AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ನಡೆದಿದೆ ನಿರ್ಮಾಣ ಕಾರ್ಯ: ಸ್ಥಳೀಯರ ಆಕ್ರೋಶ, ಅಧಿಕಾರಿಗಳು ಮೌನ

ಯಾದಗಿರಿ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾ ಕಂಪನಿಗಳು ಆಂಧ್ರ ಮೂಲದ್ದಾಗಿವೆ. ಸ್ಥಳೀಯವಾಗಿ ಮರಳು ಇದ್ದರೂ ಸಹ ಇಲ್ಲಿ ಸರ್ಕಾರಕ್ಕೆ ರಾಯಲ್ಟಿ ಕಟ್ಟಬೇಕಾಗುತ್ತೆ ಅಂತ ಅಕ್ರಮವಾಗಿ ಬೇರೆ ಕಡೆಯಿಂದ ತರಲಾಗುತ್ತಿದೆ. ಅಷ್ಟೇ ಅಲ್ಲ ಮರಳಿನ ಜೊತೆಗೆ ಜಲ್ಲಿ ಕಲ್ಲು, ಕಬ್ಬಿಣದ ರಾಡ್ ‌ನಿಂದ ಹಿಡಿದು ಕಟ್ಟಡ ಕಾಮಗಾರಿಗೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನ ಬೇರೆ ಕಡೆಯಿಂದ ತಂದು ಕೆಲಸ ಮಾಡಲಾಗುತ್ತಿದೆ.

ಯಾದಗಿರಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ನಡೆದಿದೆ ನಿರ್ಮಾಣ ಕಾರ್ಯ: ಸ್ಥಳೀಯರ ಆಕ್ರೋಶ, ಅಧಿಕಾರಿಗಳು ಮೌನ
ಯಾದಗಿರಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ನಡೆದಿದೆ ನಿರ್ಮಾಣ ಕಾರ್ಯ
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on:Mar 01, 2024 | 1:20 PM

ಆ ಪ್ರದೇಶದಲ್ಲಿ ಸರ್ಕಾರ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ 12 ವರ್ಷಗಳ ಹಿಂದೆ ಮೂರು ಸಾವಿರಕ್ಕೂ ಅಧಿಕ ಎಕರೆ ಜಮೀನು ಖರೀದಿ‌ ಮಾಡಿದೆ. ಈಗ ಅದೇ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗುತ್ತಿವೆ. ಇದೇ ಕೈಗಾರಿಕೆಗಳ ಸ್ಥಾಪನೆಗಾಗಿ ಅಕ್ರಮವಾಗಿ ವಸ್ತುಗಳನ್ನ ಸಾಗಿಸುವ ಆರೋಪ ಕೇಳಿ ಬಂದಿದೆ. ನಮ್ಮೂರಿನಲ್ಲೇ ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳಿಗೆ ಬೇರೆ ರಾಜ್ಯಗಳಿಂದ ವಸ್ತುಗಳನ್ನ ಅಕ್ರಮವಾಗಿ ತರುತ್ತಾ ಇರೋದ್ದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ‌ ತಲೆ‌ ಎತ್ತುತ್ತಿವೆ ಕೈಗಾರಿಕೆಗಳು.. ಹೊಸ ಕಟ್ಟಡಗಳ‌ ಮೇಲೆ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಹೊಸ ಕಟ್ಟಡ ಕಾಮಗಾರಿಗೆ ಅಕ್ರಮ ಮರಳು ಬಳಕೆ ಆಗ್ತಾಯಿದೆ (Illegal construction work). ಕೈಗಾರಿಕೆಗಳ ವಿರುದ್ಧ ಜಿಲ್ಲೆಯ ಜನ (localities) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಸ್ ಈ ವಿದ್ಯಮಾನಗಳು ಕಂಡುಬಂದಿರುವುದು ಯಾದಗಿರಿ ತಾಲೂಕಿನ ಕಡೆಚೂರ್ ಬಾಡಿಯಾಳ್ ಕೈಗಾರಿಕಾ ಪ್ರದೇಶದಲ್ಲಿ (Yadgir industrial area).

ಹೌದು ಹನ್ನೆರಡು ವರ್ಷಗಳ ಹಿಂದೆ ಈ ಗ್ರಾಮಗಳ ಬಳಿ ರಾಜ್ಯ ಸರ್ಕಾರವು ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ರೈತರಿಂದ ಮೂರು ಸಾವಿರ ಎಕರೆಗೂ ಅಧಿಕ ಭೂಮಿಯನ್ನ ಸ್ವಾಧೀನ ಪಡಿಸಿಕೊಂಡಿದೆ. ಇದೇ ಪ್ರದೇಶದಲ್ಲಿ ಈಗ ಕೆಲ ವರ್ಷಗಳಿಂದ ಕೈಗಾರಿಕಾ ಕಂಪನಿಗಳು ತಲೆ ಎತ್ತುತ್ತಿವೆ. ಅದರಲ್ಲೂ ಎರಡು ವರ್ಷಗಳಿಂದ ವೇಗವಾಗಿ ಈ ಪ್ರದೇಶ ಬೆಳೆಯುತ್ತಿದೆ. ಆದ್ರೆ ಕೈಗಾರಿಕಾ ಪ್ರದೇಶಗಳಲ್ಲಿ ಕಂಪನಿಗಳ ಕಟ್ಟಡಗಳ ನಿರ್ಮಾಣಕ್ಕೆ ಅಕ್ರಮವಾಗಿ ಬೇರೆ ಕಡೆಯಿಂದ ವಸ್ತುಗಳನ್ನ ತಂದು ಕಾಮಗಾರಿ ನಡೆಸಲಾಗುತ್ತಿದೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ನಷ್ಟ ಆಗುವಂತೆ ಮಾಡಲಾಗುತ್ತಿದೆ ಅಂತ ಆರೋಪಿಸಲಾಗುತ್ತಿದೆ.

Also Read: ರಾಜ್ಯದಲ್ಲಿ ತಲೆ ಎತ್ತಿದ ವಿದೇಶಿ ಅಡಿಕೆ ಮಾಫಿಯಾ, ಅಕ್ರಮ ಅಮದು ತಡೆ ಕೋರಿ ಪ್ರಧಾನಿಗೆ ಪತ್ರ

ಕಳೆದೊಂದು ವರ್ಷದಿಂದ ಸುಮಾರು ಹತ್ತಕ್ಕೂ ಅಧಿಕ ಕಂಪನಿಗಳ‌ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಎಲ್ಲಾ ಕಂಪನಿಗಳು ಆಂಧ್ರ ಮೂಲದ್ದಾಗಿವೆ. ಕಂಪನಿಯ ಮಾಲೀಕರು ಕಟ್ಟಡ ನಿರ್ಮಾಣಕ್ಕೆ ತಮ್ಮದೆ ರಾಜ್ಯದಿಂದ ಅಕ್ರಮವಾಗಿ ಮರಳು ತಂದು ಕಾಮಗಾರಿ ನಡೆಸುತ್ತಿದ್ದಾರೆ. ಸ್ಥಳೀಯವಾಗಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಬೇರೆ ಕಡೆಯಿಂದ ಲೋಡ್ ಗಟ್ಟಲೆ ಅಕ್ರಮವಾಗಿ ಮರಳು ತಂದು ಕೆಲಸ ಮಾಡಿಸುತ್ತಿದ್ದಾರೆ.

Also Read: 30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು

ಸ್ಥಳೀಯವಾಗಿ ಮರಳು ಇದ್ದರೂ ಸಹ ಇಲ್ಲಿ ಸರ್ಕಾರಕ್ಕೆ ರಾಯಲ್ಟಿ ಕಟ್ಟಬೇಕಾಗುತ್ತೆ ಅಂತ ಅಕ್ರಮವಾಗಿ ಬೇರೆ ಕಡೆಯಿಂದ ತರಲಾಗುತ್ತಿದೆ. ಅಷ್ಟೇ ಅಲ್ಲ ಮರಳಿನ ಜೊತೆಗೆ ಜಲ್ಲಿ ಕಲ್ಲು, ಕಬ್ಬಿಣದ ರಾಡ್ ‌ನಿಂದ ಹಿಡಿದು ಕಟ್ಟಡ ಕಾಮಗಾರಿಗೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನ ಬೇರೆ ಕಡೆಯಿಂದ ತಂದು ಕೆಲಸ ಮಾಡಲಾಗುತ್ತಿದೆ.

ಇನ್ನು ಸ್ಥಳೀಯವಾಗಿ ಖರೀದಿ ಮಾಡಿದ್ರೆ ಜಿಲ್ಲೆಗೆ ಲಾಭ ಆಗುತ್ತೆ ಆದ್ರೆ ಯಾರ ಪರವಾನಿಗೆ ಪಡೆಯದೆ ಅಕ್ರಮವಾಗಿ ತರಲಾಗುತ್ತಿದೆ. ಇನ್ನು ಇದಕ್ಕೆ ಸ್ಥಳೀಯ ಪೊಲೀಸ್ ಹಾಗೂ ಜಿಲ್ಲಾಡಳಿತ ಸಾಥ್ ನೀಡುತ್ತಿದೆ. ಜೊತೆಗೆ ಸ್ಥಳೀಯ ಶಾಸಕರು ಸಹ ಇವರ ಜೊತೆ‌ ಶಾಮೀಲಾಗಿದ್ದಾರೆ ಅಂತ ಜನ ಆರೋಪಿಸುತ್ತಿದ್ದಾರೆ. ಒಟ್ನಲ್ಲಿ ಅಕ್ರಮವಾಗಿ ವಸ್ತುಗಳನ್ನ ತರಸಿಕೊಂಡು ಇಲ್ಲಿ ಆಂಧ್ರ ಮೂಲದ ಉದ್ಯಮಿದಾರರು ಜಿಲ್ಲೆಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಮೌನಕ್ಕೆ ಶರಣಾಗದೆ ಕ್ರಮಕ್ಕೆ ಮುಂದಾಗಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Fri, 1 March 24