ್ರದಲ್ಲಿ ಮೌನೇಶ್ವರರ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಸುಮಾರು 5 ದಿನಗಳ ಕಾಲ ನಡೆಯುವ ಈ ಜಾತ್ರೆ ಪ್ರತಿ ದಿನವು ವಿಶೇಷವಾಗಿರುತ್ತೆ. ಅದರಲ್ಲೂ ಕೊನೆ ದಿನವಂತು ಲಕ್ಷಾಂತರ ಭಕ್ತರ ದಂಡೆ ಹರಿದು ಬರುತ್ತೆ. ಕೊನೆ ದಿನ ಮೌನೇಶ್ವರ ಸನ್ನಿಧಾನದಲ್ಲಿ ದೂಳಗಾಯಿ ಹೊಡೆಯೋದೆ ವಿಶೇಷವಾಗಿರುತ್ತೆ.
ದೂಳಗಾಯಿ ಹೊಡೆಯುವ ಮೂಲಕ ಭಕ್ತಿ ಪರಾಕಾಷ್ಠೆ
ಈಡಿಗಾಯಿನ್ನ ಹೊಡೆಯೋದ್ದಕ್ಕೆ ಇಲ್ಲಿ ವಿಶೇಷ ರೀತಿಯಲ್ಲಿ ದೂಳಗಾಯಿ ಎಂದು ಕರೆಯುತ್ತಾರೆ. ಇಲ್ಲಿಗೆ ಬರುವ ಭಕ್ತರು ಮೌನೇಶ್ವರನಿಗೆ ನೈವೇದ್ಯದ ರೂಪದಲ್ಲಿ ದೂಳ ಹೊಡೆಯುತ್ತಾರೆಯ ಇನ್ನು ಲಕ್ಷಾಂತರ ಭಕ್ತರು ಮೌನೇಶ್ವರರಲ್ಲಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಇನ್ನು ಹರಕೆ ಈಡೇರಿದ ಬಳಿಕ ಸಾವಿರಾರು ಭಕ್ತರು ದೂಳಗಾಯಿನ್ನ ಹೊಡೆಯುವ ಮೂಲಕ ಭಕ್ತಿ ಪರಾಕಾಷ್ಠೆಯನ್ನ ಮೆರೆಯುತ್ತಾರೆ.
ಇದನ್ನೂ ಓದಿ: ಪ್ರಾಮಾಣಿಕವಾಗಿ ಜಾತಿ ಗಣತಿ ಮಾಡಿಸಿಲ್ಲ ಎಂದ ಜಯಮೃತ್ಯುಂಜಯ ಸ್ವಾಮೀಜಿ
ಈ ಜಾತ್ರೆ ಹಿಂದು ಮುಸ್ಲಿಂ ಭಾವೈಕ್ಯತೆಯಿಂದ ಕೂಡಿರುವ ಜಾತ್ರೆಯಾಗಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರು ಕೂಡ ಆಗಿದೆ. ಇದಕ್ಕೆ ಕಾರಣ ಅಂದರೆ ಈ ಜಾತ್ರೆ ಬಂದ ಲಕ್ಷಾಂತರ ಭಕ್ತರು ಮೌನೇಶ್ವರ ಮತ್ತು ಮೌನೋದ್ದಿನರ ದರ್ಶನವನ್ನ ಪಡೆಯುತ್ತಾರೆ. ಈ ಮೌನೇಶ್ವರ ದೇವಸ್ಥಾನದ ಒಳಗೆ ಪ್ರವೇಶ ಮಾಡಿದರೆ ಸಾಕು ಭಕ್ತರು ಮೌನೇಶ್ವರರ ದರ್ಶನ ಪಡೆಯುತ್ತಾರೆ. ಬಳಿಕ ಮೌನೇಶ್ವರ ಗರ್ಭಗುಡಿ ಮೇಲೆ ಮೇಲ್ಭಾಗದಲ್ಲಿಯೇ ಮೌನೋದ್ದಿನ್ ದರ್ಗಾವಿದೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರು ಮೌನೇಶ್ವರರ ದರ್ಶನ ಪಡೆದ ಬಳಿಕ ಮೌನೋದ್ದಿನ ದರ್ಶನ ಕೂಡ ಪಡೆಯುತ್ತಾರೆ.
ಗರ್ಭ ಗುಡಿಯ ಮೇಲೆ ಮೌನೋದ್ದಿನರ ದರ್ಗಾ
ಹಿಂದೂ-ಮುಸ್ಲಿಂ ಎನ್ನದೆ ಎಲ್ಲಾ ಜಾತಿ ಜನಾಂಗದವರು ಮೌನೇಶ್ವರ ಮತ್ತು ಮೌನೋದ್ದಿನ್ ದರ್ಶನವನ್ನ ಪಡೆಯುತ್ತಾರೆ. ಹಿಂದಿನ ಕಾಲದಲ್ಲಿ ಮೌನೇಶ್ವರರು ಈ ಸ್ಥಳಕ್ಕೆ ಬಂದಾಗ ನೆಲಸುವುದಕ್ಕೆ ಜಾಗವಿರಲಿಲ್ಲ. ಇದೆ ಕಾರಣಕ್ಕೆ ಆಗ ಮೌನೋದ್ದಿನ್ ಮೌನೇಶ್ವರರಿಗೆ ನೆಲಸುವುದಕ್ಕೆ ಜಾಗ ನೀಡಿದರಂತೆ. ಇದೆ ಕಾರಣಕ್ಕೆ ಮೌನೇಶ್ವರರು ತಮಗೆ ಜಾಗ ಕೊಟ್ಟ ಮೌನೋದ್ದಿನರನ್ನ ತಮ್ಮ ತಲೆ ಮೇಲೆ ಕುರಿಸಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಮೌನೇಶ್ವರರ ಗರ್ಭ ಗುಡಿಯ ಮೇಲೆ ಮೌನೋದ್ದಿನರ ದರ್ಗಾ ಹಾಗೂ ಮಜಹಾರ್ ಇದೆ.
ಇದನ್ನೂ ಓದಿ: ವಿದೇಶದಿಂದ ಹಾರಿ ಬರುತಿವೆ ಹಕ್ಕಿಗಳು -ಯಾದಗಿರಿಯ ಲುಂಬಿನಿ ವನದ ಕೆರೆಯಲ್ಲಿ ಸಂಭ್ರಮ ಮನೆ ಮಾಡಿದೆ
ಮೌನೇಶ್ವರರಿಗೆ ಪೂಜೆ ಮಾಡಿದರೆ ಮೌನೋದ್ದಿನರ ಮಜಹಾರ್ ಮೇಲೆ ಹಸಿರುವ ಬಣ್ಣದ ಬಟ್ಟೆ ಹೊದಿಸಿ ಹೂವುಗಳನ್ನ ಅರ್ಪಿಸಲಾಗುತ್ತೆ. ಸುರಪುರದ ರಾಜ ಮನೆತನವಾದ ಗೋಸಲ ವಂಶಸ್ಥರ ಮನೆಯಿಂದ ಪಲ್ಲಕಿ ಹೊರಟು ಸುರಪುರದ ಕಾಳಿಕಾ ದೇವಸ್ಥಾನಕ್ಕೆ ತೆರಳುತ್ತೆ. ಕಾಳಿಗೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ಜಾತ್ರೆಯ ಆರಂಭದ ದಿನದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದದ ವ್ಯವಸ್ಥೆಯನ್ನ ಮಾಡಲಾಗುತ್ತೆ. ಕಾಳಿಕಾ ದೇವಸ್ಥಾನದಿಂದ ಹೊರಟ ಮೌನೇಶ್ವರನ ಪಲ್ಲಕಿ ಜಾತ್ರೆಯ ಕೊನೆ ದಿನ ಮೌನೇಶ್ವರ ಆಸ್ತಾನಕ್ಕೆ ಬಂದು ತಲಪುತ್ತೆ. ಹೀಗಾಗಿ ಜಾತ್ರೆ ಕೊನೆ ದಿನ ಮೌನೇಶ್ವರನ ಪಲ್ಲಕಿ ಗರ್ಭ ಗೂಡಿ ತಲುಪಿದ ಬಳಿಕ ಜಾತ್ರೆಗೆ ತೆರೆ ಎಳೆಯಲಾಗುತ್ತೆ.
ಹಿಂದೂ-ಮುಸ್ಲಿಂ ಅಂತ ಬಡಿದಾಡಿಕೊಳ್ಳುವ ಕಾಲದಲ್ಲಿ ಈ ಕ್ಷೇತ್ರದಲ್ಲಿ ಭಾವೈಕ್ಯತೆಯಿಂದ ಜಾತ್ರೆಯನ್ನ ಮಾಡಲಾಗುತ್ತೆ. ಸರ್ವ ಧರ್ಮದವರು ಬಂದು ದೇವರಿಗೆ ನೈವೇದ್ಯ ಅರ್ಪಿಸಿ ದರ್ಶನ ಪಡೆಯೋದು ವಿಶೇಷವಾಗಿರುತ್ತೆ. ಜೊತೆಗೆ ನಾಡು ಹಾಗೂ ದೇಶದ ಜನರಿಗೆ ಮಾದರಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:10 pm, Sat, 2 March 24